ಬೆಂಗಳೂರು : ಕರ್ನಾಟಕ ಪ್ರಾದೇಶಿಕ ಕ್ಯಾಥೋಲಿಕ್ ಥಿಂಕ್ ಟ್ಯಾಂಕ್ (KRCTT) ತನ್ನ ವಾರ್ಷಿಕ ಮಹಾಸಭೆಯನ್ನು (AGM) ಬುಧವಾರ ಇಲ್ಲಿನ ಪ್ರಾದೇಶಿಕ ಪಾಸ್ಟರಲ್ ಸೆಂಟರ್ (KROSS) ‘ಸುಬೋಧನ’ದಲ್ಲಿ ಯಶಸ್ವಿಯಾಗಿ ನಡೆಸಿತು.

ಈ ಮಹಾಸಭೆಯಲ್ಲಿ ರಾಜ್ಯದ ಎಲ್ಲಾ 13 ಬಿಷಪ್‌ಗಳು, ಇಬ್ಬರು ಸಹಾಯ ಬಿಷಪ್‌ಗಳು ಮತ್ತು ವಿವಿಧ ಡಯಾಸಿಸ್‌ಗಳ ಪ್ರತಿನಿಧಿಗಳು ಪಾಲ್ಗೊಂಡು, ಕ್ಯಾಥೋಲಿಕ್ ಸಮುದಾಯ ಮತ್ತು ಸಮಾಜ ಎದುರಿಸುತ್ತಿರುವ ಪ್ರಮುಖ ವಿದ್ಯಮಾನಗಳ ಕುರಿತು ಜಂಟಿ ಚಿಂತನೆ ನಡೆಸಿದರು.
ಬೆಂಗಳೂರಿನ ಆರ್ಚ್ ಬಿಷಪ್ ಹಾಗೂ KRCTT ಮಾರ್ಗದರ್ಶಕರಾದ ಅತಿ ವಂದನೀಯ ಡಾ. ಪೀಟರ್ ಮಚಾದೋ ಅವರು ದಿಕ್ಸೂಚಿ ಭಾಷಣ ಮಾಡಿ, ಚರ್ಚ್ ಮತ್ತು ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಒಗ್ಗಟ್ಟಿನಿಂದ ಹಾಗೂ ಸಹಯೋಗದೊಂದಿಗೆ ಸ್ಪಂದಿಸಬೇಕಾದ ಅಗತ್ಯತೆಯನ್ನು ಒತ್ತಿಹೇಳಿದರು.

KRCTT ಅಧ್ಯಕ್ಷರಾದ ಶ್ರೀ ರಾಯ್ ಕ್ಯಾಸ್ಟೆಲಿನೋ ಅವರು ಮಾತನಾಡಿ, ವಿವಿಧ ಡಯಾಸಿಸ್ ಮಟ್ಟದಲ್ಲಿ ಕ್ಯಾಥೋಲಿಕ್ ಥಿಂಕ್ ಟ್ಯಾಂಕ್‌ಗಳ ರಚನೆಯ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ವ್ಯವಸ್ಥಿತ ದಾಖಲೀಕರಣ, ಸಿದ್ಧತೆ ಮತ್ತು ಪರಿಣಾಮಕಾರಿ ಸಂವಹನಕ್ಕೆ ಅವರು ಒತ್ತು ನೀಡಿದರು.
ಪುಣೆಯ ಮೈನಾರಿಟಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (MICCCI) ಅಧ್ಯಕ್ಷರಾದ ಶ್ರೀ ಲ್ಯೂಕಾಸ್ ಆಂಟನಿ ಕೆದಾರಿ ಅವರು ಸಮುದಾಯದಲ್ಲಿ ಉದ್ಯಮಶೀಲತೆ ಮತ್ತು ಆರ್ಥಿಕ ಸಬಲೀಕರಣದ ಮಹತ್ವವನ್ನು ವಿವರಿಸಿದರು. CBCI ನ ನ್ಯಾಯ, ಶಾಂತಿ ಮತ್ತು ಅಭಿವೃದ್ಧಿ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿ ರೆ. ಡಾ. ಎಂ. ಸಿ. ರಾಜನ್ ಅವರು, ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಕ್ಷಣದ ಕಾನೂನು ನೆರವು ನೀಡಲು ಎಲ್ಲಾ ಡಯಾಸಿಸ್‌ಗಳಲ್ಲಿ ಕಾನೂನು ಕೋಶಗಳನ್ನು (Legal Cells) ಸ್ಥಾಪಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ, KRCTT ಮಾಜಿ ಆಡಳಿತ ಮಂಡಳಿ ಸದಸ್ಯರಾದ ದಿವಂಗತ ಶ್ರೀ ಥಾಮಸ್ ಚಾಂಡಿ ಹಾಗೂ ಇತ್ತೀಚೆಗೆ ಅಗಲಿದ ಸಮುದಾಯದ ಇತರ ಸದಸ್ಯರ ಸ್ಮರಣಾರ್ಥ ಮೌನಾಚರಣೆ ಮಾಡಲಾಯಿತು. KRCTT ಉಪಾಧ್ಯಕ್ಷರಾದ ಶ್ರೀ ಆಂಥೋನಿ ಮೆಂಡೋನ್ಸಾ ವಂದಿಸಿದರು. ಮಾಂಡ್ಯದ ಬಿಷಪ್ ಸೆಬಾಸ್ಟಿಯನ್ ಅದಾಯಂತರಾತ್ ಭೋಜನದ ಮುನ್ನ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.
