ಮಂಗಳೂರು: ರಾಜಕೀಯದಲ್ಲಿ ವೈಚಾರಿಕ ಭ್ರಷ್ಟತೆ, ಬೌದ್ಧಿಕ ದಾರಿದ್ರ್ಯಪ್ರವೇಶವಾದರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕರ್ನಾಟಕ ಸರಕಾರದ ಮಾಜಿ ಸ್ಪೀಕರ್, ಮಾಜಿ ಸಚಿವ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು. ಅವರು ಲೇಖಕ ಇರ್ಷಾದ್ ಉಪ್ಪಿನಂಗಡಿಯವರ ಕರಾವಳಿಯ ರಕ್ತ ಕಣ್ಣೀರುಪುಸ್ತಕದ ಎರಡನೆ ಆವೃತ್ತಿಯನ್ನು ಸಹೋದಯ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿ.

ಮಾತನಾಡುತ್ತಾ ಹಲವು ಕೋಮುದ್ವೇಷದ ಗಲಭೆ ನೋಡಿದ್ದೇನೆ ಆದರೆ ಕರಾವಳಿಯ ಕೋಮು ದ್ವೇಷದ ಪ್ರಕರಣ ವಿಭಿನ್ನವಾಗಿದೆ. ಪರಸ್ಪರ ಪ್ರತೀಕಾರ ದಿಂದ ಕರಾವಳಿಯಲ್ಲಿ ಕೊಲೆ ನಡೆಯುತ್ತಿದ್ದರೆ. ಸರಕಾರ ಏನು ಮಾಡುತ್ತಿತ್ತು ? ಎಂದು ಪ್ರಶ್ನಿಸಿದ ಅವರು ರಾಜಕಾರಣ ವ್ಯಾಪಾರಕ್ಕೆ ಇಳಿದಾಗ, ಓಟಿನ ಬೇಟೆಗಾಗಿ ಈ ಪ್ರಯೋಗ ನಡೆಯುತ್ತಿದೆ ಎಂದರು.
ಮತದಾರರು ಹಣ, ಅಂತಸ್ತು, ಪ್ರಭಾವ ನೋಡಿ ಮತ ಚಲಾಯಿಸುವುದು ಪ್ರಜಾಪ್ರ ಭುತ್ವ ವ್ಯವಸ್ಥೆ ಕುಸಿಯುತ್ತಿರು ವುದರ ಸಂಕೇತ . ಇದು ಜನರ ಮನಸ್ಸಿನಲ್ಲಿ ದ್ವೇಷ ಭಾವನೆ ಹುಟ್ಟಿಸಿ ಅಧಿಕಾರ ಹಿಡಿಯಬೇಕು ಎಂಬ ದುರಾಲೋಚನೆ ಯಿಂದ ಮಾಡಿದ ತಂತ್ರ ಈ ಕೋಮು ಗಲಭೆ. ಇದನ್ನು ಪ್ರಜ್ಞಾ ವಂತ ಜನರು ತಡೆಯಲು ಮುಂದಾ ಗಬೇಕಾಗಿದೆ ಎಂದರು. ಯಾವುದೇ ಧರ್ಮಕ್ಕೆ ಅಪಾಯ ಇರುವುದು ಅಲ್ಲಿರುವ ಮೂಲಭೂತವಾದಿ ಗಳಿಂದ ಇದರಿಂದ ದೊಡ್ಡ ಲಾಭ ಸಿಗುತ್ತದೆ ಎಂದು ಅವರಿಗೆ ತಿಳಿದಿದೆ. ಅವರು ಅಧಿಕಾರ ಹಿಡಿಯು ವಲ್ಲಿ ಯಶಸ್ವಿಯಾದಾದಾಗ ಸಂವಿಧಾನಕ್ಕೆ ಅಪಾಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ದೊರೆಯಬೇಕು. ಎಲ್ಲಾ ಸಮಸ್ಯೆಗಳನ್ನು ಮರೆತು, ಆರ್ಥಿಕ ದಾರಿದ್ರ ಎಲ್ಲವನ್ನು ಮರೆತು ಮತಚಲಾಯಿಸುವುದ ರಿಂದ ಆಯ್ಕೆಯಾಗುವ ಮತದಾನದ ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಮಾರಕ .ಈ ದೇಶದ ನ್ಯಾಯ ವ್ಯವಸ್ಥೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಬದುಕಲು ಸಾಧ್ಯವಿಲ್ಲ ಎಂಬ ಭಾವನೆ ಇಲ್ಲಿ ಬದುಕುತ್ತಿರುವವರಿಗೆ ಬಂದು ಬಿಟ್ಟರೆ. ಅಂಬೇಡ್ಕರ್ ಅವರಿಗೆ ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ಜನರ ಭಾವನೆ ಗುರುತಿಸಿ ಮಾತನಾಡುವ, ಬರೆಯುವ ಅವಕಾಶ ಕಡಿಮೆಯಾಗುತ್ತಿದೆ. ಕಷ್ಟದಲ್ಲಿ ಇರುವ ವರ ಬಗ್ಗೆ ಸ್ಪಂದನ ಇಲ್ಲದೆ ಹೋದರೆ ಸಮಾಜದಲ್ಲಿ ನಾವು ಶವಕ್ಕೆ ಸಮಾನ. ಮತೀಯ ಧರ್ಮದ ದ್ವೇಷದಲ್ಲಿ ನಲುಗಿ ಹೋದ ಬದುಕು.ನ್ಯಾಯ ಮತ್ತು ಪ್ರೀತಿಗಾಗಿ ಹೋರಾಡುತ್ತಿರುವ ಜನ ಸಮುದಾಯಕ್ಕೆ ಅರ್ಪಣೆಯಾಗಿರುವ ರಕ್ತ ಕಣ್ಣೀರು ಪುಸ್ತಕವನ್ನು ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಒದಬೇಕಾದ ಅಗತ್ಯವಿದೆ ಎಂದು ರಮೇಶ್ ಕುಮಾರ್ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘಟನೆಗಳ ಹಿರಿಯ ಮುಖಂಡ ಎಂ.ದೇವದಾಸ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಧರ್ಮ ಇರುವುದು ಮನುಷ್ಯರಿಗಾಗಿ ಹೊರತು ಧರ್ಮ ಕ್ಕಾಗಿ ಧರ್ಮ ಇರುವುದು ಭಾವಿಸುವುದು ತಪ್ಪು,ತಪ್ಪು ತಿಳುವಳಿಕೆಯಿಂದ ಸಾಕಷ್ಟು ಜನರ ಭವಿಷ್ಯ ಹಾಳಾಗಿದೆ,ಇದನ್ನು ತಡೆಯಲು ಸಂವಿಧಾನದ ಹಾದಿಯಲ್ಲಿ ಸಾಗಬೇಕಾಗಿದೆ ,ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದರು.
ಚಿಂತಕ ಕೆ.ಫಣಿರಾಜ್ ಮಾತನಾಡುತ್ತಾ, ಲಂಕೇಶ್ ಅವರು ಹೇಳಿದಂತೆ ದೇಶದ ರಾಜಕೀಯ ನಾಯಕತ್ವ ವಹಿಸಿ ಕೊಂಡವರು ಸಮಾಜದ ಜನರನ್ನು ವಿಭಾಗಿಸಿ ಮಾತನಾಡಬಾರದು ಈ ಸೂಕ್ಷ್ಮ ಜ್ಞಾನ ನಮಗಿರಬೇಕಾಗಿದೆ. ಹಿಂಸೆ ಗೊಳಗಾದವರ ವಿವರಗಳನ್ನು ಮುಚ್ಚಿ ಹಾಕುತ್ತಿರುವ ಈ ಸಂದರ್ಭದಲ್ಲಿ ಹಿಂಸೆಗೆ ತುತ್ತಾದವರ ಸಣ್ಣ ವಿವರಗಳು, ಹಿಂಸೆ ನಡೆಸುತ್ತಿರುವವರ ಸಣ್ಣ ವಿವರಗಳನ್ನು ಜನರ ಮುಂದಿಡುವುದು ಮುಖ್ಯ ಈ ನಿಟ್ಟಿನಲ್ಲಿ ಇರ್ಷಾದ್ ಅವರ ಪುಸ್ತಕ ಮುಖ್ಯ ವಾಗುತ್ತದೆ. ಅಹರ್ನಿಶಿ ಪ್ರಕಾಶನದ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಕೋಮು ಗಲಭೆ ಬಡವರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ರಕ್ತ ಕಣ್ಣೀರು ಪುಸ್ತಕ ತಿಳಿಸುತ್ತದೆ ಎಂದರು.
ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಕೋಮು ಹಿಂಸೆಗೆ ಕಳೆದ ಒಂದು ವರ್ಷದಿಂದ ಕಡಿಮೆಯಾಗಿದೆ. ಆದರೆ ಕೋಮುವಾದ ಹಿಂದಿನಂತೆ ಜೀವಂತವಾಗಿದೆ. ಕೋಮುವಾದವನ್ನು ಸೋಲಿಸಲು ರಾಜಕೀಯ ಪಕ್ಷಗಳು, ರಾಜಕಾರಣಿಗಳು ಮುಂದಾಗಬೇಕಾಗಿದೆ ಎಂದು ಹೇಳಿದರು.
ಪುಸ್ತಕದ ಲೇಖಕ ಇರ್ಷಾದ್ ಉಪ್ಪಿನಂಗಡಿ ವಂದಿಸಿದರು. ಚರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

