• Home  
  • ಜೆ. ಕೊರಗಪ್ಪ ಅವರಿಗೆ ಪ್ರತಿಷ್ಠಿತ ‘ಸೇವಾ ತ್ರಿವಿಕ್ರಮ’ ಬಿರುದು ಪ್ರದಾನ
- LATEST NEWS

ಜೆ. ಕೊರಗಪ್ಪ ಅವರಿಗೆ ಪ್ರತಿಷ್ಠಿತ ‘ಸೇವಾ ತ್ರಿವಿಕ್ರಮ’ ಬಿರುದು ಪ್ರದಾನ

ಮಂಗಳೂರು : ರಿಯಲ್‌ ಎಸ್ಟೇಟ್‌ ಸಂಸ್ಥೆ ಲ್ಯಾಂಡ್ ಲಿಂಕ್ಸ್ ರೂವಾರಿ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಮುಂದಾಳತ್ವದಲ್ಲಿ ಮೇರಿಹಿಲ್‌ನಲ್ಲಿ ನಿರ್ಮಾಣಗೊಂಡ ಪಾಲೆಮಾರ್ ಕನ್ವೆಷನ್ ಸೆಂಟರ್ ಸಹಿತ ನಾಲ್ಕು ಸಭಾಂಗಣಗಳ ಲೋಕಾರ್ಪಣೆ ಸಮಾರಂಭ ನಡೆದ ವೇಳೆ ಕೃಷ್ಣ ಪಾಲೆಮಾರ್ ಅವರ ನಿಕಟವರ್ತಿ ಜೆ. ಕೊರಗಪ್ಪ ಅವರಿಗೆ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲ, ಜಸ್ಟೀಸ್ ಎಸ್ ಅಬ್ದುಲ್ ನಝೀರ್ ಅವರ ದಿವ್ಯಹಸ್ತದಲ್ಲಿ ಸೇವಾ ತ್ರಿವಿಕ್ರಮ ಬಿರುದು ನೀಡಿ ಗೌರವಾಭಿನಂದನ ಪತ್ರ ಸಲ್ಲಿಸಲಾಯಿತು. ದೇರೆಬೈಲ್‌ ಕೊಂಚಾಡಿಯ ವಿದ್ಯಾ ಆಂಗ್ಲ […]

Share News

ಮಂಗಳೂರು : ರಿಯಲ್‌ ಎಸ್ಟೇಟ್‌ ಸಂಸ್ಥೆ ಲ್ಯಾಂಡ್ ಲಿಂಕ್ಸ್ ರೂವಾರಿ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಮುಂದಾಳತ್ವದಲ್ಲಿ ಮೇರಿಹಿಲ್‌ನಲ್ಲಿ ನಿರ್ಮಾಣಗೊಂಡ ಪಾಲೆಮಾರ್ ಕನ್ವೆಷನ್ ಸೆಂಟರ್ ಸಹಿತ ನಾಲ್ಕು ಸಭಾಂಗಣಗಳ ಲೋಕಾರ್ಪಣೆ ಸಮಾರಂಭ ನಡೆದ ವೇಳೆ ಕೃಷ್ಣ ಪಾಲೆಮಾರ್ ಅವರ ನಿಕಟವರ್ತಿ ಜೆ. ಕೊರಗಪ್ಪ ಅವರಿಗೆ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲ, ಜಸ್ಟೀಸ್ ಎಸ್ ಅಬ್ದುಲ್ ನಝೀರ್ ಅವರ ದಿವ್ಯಹಸ್ತದಲ್ಲಿ ಸೇವಾ ತ್ರಿವಿಕ್ರಮ ಬಿರುದು ನೀಡಿ ಗೌರವಾಭಿನಂದನ ಪತ್ರ ಸಲ್ಲಿಸಲಾಯಿತು.

ದೇರೆಬೈಲ್‌ ಕೊಂಚಾಡಿಯ ವಿದ್ಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾಗಿ, ವಿಕಾಸ್ ಎಜುಕೇಶನ್ ಟ್ರಸ್ಟ್‌ ಸಂಚಾಲಕರಾಗಿ, ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಾಲಯದ ಟ್ರಸ್ಟಿಯಾಗಿ, ಗುರುವನ ಶ್ರೀ ದುರ್ಗಾ ಕ್ಷೇತ್ರದ ಕಾರ್ಯದರ್ಶಿ ಹಾಗೂ ಟ್ರಸ್ಟಿಯಾಗಿ ಫಲಾಪೇಕ್ಷೆಯಿಲ್ಲದೆ ಜೆ ಕೊರಗಪ್ಪ ಅವರು ಕೃಷ್ಣ ಪಾಲೆಮಾರ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸೇವೆ ಸಲ್ಲಿಸಿದ ಧಾರ್ಮಿಕ ನಾಯಕರಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ, ಲ್ಯಾಂಡ್ ಲಿಂಕ್ಸ್ ರೂವಾರಿ ಕೃಷ್ಣ ಜೆ ಪಾಲೆಮಾರ್, ರಾಜ್ಯ ಸಚಿವ ವಿ ಸೋಮಣ್ಣ, ವಿಧಾನ ಸಭೆಯ ಸಭಾಧ್ಯಕ್ಷ ಯು ಟಿ ಖಾದರ್‌, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಭರತ್‌ ಶೆಟ್ಟಿ, , ಉಮಾನಾಥ ಕೋಟ್ಯಾನ್‌, ಐವನ್ ಡಿ ಸೋಜಾ, ಟ್ರಸ್ಟಿನ ಉಪಾಧ್ಯಕ್ಷ ಪ್ರದೀಪ್‌ ಪಾಲೇಮಾರ್‌ , ಟ್ರಸ್ಟಿ ಪ್ರಸನ್ನ ಪಾಲೇಮಾರ್‌, ಜೆ ಕೆ ರಾವ್, ಸಂತೋಷ್‌ ಪಾಲೆಮಾರ್‌, ಸೂರಜ್ ಕಲ್ಯಾ, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರಾ ಮೊದಲಾದವರಿದ್ದರು.

Share News