ವಿಟ್ಲ :ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಭಾರತೀಯ ಕಥೋಲಿಕ್ ಯುವ ಸಂಚಾಲನ (ಐ.ಸಿ.ವೈ.ಎಂ.) ಘಟಕದ ವತಿಯಿಂದ ಯುವ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೇಲಂತಬೆಟ್ಟು ಚರ್ಚ್ ನ ವಂದನೀಯ ಫಾ. ರಿಚರ್ಡ್ ಡಿಸೋಜ ಅವರು ದೀಪ ಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಂದನೀಯ ಫಾ. ಸೈಮನ್ ಡಿ ಸೋಜ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಮೊಂತೆರೊ, ಐ.ಸಿ.ವೈ.ಎಂ. ಪೆರುವಾಯಿ ಘಟಕದ ಸಂಚಾಲಕಿ ಜ್ಯೋತಿ ಡಿ ಸೋಜ, ಅಧ್ಯಕ್ಷ ಸ್ಟ್ಯಾನಿ ಡಿ ಸೋಜ ಹಾಗೂ ಕಾರ್ಯದರ್ಶಿ ರೆನಿಟಾ ಡಿ ಸೋಜ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರ್ಥನಾ ಗೀತೆಯೊಂದಿಗೆ ಚಾಲನೆ ನೀಡಲಾದ ಕಾರ್ಯಕ್ರಮದಲ್ಲಿ, ಯುವ ಸಂಚಾಲನಕ್ಕೆ ಸಹಕರಿಸಿದ ದಾನಿಗಳನ್ನು ಹೂ ನೀಡಿ ಗೌರವಿಸಲಾಯಿತು.
ಸಂಪನ್ಮೂಲ ವ್ಯಕ್ತಿ ವಂದನೀಯ ಫಾ. ರಿಚರ್ಡ್ ಡಿ ಸೋಜ ಅವರು “ಡಿಜಿಟಲ್ ಮೀಡಿಯಾ” ವಿಷಯದ ಬಗ್ಗೆ ಯುವಕರಿಗೆ ಸಮಗ್ರ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡಿದರು. ಜಾಗೃತಿ ಅಧಿವೇಶನದಲ್ಲಿ, ಅಶ್ವಿನ್ ಡಿ ಸೋಜ ಅವರು ಇತ್ತೀಚೆಗೆ ಸುದ್ದಿಯಲ್ಲಿರುವ “ಕಂಬೋಡಿಯಾ ಸ್ಕ್ಯಾಮ್” ಕುರಿತು ಮಾಹಿತಿ ಹಂಚಿಕೊಂಡರು, ಯುವ ಸಮುದಾಯಕ್ಕೆ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ನೀಡಿದರು.
ಮಧ್ಯಾಹ್ನದ ಭೋಜನದ ನಂತರ, ವಂದನೀಯ ಫಾ. ರಿಚರ್ಡ್ ಡಿ ಸೋಜ ಹಾಗೂ ವಂದನೀಯ ಫಾ. ಸೈಮನ್ ಡಿ ಸೋಜ ಅವರು ಯುವಕರಿಗಾಗಿ ವಿವಿಧ ಉತ್ತೇಜನಕಾರಿ ಚಟುವಟಿಕೆಗಳನ್ನು ಮತ್ತು ಟ್ರೆಷರ್ ಹಂಟ್ ಆಟವನ್ನು ನಡೆಸಿದರು. ಎಲ್ಲಾ ಯುವ ಸದಸ್ಯರು ಈ ಮನರಂಜನಾ ಚಟುವಟಿಕೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಆಶ್ವಿನ್ ಡಿ ಸೋಜ ಮತ್ತು ಅನುಪ ಸಿಲ್ವಿಯಾ ಡಿ ಸೋಜ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರೆ, ಪ್ರಿನ್ಸಿಯಾ ಡಿ ಸೋಜ ಅವರು ಧನ್ಯವಾದ ಸಮರ್ಪಣೆ ಮಾಡಿದರು.







- DAKSHINA KANNADA
- HOME
- LATEST NEWS


