ವಿಟ್ಲ: ಕಳೆದ ಆದಿತ್ಯವಾರ ನಡೆದ ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ನಾಪತ್ತೆಯಾಗಿದ್ದ ಓಮ್ನಿ ವಾಹನ ಪತ್ತೆಯಾಗಿದೆ.
ಕಳೆದ ಆದಿತ್ಯವಾರ ಸಾಲೆತ್ತೂರು-ವಿಟ್ಲ ರಸ್ತೆಯ ಕಡಂಬು ಎಂಬಲ್ಲಿ ವಿಟ್ಲದ ಕಡೆಗೆ ಹೋಗುತ್ತಿದ್ದ ಹೋಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಇದೇ ಓಮ್ನಿ ವಾಹನ ಕುಡ್ತಮುಗೇರು ಸಾಲೆತ್ತೂರು ಮಾರ್ಗವಾಗಿ ಮತ್ತೆ ಇಂದು ಪ್ರತ್ಯಕ್ಷವಾದ ವ್ಯಾನ್ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ.

ಕೆ.ಎ.19ಎಮ್.ಹೆಚ್ 1518 ಮಾರುತಿ ವ್ಯಾನ್ ಪರಾರಿಯಾಗಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇಂದು ಈ ವ್ಯಾನ್ ಕಣ್ಣಿಗೆ ಕಾಣುತ್ತಿರುವಂತೇಯೇ ಗ್ರಾಮಸ್ಥರು ವ್ಯಾನನ್ನು ಬೆನ್ನತ್ತಿದ್ದಾರೆ. ಆದರೆ ವ್ಯಾನ್ ಜನರ ಕಣ್ತಪ್ಪಿಸಿ ಹೋಗಿದೆ. ಹುಡುಕಾಟ ಮತ್ತೆ ಮುಂದುವರಿಸಿದಾಗ ತಾಮರಾಜೆ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ವಿಚಾರಿಸಿದಾಗ ಬೀಡಿ ಕಾಂಟ್ರಾಕ್ಟ್‌ದಾರ ಇಸ್ಮಾಯಿಲ್ ಎಂಬುವವರ ಮಾಹನ ಎಂದು ಗೊತ್ತಾಗಿದ್ದು, ವಿಟ್ಲ ಪೊಲೀಸರು ವಾಹನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.