canaratvnews

ಗಗನದತ್ತ ಚಿನ್ನದ ಬೆಲೆ..!: 17,000 ರೂ. ಗಡಿ  ದಾಟಿದ ಚಿನ್ನ- ಬೆಳ್ಳಿಯೂ ದುಬಾರಿ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ನಿನ್ನೆ ಅಕ್ಷರಶಃ ಗಗನ ಮುಟ್ಟಿದೆ. ಇತ್ತೀಚಿನ ವರ್ಷಗಳಲ್ಲೇ ಒಂದೇ ದಿನದಲ್ಲಿ ಚಿನ್ನ ಕಂಡ ಅತಿಹೆಚ್ಚು ಏರಿಕೆ ಇದು. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 16,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 17,000 ರೂ  ದಾಟಿ 18,000 ರೂನತ್ತ ಸಾಗುತ್ತಿದೆ. ಬೆಳ್ಳಿ ಬೆಲೆ ಇನ್ನೂ ದೊಡ್ಡ ಜಿಗಿತ ಕಾಣುತ್ತಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,63,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,78,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 41,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,63,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 41,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 42,500 ರೂ ಇದೆ.

ಬೆಳ್ಳಿ ಬೆಲೆ ಭಾರಿ ಏರಿಕೆ
ಬೆಳ್ಳಿ ಬೆಲೆ 30 ರೂಪಾಯಿ ಏರಿಕೆಯಾಗಿದ್ದು, ಗ್ರಾಂ ಬೆಲೆ 410 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 30 ಸಾವಿರ ಏರಿಕೆ ಆಗಿ, ಕೆಜಿಗೆ 4,10,000 ರೂಪಾಯಿ ಇದೆ.

ಬೆಲೆ ಏರಿಕೆಗೆ ಕಾರಣಗಳು
ಚಿನ್ನದ ದರಗಳು ತೀವ್ರವಾಗಿ ಏರಿಕೆಯಾಗಿದ್ದು, ಇದಕ್ಕೆ ಪ್ರಬಲವಾದ ಚಿಲ್ಲರೆ ಬೇಡಿಕೆ, ಡಾಲರ್‌ನ ದುರ್ಬಲತೆ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಕಾರಣವಾಗಿವೆ.

Share News
Exit mobile version