ಮಂಗಳೂರು,ಆ.5:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಡಂಪಿಂಗ್ ಯಾರ್ಡ್ ಪ್ರದೇಶದಲ್ಲಿ ಬುಧವಾರ ಮಂಗಳೂರಿನ ಹಸಿರೀಕರಣಕ್ಕಾಗಿ ಹಾಗೂ ಅಳಿದು ಹೋದ ಗುಬ್ಬಚ್ಚಿ, ಕೋಗಿಲೆ, ಅಳಿಲು, ಗಿಳಿ ಹಾಗೂ ಇನ್ನಿತರ ಪಕ್ಷಿ ಸಂಕುಲ ಮರಳಿ ಕರೆ ತರಲು ಸಮುದಾಯ ಚಳುವಳಿಯಡಿ 200 ಹಣ್ಣು ನೀಡುವ ಗಿಡಗಳನ್ನು ನೆಡಲಾಗಿದೆ.
ರೋಟರಿ ಮಿಡ್ ಟೌನ್ ಆ್ಯಂಡ್ ಫ್ಯೂಚರ್ ಅಕಾಡೆಮಿ ಹಣ್ಣು ನೀಡುವ 200 ಗಿಡಗಳ ಪ್ರಾಯೋಜಕತೆ ಮಾಡಿರುತ್ತಾರೆ. ಸೈಂಟ್ ರೈಮಂಡ್ಸ್ ಡಿಗ್ರಿ ಕಾಲೇಜು ವಿದ್ಯಾರ್ಥಿಗಳು ಮತ್ತು ಎನ್.ಎಸ್.ಎಸ್ ಅಧಿಕಾರಿಗಳು ಪಚ್ಚನಾಡಿ ಡಂಪಿಂಗ್ ಯಾರ್ಡ್‍ನಲ್ಲಿ ಸುಮಾರು ಗಿಡಗಳನ್ನು ನೆಡಲು ಸಹಕರಿಸಿದರು.
ಇದುವರೆಗೆ ಸುಮಾರು 500 ಗಿಡಗಳನ್ನು ಬೆಳೆಸಲಾಗಿದ್ದು, ಇದು 4 ನೇ ಕಾರ್ಯಕ್ರಮವಾಗಿರುತ್ತದೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಮತ್ತು ರಸ್ತೆಯ ಬದಿಯಲ್ಲಿ 2027ರ ಅಂತ್ಯಕ್ಕೆ ಸುಮಾರು 3000 ಹಣ್ಣು ನೀಡುವ ಗಿಡಗಳನ್ನು ನೆಡುವುದು ಮಾತ್ರವಲ್ಲ, ಜನರು ಉತ್ತಮವಾದ ಗಾಳಿ ಹಾಗೂ ಸ್ವಚ್ಚವಾದ ಪರಿಸರದಲ್ಲಿ ಬದುಕಬೇಕೆಂಬ ಆಶಯದೊಂದಿಗೆ ಎಲ್ಲರ ಸಹಭಾಗಿತ್ವ ಅಗತ್ಯವಿದೆ. ನೆಲ, ಜಲ, ಗಾಳಿ ಅತೀ ಉತ್ತಮವಾಗಿರಬೇಕೆಂದರೆ ಪರಿಸರವನ್ನು ಎಲ್ಲರೂ ಉಳಿಸಿ ಬೆಳೆಸಬೇಕು. ಸುಂದರ ಸ್ವಚ್ಛ ಪರಿಸರ ಮುಂದಿನ ಪೀಳಿಗೆಗೆ ಠೇವಣಿಯಾಗಲಿ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾಸಂಸ್ಥೆಗಳು, ಬ್ಯಾಂಕ್ ಕಾಪೆರ್Çೀರೇಟ್ ವಲಯಗಳು, ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಮಂಗಳೂರು ವ್ಯಾಪ್ತಿಯಲ್ಲಿ ಹೂ-ಹಣ್ಣು ನೀಡುವ ಮರ ಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲು ಮುಂದೆ ಬರಬೇಕು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಕದ್ರಿ ವಲಯ ಆಯುಕ್ತೆ ರೇಖಾ ಜೆ ಶೆಟ್ಟಿ, ಸಮಾಜ ಸೇವಕಿ ಕ್ರಾಸ್ತ, ಸಂಘಟನಾಧಿಕಾರಿಗಳಾದ ವಿನಿತ ರೈ, ಟೀನಾ ಪಿರೇರಾ, ಹಾಗೂ ಅಕ್ಷಿತ ಶೆಟ್ಟಿ, ಗ್ಲೋಬಲ್ ಟಿವಿ ನಿರ್ದೇಶಕ ಪೌಲ್, ಒಣ ಟ್ರಸ್ಟ್ ಸಹ ಪಾಲುದಾರ ಜೀತ್ ರೋಚ್ ಮತ್ತಿತ್ತರರು ಇದ್ದರು.
