ಮಂಗಳೂರು: ನಂತೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಯುವತಿಯ ಮೃತದೇಹವನ್ನಿಟ್ಟು ಪ್ರತಿಭಟಿಸಿದ ಸುಮಾರು 50 ಮಂದಿ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಆರೋಪಿಗಳನ್ನು 1) ಅಮೀತ್, ವಿವೇಕನಗರ ಬಲ್ಲಾಳ್ ಭಾಗ್ 2) ಕೀರ್ತನ್ ,ವಿವೇಕನಗರ ಬಲ್ಲಾಳ್ ಭಾಗ್ 3) ನವೀತ್ ವಿವೇಕನಗರ , ಬಲ್ಲಾಳ್ ಭಾಗ್ 4) ಭರತ್ ರಾಜ್ ವಿವೇಕನಗರ ಬಲ್ಲಾಳ್ ಭಾಗ್ ,5) ಪವನ್, ವಿವೇಕನಗರ ಬಲ್ಲಾಳ್ ಭಾಗ್ 6) ಲೋಕೆಶ್,ಮಂಗಳಾದೇವಿ,7) ಮನ್ವೀತ್ ಬಲ್ಲಾಳ್ ಭಾಗ್ 8) ಅನೀಲ ಕುಮಾರ್ ಕಂಕನಾಡಿ ,9) ಪ್ರೇಮನಾಥ ಬಲ್ಲಾಳ್ ಭಾಗ್ ಎಂದು ಗುರುತಿಸಲಾಗಿದೆ. ಉಳಿದಂತೆ ಸುಮಾರು 50 ಮಂದಿಯನ್ನು ಪ್ರಕರಣದಲ್ಲಿ ಸೇರಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಫೆ.4 ರಂದು ನಂತೂರಿನಲ್ಲಿ ನಡೆದ ಪ್ರಕರಣದಲ್ಲಿ 24 ವರ್ಷ ಪ್ರಾಯದ ದೀಪ್ತಿ ಮೃತಪಟ್ಟಿದ್ದರು. ಶವಪರೀಕ್ಷೆ ನಂತರ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಜನರು ಮೃತ ದೇಹವನ್ನು ಎ.ಜೆ. ಆಸ್ಪತ್ರೆಯಿಂದ ನೇರವಾಗಿ ಬಲ್ಲಾಳ್ ಭಾಗ್ ನಲ್ಲಿರುವ ಮೃತೆಯ ಮನೆಗೆ ಕೊಂಡು ಹೋಗುವುದಾಗಿ ಹೇಳಿದ್ದರು. ಆದರೆ ಆಪಾದಿತರಾದ 1) ಅಮೀತ್, ವಿವೇಕನಗರ ಬಲ್ಲಾಳ್ ಭಾಗ್ 2) ಕೀರ್ತನ್ ,ವಿವೇಕನಗರ ಬಲ್ಲಾಳ್ ಭಾಗ್ 3) ನವೀತ್ ವಿವೇಕನಗರ , ಬಲ್ಲಾಳ್ ಭಾಗ್ 4) ಭರತ್ ರಾಜ್ ವಿವೇಕನಗರ ಬಲ್ಲಾಳ್ ಭಾಗ್ ,5) ಪವನ್, ವಿವೇಕನಗರ ಬಲ್ಲಾಳ್ ಭಾಗ್ 6) ಲೋಕೆಶ್ ,ಮಂಗಳಾದೇವಿ,7) ಮನ್ವೀತ್ ಬಲ್ಲಾಳ್ ಭಾಗ್ 8) ಅನೀಲ ಕುಮಾರ್ ಕಂಕನಾಡಿ ,9) ಪ್ರೇಮನಾಥ ಬಲ್ಲಾಳ್ ಭಾಗ್ ಮತ್ತು ಇತರ ಸುಮಾರು 50 ಜನರು ದ್ವಿಚಕ್ರ ವಾಹನದಲ್ಲಿ ಮತ್ತು ಕಾರಿನಲ್ಲಿ ಆಂಬುಲೆನ್ಸ್ ನೊಂದಿಗೆ ಬಂದು ಕದ್ರಿ ಪೊಲೀಸ್ ಠಾಣೆಯ ಪ್ರವೇಶ ದಾರಿಯ ಬಳಿಯಲ್ಲಿ ಜಮಾವಣೆಗೊಂಡಿದ್ದಾರೆ.
ನಂತರ ಸುಮಾರು 12:00 ಗಂಟೆಗೆ ದೀಪ್ತಿಯ ಮೃತದೇಹವನ್ನು ಇರಿಸಿದ್ದ ಆಂಬುಲೆನ್ಸ್ ನ್ನು ಸರ್ಕ್ಯೂಟ್ ಹೌಸ್ ಜಂಕ್ಷನ್ ಬಳಿಯ ಕದ್ರಿ ಪೊಲೀಸ್ ಠಾಣೆಯ ಪ್ರವೇಶ ದಾರಿಗೆ ಅಡ್ಡಲಾಗಿ ನಿಲ್ಲಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಿ ಚಾಲಕ ಮತ್ತು ನಿರ್ವಾಹಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಈ ವೇಳೆ ಪೊಲೀಸರು ಈ ರೀತಿ ಪ್ರತಿಭಟನೆ ಮಾಡುವುದು ಸರಿ ಅಲ್ಲವೆಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರೂ ಈ ಬಗ್ಗೆ ಗಮನಹರಿಸದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಪ್ರತಿಭಟನೆಯಿಂದ ಸದ್ರಿ ಪರಿಸರದಲ್ಲಿ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ಅಲ್ಲದೇ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಳಾಗಿದೆ.