canaratvnews

ಮೆರ್ಸಿನ್ ಮಾತೆ ಇಗರ್ಜಿ ಪಾನೀರಿನಲ್ಲಿ ಪರಿಸರ ದಿನಾಚರಣೆ & ಸ್ವಚ್ಚತಾ ಅಭಿಯಾನ

ಮಂಗಳೂರು: ಪಾನೀರ್ ಮೆರ್ಸಿನ್ ಮಾತೆಯ ಇಗರ್ಜಿ ಹಳೆ ಚರ್ಚ್ ವಟಾರದಲ್ಲಿ ಭಾನುವಾರ ಪರಿಸರ ದಿನಾಚರಣೆ – ಲಾವ್ದಾತೊ ಸಿ ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಪರಿಸರ ಆಯೋಗ ಹಾಗೂ ಕೃಷಿ ಸಮಿತಿ ಸಂಯುಕ್ತವಾಗಿ ಆಯೋಜಿಸಿತ್ತು.

ವಂ. ಫಾ. ವಿಕ್ಟರ್ ಡಿ ಮೆಲ್ಲೋ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಚರ್ಚ್ ಗುರುಗಳು ದೇವರ ಆಶೀರ್ವಾದ ಬೇಡಿ, ಹಣ್ಣು ಹಂಪಲು ಗಿಡಗಳನ್ನು ಹಂಚಿ ಸಂದೇಶ ನೀಡಿದರು. ಕ.ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಹಾಗೂ ಕ್ರೈಸ್ತ ಒಕ್ಕೂಟ ರಾಜಧ್ಯಕ್ಷ, ಅಲ್ವಿನ್ ಡಿಸೋಜರು ಗಿಡ ನೆಡುವ ಮಹತ್ವ ಹಾಗೂ ಅದರ ಪಾಲನೆ ಕುರಿತು ಮಾಹಿತಿ ನೀಡಿದರು.

ವನಮಹೋತ್ಸವವನ್ನು ವಂ. ಫಾ. ವಿಕ್ಟರ್ ಡಿ ಮೆಲ್ಲೋ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಉಪಾಧ್ಯಕ್ಷ ಸರಿಟಾ ಡಿಸೋಜ, ಕಾರ್ಯದರ್ಶಿ ಗ್ರೆಟ್ಟ ಡಿಕುನ್ಹ, 21 ಆಯೋಗದ ಸಂಯೋಜಕ ರೊನಾಲ್ಡ್ ಡಿಸೋಜ, ಕ್ರೈಸ್ತ ಒಕ್ಕೂಟ ರಾಜಧ್ಯಕ್ಷ, ಹಾಗೂ ಮಾಜಿ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಅಲ್ವಿನ್ ಡಿಸೋಜ, ಕಥೊಲಿಕ್ ಸಭಾ ಪಾನೀರ್ ಘಟಕ ಅಧ್ಯಕ್ಷ ಐವನ್ ಮೊಂತೆರೋ ನಿಕಟ ಪೂರ್ವ ಅಧ್ಯಕ್ಷ ನೋಯೆಲ್ ಪಿಂಟೊ, ಕಾರ್ಯದರ್ಶಿ ವೈಲೇಟ್ ಡಿಸೋಜ, ಪರಿಸರ ಆಯೋಗದ ಸಂಚಾಲಕ ನೋರ್ಬಟ್ ಡಿಸೋಜ ಕೃಷಿ ಸಮಿತಿ ಸಂಚಾಲಕ ಉರ್ಬನ್ ಫೆರಾಂವೋ ಎಸ್. ವಿ. ಪಿ. ಅಧ್ಯಕ್ಷ, ಪ್ರಾಂಕಿ ಕುಟಿನ್ಹಾ ಸೇರಿದಂತೆ ಸುಮಾರು 150 ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಶ್ವಿನ್ ಮೊಂತೆರೋ ಕಾರ್ಯನಿರೂಪಿಸಿದರು.

Share News
Exit mobile version