ಮಂಗಳೂರು, ಏಪ್ರಿಲ್. 24: ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸುವಲ್ಲಿ ಸೇವಾಮನೋಭಾವ ಹೊಂದಿರುವ ಜನರು ಮತ್ತು ಸಂಘ ಸಂಸ್ಥೆಗಳುಸಹಭಾಗಿತ್ವ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.ಅವರು ಗುರುವಾರ ನಗರದ ಪಿವಿಎಸ್ ವೃತ್ತದ ಬಸ್ ನಿಲ್ದಾಣದಲ್ಲಿ ಸಾರ್ವಜನಿ ಕರಿಗಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಅಳವಡಿಸಲಾದ ಶುದ್ದ ಕುಡಿಯು ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಸೇವಾ ಚಟುವಟಿಕೆಯನ್ನೇ ಧ್ಯೇಯವಾಗಿರಿ ಸಿಕೊಂಡಿರುವ ರೋಟರಿ ಸಂಸ್ಥೆ ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸುವಲ್ಲಿ ಸ್ಥಳೀಯಾಡಳಿತದ ಜೊತೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಈ ಯೋಜನೆಯ ನಿರ್ವಹಣೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಭಾಗಿತ್ವ ಅಗತ್ಯ.ಆಗ ಸಾರ್ವಜನಿಕರು
ಈ ಯೋಜನೆಯ ನಿರಂತರ ಲಾಭ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ,ದಿವಾಕರ್ ಕದ್ರಿ ,ಮಾಜಿ ಮನಪಾ ಸದಸ್ಯೆ ಲೀಲಾವತಿ ಪ್ರಕಾಶ್ ,ಮನಪಾ ಉಪ ಆಯುಕ್ತ ನರೇಶ್ ಶೆಣೈ,ಇಂಜಿನಿಯರ್ ರಾಜೇಶ್,ಮಾಜಿ ರೋಟರಿ ಗವರ್ನರ್ ಡಾ.ದೇವದಾಸ ರೈ,ಅಸಿಸ್ಟೆಂಟ್ ಗವರ್ನರ್ ಪ್ರೊ.ಚಿನ್ನಗಿರಿ ಗೌಡ,ಮಾಜಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ ರೈ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್ ಬಿ.ಎನ್, ಮಂಗಳೂರು ರೋಟರಿ ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ರೋಟರಿ ಘಟಕದ ಪದಾಧಿಕಾರಿಗಳಾದ ,ರೋಟರಿ ಕ್ಲಬ್ ಮಂಗ ಳೂರು ಸೆಂಟ್ರಲ್ ನ ನಿಕಟ ಪೂರ್ವ ಅಧ್ಯಕ್ಷ ಬ್ರಿಯಾನ್ ಪಿಂಟೊ, ಪೂರ್ವಾಧ್ಯಕ್ಷ ಸಾಯಿಬಾಬ ರಾವ್, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ರೋ.ಡಾ.ಶಿವ ಪ್ರಸಾದ್ ,ರಾಜೇಶ್ ಸೀತಾರಾಮ್ ಖಜಾಂಚಿ,ಡಾ.ರಂಜನ್ ರಾವ್,ಪ್ರಮೀಳಾ ಹೆಗಡೆ,ಗೀತಾ ರೈ, ಜಾಕ್ಸನ್ ಸಲ್ಡಾನಾ ಪ್ರವೀಣ್ ಕುಟಿನ್ಹೊ,ಮುರಳಿ ಹೊಸಮಜಲು,ಮಾಧವ ಅಡ್ಪಂಗಾ ಯ,ವಸಂತ್ ಅಂಚನ್,ಹಾಗೂ ಸಹಕಾರ ನೀಡಿದ ಸ್ಥಳೀಯರಾದ ಪ್ರಭಾವತಿ ಶೆಟ್ಟಿ,ವಾರಿಜ ಮೊದಲಾದವರು ಉಪಸ್ಥಿತರಿದ್ದರು.

