ಪುತ್ತೂರು: ಕಾಂಗ್ರೆಸ್ ನ ನೆಟ್ಟಣಿಗೆ ಮೂಡ್ನೂರು ವಲಯದ ಮಹಿಳಾ ಘಟಕದ ಸಭೆ ನಿನ್ನೆ ನಡೆಯಿತು.

ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಹಾಗೂ ಪುತ್ತೂರಿನ ಅಭಿವೃದ್ಧಿ ಬಗ್ಗೆ ಶಾಸಕರು ಬಿಡುಗಡೆಗೊಳಿಸಿದ ಅನುದಾನ, ಹಾಗೆಯೇ ಶಾಸಕರ ಅವಧಿಯಲ್ಲಿ ಮಹಿಳಾ ಕಾಂಗ್ರೆಸನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಬೂತ್ ಅಧ್ಯಕ್ಷರುಗಳ ನೇಮಕ, ನರೇಗಾ ಹಕ್ಕೊತ್ತಾಯ ಪಾದಯಾತ್ರೆಯ ಯಶಸ್ವಿಗೊಳಿಸುವ ವಿಚಾರ, ಹಾಗೆಯೇ ಜಿಲ್ಲಾ ಹಾಗೂ ನಗರ ಪಂಚಾಯತ್ ಚುನಾವಣೆಗೆ ಸೂಕ್ತ ಮಹಿಳಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅನಿತಾ ಹೇಮನಾಥ್ ಶೆಟ್ಟಿ ಕಾವು, ಪುತ್ತೂರು ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಫೌಜಿಯಾ , ಕಾಂಗ್ರೆಸ್ ವಲಯಾಧ್ಯಕ್ಷರು, ಬೂತ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್ ನ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.