Tag: puttur

DAKSHINA KANNADA HOME LATEST NEWS

ಪುತ್ತೂರು ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ: ಸಂತ್ರಸ್ತರ ಮನೆಗೆ ಸಂಸದ ಭೇಟಿ- ಸರ್ಕಾರಕ್ಕೆ ಎಚ್ಚರಿಕೆ

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಸಂತ್ರಸ್ತರ ಮನೆಗೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೇರಿ ಹಲವು ಬಿಜೆಪಿ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಭೇಟಿಯ ಬಳಿಕ ಮಾತನಾಡಿದ ಸಂಸದ, ಒಂದು ರೀತಿಯಲ್ಲಿ ನಡೆದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ತೆರಳಿದ ಯುವತಿಯ ಪೋಷಕರನ್ನು ಗಂಟೆಗಳ ಕಾಲ ಠಾಣೆಯಲ್ಲಿ ಕುಳ್ಳಿರಿಸಿ ಸಂತೈಸಬೇಕಾದ ಪೊಲೀಸರೇ ರಾಜಕೀಯ ಒತ್ತಡಕ್ಕೆ ಮಣಿದು ಕೌಂಟರ್‌ ಕೇಸ್‌ ದಾಖಲಿಸಿದ್ದು […]

DAKSHINA KANNADA HOME LATEST NEWS

ಅಳಿಕೆ ಗ್ರಾಮದ 2.07 ಕೋಟಿಯ ವಿವಿಧ ಕಾಮಗಾರಿ ಶಂಕುಸ್ಥಾಪನೆಗೈದ ಶಾಸಕ ಅಶೋಕ್‌ ರೈ

ವಿಟ್ಲ: ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನಸಭಾ ಕ್ಷೇತ್ರದ ಅಳಿಕೆ ಗ್ರಾಮದ ಒಟ್ಟು 22 ಕಾಮಗಾರಿಗಳಿಗೆ ಪುತ್ತೂರು ಶಾಸಕ ಅಶೋಕ್‌ ರೈ  ಶಂಕುಸ್ಥಾಪನೆ ಮಾಡಿದರು. ಅದೇ ರೀತಿ 2.45 ಲಕ್ಷ ರೂ. ಅನುದಾನದ ಕಾಮಾಗಾರಿಯನ್ನು ಉದ್ಘಾಟಿಸಿದರು. ಈ ವೇಳೆ ಅಳಿಕೆ ಗ್ರಾಮದ ನಿಕಟಪೂರ್ವ ಅಧ್ಯಕ್ಷ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಎಸ್‌.ಎಸ್‌. ಮಹಮ್ಮದ್‌, ಡಾ.ರಾಜಾರಾಮ್‌  ಸೇರಿ ಹಲವು ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು. ಅಳಿಕೆ ಗ್ರಾಮದ ಕಾನತ್ತಡ್ಕ- ಗೋಳಿದಡಿ ರಸ್ತೆ ಅಭಿವೃದ್ದಿಗೆ 10 ಲಕ್ಣ ಅನುದಾನ […]

DAKSHINA KANNADA HOME LATEST NEWS

ಕರ್ನಾಟಕ-ಕೇರಳ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ 20 ಕೋಟಿ ಮಂಜೂರು: ಕೊಟ್ಟ ಮಾತು ಉಳಿಸಿದ ಶಾಸಕ ರೈ

ಪುತ್ತೂರು: ಮಾಣಿಲ ಗ್ರಾಮದ ಕಾಮಜಾಲು- ಪೂವನಡ್ಕದಲ್ಲಿರುವ ಸಿರಿಯ ನದಿಗೆ ಸೇತುವೆ ನಿರ್ಮಾಣ ಆಗಬೇಕೆಂಬುದು ಈ ಭಾಗದ ಹಾಗೂ ಕೇರಳಕ್ಕೆ ಸೇರಿದ ಗ್ರಾಮಸ್ಥರ ಬಹುಕಾಲದ ಕನಸಾಗಿತ್ತು, ಈ ಕನಸನ್ನು ನನಸು ಮಾಡುವುದಾಗಿ ಅನೇಕ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕ್ ರೈ ಕೂಡಾ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಅಶೋಕ್ ರೈ ಮಾತುಕೊಟ್ಟು ೨ ವರ್ಷದಲ್ಲೇ ಅದನ್ನು ಪೂರ್ಣಗೊಳಿಸಿದ್ದಾರೆ. ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ೨೦ ಕೋಟಿ ಅನುದಾನ ಮಂಜೂರಾಗಿದೆ. ಸಂಪರ್ಕ ಸೇತುವೆಯಾಗಲಿದೆ ಸಿರಿಯ […]

DAKSHINA KANNADA HOME LATEST NEWS

ಪುತ್ತೂರಿನಲ್ಲಿ ಪಿಸ್ತೂಲ್ ತೋರಿಸಿ ಗುಂಡು ಹೊಡೆಯುವ ಬೆದರಿಕೆ: ಆರೋಪಿ ಬಂಧನ

ಮಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಪ್ರಯತ್ನಿಸಿದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಘಟನೆ ವಿವರ ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಎಂಬವರು ಮಾ.2 ರಂದು ಪುತ್ತೂರಿನಿಂದ ಕೂರ್ನಡ್ಕಕ್ಕೆ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ಪುತ್ತೂರು ರಿಲ್ಯಾನ್ಸ್ ಮಾಲ್ ಬಳಿ, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಪಿರ್ಯಾದಿದಾರರ ಕಡೆಗೆ ಪಿಸ್ತೂಲ್ ನ್ನು […]

DAKSHINA KANNADA HOME LATEST NEWS UDUPI

ಹಿಂದೂ ಮಹಿಳೆ-ಮುಸ್ಲಿಂ ಯುವಕನ ಕುರಿತು ವ್ಯಂಗ್ಯ ಪೋಸ್ಟ್‌: ಇಬ್ಬರ ಬಂಧನ

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ವಿವಾಹಿತೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆಯ ನಿತೇಶ್ ಕೆ. (20) ಎಂಬಾತನನ್ನು ಪುತ್ತೂರು ತಾಲೂಕು ಕಲ್ಲಬ್ಬ ಜಂಕ್ಷನ್ ಬಳಿ ಜ.30ರಂದು ಹಾಗೂ ಕಡಬ ತಾಲೂಕು ಗುಂಡ್ಯ ಸಿರಿಬಾಗಿಲು ಗ್ರಾಮದ ಹಿತೇಶ್ ಎ.(19) ಎಂಬಾತನನ್ನು ಫೆ.1ರಂದು ಮಂಗಳೂರಿನ ಲಾಲ್‌ಬಾಗ್ ಬಳಿ ಪ್ರಕರಣಕ್ಕೆ […]

DAKSHINA KANNADA HOME LATEST NEWS

ಪುತ್ತೂರು: ಕಂಟೈನರ್ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿ

ಪುತ್ತೂರು: ಗೇರು ಬೀಜ ಸಾಗಣೆ ಕಂಟೈನರ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಬುಶ್ರಾ ವಿದ್ಯಾಸಂಸ್ಥೆಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನಿರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ‍ಪಡೆಯುತ್ತಿದ್ದಾರೆ. ಪುತ್ತೂರು ಕಡೆಯಿಂದ ಮೈಸೂರು ಕಡೆಗೆ ಗೇರು ಬೀಜದ ಮೂಟೆಗಳನ್ನು ಒಯ್ಯುತ್ತಿದ್ದ ಲಾರಿಯು ಪಿಕಪ್ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಹತೋಟಿ ಕಳೆದುಕೊಂಡು ಹೆದ್ದಾರಿ ಬದಿಯ ವಿದ್ಯುತ್ ಕಂಬಕ್ಕೆ […]

DAKSHINA KANNADA HOME

ಪುತ್ತೂರು: ನೆಟ್ಟಣಿಗೆ ಮುಡ್ನೂರಿನಲ್ಲಿ ಮಹಿಳಾ ಕಾಂಗ್ರೆಸ್ ಸಭೆ

ಪುತ್ತೂರು: ಕಾಂಗ್ರೆಸ್ ನ ನೆಟ್ಟಣಿಗೆ ಮೂಡ್ನೂರು ವಲಯದ ಮಹಿಳಾ ಘಟಕದ ಸಭೆ ನಿನ್ನೆ  ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಹಾಗೂ ಪುತ್ತೂರಿನ ಅಭಿವೃದ್ಧಿ ಬಗ್ಗೆ ಶಾಸಕರು ಬಿಡುಗಡೆಗೊಳಿಸಿದ ಅನುದಾನ, ಹಾಗೆಯೇ ಶಾಸಕರ ಅವಧಿಯಲ್ಲಿ ಮಹಿಳಾ ಕಾಂಗ್ರೆಸನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಬೂತ್ ಅಧ್ಯಕ್ಷರುಗಳ ನೇಮಕ, ನರೇಗಾ ಹಕ್ಕೊತ್ತಾಯ ಪಾದಯಾತ್ರೆಯ ಯಶಸ್ವಿಗೊಳಿಸುವ ವಿಚಾರ, ಹಾಗೆಯೇ ಜಿಲ್ಲಾ ಹಾಗೂ ನಗರ ಪಂಚಾಯತ್ ಚುನಾವಣೆಗೆ ಸೂಕ್ತ ಮಹಿಳಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ […]

DAKSHINA KANNADA HOME LATEST NEWS

ಮಂಗಳೂರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ106 ಕಿಲೋ ಗಾಂಜಾ ಪುತ್ತೂರಲ್ಲಿ ವಶ

ಪುತ್ತೂರು: ಕಾರು ಹಾಗೂ ಗೂಡ್ಸ್‌ ವಾಹನದಲ್ಲಿ 106 ಕಿಲೋ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಹಾಗೂ ಅದೇ ಗ್ರಾಮದ ರಫೀಕ್‌ ಪಿ(37) ಎಂದು ಗುರುತಿಸಲಾಗಿದೆ. ಘಟನೆ ವಿವರ ಜ.19 ರಂದು ಸಂಜೆ, ಒಂದು ಕಾರು ಮತ್ತು ಒಂದು ಅಶೋಕ್‌ ಲೈಲ್ಯಾಂಡ್‌ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ […]

DAKSHINA KANNADA HOME LATEST NEWS

ಪುತ್ತೂರು: ತೆಂಗಿನ ಮರದಲ್ಲಿ ಕಾಳುಮೆಣಸು ಕೀಳುತ್ತಿದ್ದಾಗ ನೆಲಕ್ಕೆ ಬಿದ್ದು ನಿವೃತ್ತ ಶಿಕ್ಷಕ ಸಾವು

ಪುತ್ತೂರು: ತೆಂಗಿನ ಮರಕ್ಕೆ ಹಬ್ಬಿದ್ದ ಕಾಳುಮೆಣಸಿನ ಗಿಡದಿಂದ ಕಾಳು ಮೆಣಸು ಕೀಳುವ ವೇಳೆ ನಿವೃತ್ತ ಶಿಕ್ಷಕರೊಬ್ಬರು ಬಿದ್ದು ಸಾವನಪ್ಪಿದ ಘಟನೆ ಬೆಟ್ಟಂಪಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಎಂದು ಗುರುತಿಸಲಾಗಿದೆ. ಘಟನೆ ಜನವರಿ 19 ರಂದು ನಡೆದಿದೆ. ಬೆಳಗ್ಗೆ ತನ್ನ ಮನೆ ಮುಂಭಾಗದಲ್ಲಿದ್ದ ತೆಂಗಿನ ಮರದಲ್ಲಿ ಬೆಳೆದಿದ್ದ ಕಾಳು ಮೆಣಸನ್ನು ಅಲ್ಯೂಮಿನಿಯಂ ಏಣಿ ಏರಿ ಕೊಯ್ಯುತ್ತಿದ್ದಾಗ ಏಣಿ ಸಹಿತ ಅವರು ಮರದಿಂದ ಜಾರಿ ಬಿದ್ದಿದ್ದಾರೆ. ಘಟನೆಯಿಂದ ನಾರಾಯಣ ನಾಯ್ಕರವರಿಗೆ […]

DAKSHINA KANNADA HOME LATEST NEWS

ಕಬಕ : ರಸ್ತೆ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9 ನೇ ಅಡ್ಡ ರಸ್ತೆಯಲ್ಲಿ ಸ್ಥಳೀಯ ಮನೆಗಳ ಸಂಪರ್ಕದ ರಸ್ತೆ ವಿವಾದ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಸೌಹಾರ್ಧಸಭೆಯಲ್ಲಿ ವಿವಾದವನ್ನು ಇತ್ಯರ್ಥಪಡಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲಿ 6 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಅಲ್ಲಿಗೆ ತೆರಳುವ ರಸ್ತೆಯ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿತ್ತು. ರಸ್ತೆಗಾಗಿ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹೋರಾಟವನ್ನೇ ಮಾಡಿದ್ದರು. ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಮಾತುಕತೆ ನಡೆದಿದ್ದು […]