canaratvnews

ಸುಳ್ಯ: ಕೆಲಸದಾಳುಗಳಿಂದಲೇ 1 ಲಕ್ಷ ರೂ.ಮೌಲ್ಯದ ಅಡಿಕೆ ಕಳವು

ಸುಳ್ಯ: ಕೆಲಸದಾಳುಗಳು ಸುಲಿದ ಅಡಿಕೆಯನ್ನು ಕಳವು ಮಾಡಿದ ಬಗ್ಗೆ ಸುಬ್ರಹ್ಮಣ್ಯ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಘಟನೆ ವಿವರ

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಾಳಿಕಾ ಪ್ರಸಾದ್ ಎಂಬುವವರ ಮನೆಗೆ ಪ್ರತಿನಿತ್ಯ ಪುತ್ತೂರಿನ ಕಾವೂರು ನಿವಾಸಿಗಳಾದ  ಸಂಪತ್ ಮತ್ತು ಹರ್ಷಿತ್ ಎಂಬುವವರು ಅಡಿಕೆ ತೋಟದ ಕೆಲಸಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಯಜಮಾನ ಕಾಳಿಕಾ ಪ್ರಸಾದ್ ಮನೆಯಲ್ಲಿ ಉಳಿದುಕೊಂಡು ಸಹ ಹೋಗುತ್ತಿದ್ದರು.

ಆದರೆ ಜ.17 ರಂದು ಇಬ್ಬರೂ ಕೆಲಸಗಾರರು ತಮ್ಮ ಮನೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದಾರೆ. ಈ ಹಿನ್ನೆಲೆ ಜ.19 ರಂದು ಕಾಳಿಕಾ ಪ್ರಸಾದ್‌ ತೋಟದ ಅಡಿಕೆಯನ್ನು ಇಡುವ ಗೋಡನ್ಗೆ ಹೋಗಿ  ಅಡಿಕೆಯನ್ನು ಗಮನಿಸಿದಾಗ ಗೋಡನ್ನಿಂದ ಅಡಿಕೆಯನ್ನು ತೆಗೆದಿರುವುದು ಕಂಡುಬಂದಿರುತ್ತದೆ. ಬಳಿಕ ಮನೆಯ ಸಿ.ಸಿ ಕ್ಯಾಮರವನ್ನು ಚೆಕ್ ಮಾಡಿದಾಗ ಸಿ.ಸಿ ಕ್ಯಾಮರದಲ್ಲಿ ಅಡಿಕೆ ಚೀಲಗಳನ್ನು ಕಾಳಿಕಾ ಪ್ರಸಾದ್‌ ಮನೆಯಲ್ಲಿ ಕೆಲಸ ಮಾಡುವ ಹರ್ಷಿತ್ ಎಂಬಾತನು ತೆಗೆದುಕೊಂಡು ಹೋಗುವುದು ಕಂಡುಬಂದಿರುತ್ತದೆ. ನಂತರ ಹರ್ಷಿತ್ನಲ್ಲಿ ವಿಚಾರಿಸಿದಾಗ ಆತನು ಸುಮಾರು 6 ಚೀಲ ಸುಲಿದ ಅಡಿಕೆಯನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಕಳವು ಮಾಡಿದ ಅಡಿಕೆಯ  ಮೌಲ್ಯ 1,00,000 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಯಲ್ಲಿ ಪ್ರಕರಣ ದಾಖಲಾಗಿದೆ.

Share News
Exit mobile version