canaratvnews

ಮಂಗಳೂರು: ಭಾರತೀಯ ಸೇನೆಗೆ ಅರ್ಜಿ ಆಹ್ವಾನ

ಮಂಗಳೂರು:- ಭಾರತೀಯ ಸೇನೆಗೆ ಅಗ್ನಿವೀರ್ ಮತ್ತು ಶಾಶ್ವತ ವರ್ಗಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವೆಬ್‍ಸೈಟ್ www.joinindianarmy.nic.in ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಅಗ್ನಿವರ್ಗ ಮತ್ತು ಶಾಶ್ವತ ವರ್ಗಕ್ಕೆ ಫೆಬ್ರವರಿ 13 ರಿಂದ ಆನ್‍ಲೈನ್ ಅರ್ಜಿ ತೆರೆಯಲಾಗಿದೆ. ಜೂನ್ 1 ರಿಂದ ಜೂನ್ 15 ರವರೆಗೆ ತಾತ್ಕಾಲಿಕವಾಗಿ ಆನ್‍ಲೈನ್ ಪರೀಕ್ಷೆ ನಿಗದಿಪಡಿಸಲಾಗಿದೆ.


ಅಗ್ನಿವೀರ್ ಜನರಲ್ ಡ್ಯೂಟಿ (ಜಿಡಿ) ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿರಬೇಕು. ಐದು ವಿಷಯಗಳಲ್ಲಿ ಒಟ್ಟು 45% ಅಂಕಗಳು ಹಾಗೂ ಪ್ರತಿಯೊಂದರಲ್ಲೂ ಕನಿಷ್ಠ 33% ಅಂಕಗಳು ಅಗತ್ಯ ಹಾಗೂ 17ಳಿ -22 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಯಾವುದೇ ವಿಭಾಗದಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದು, ಒಟ್ಟು 60% ಮತ್ತು ಪ್ರತಿ ವಿಷಯದಲ್ಲಿ 50% ಅಂಕಗಳು ಅಗತ್ಯ. ಇಂಗ್ಲಿμï ಹಾಗೂ ಗಣಿತ/ ಲೆಕ್ಕಪತ್ರ ನಿರ್ವಹಣೆ ಕಡ್ಡಾಯ ವಿಷಯಗಳು. ಅಗ್ನಿವೀರ್ ಟ್ರೇಡ್ಸ್‍ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿ ಉತ್ತೀರ್ಣರಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33% ಅಂಕಗಳು ಇರಬೇಕು.
ಅಗ್ನಿವೀರ್ ಟೆಕ್ನಿಕಲ್ ಹುದ್ದೆಗೆ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದು, ಒಟ್ಟು 50% ಹಾಗೂ ಪ್ರತಿ ವಿಷಯದಲ್ಲಿ 40% ಅಂಕಗಳು ಅಗತ್ಯ. ಅಥವಾ 10ನೇ ತರಗತಿಯೊಂದಿಗೆ 2 ವರ್ಷಗಳ ಐಟಿಐ ಪಠ್ಯಕ್ರಮ ಪೂರ್ಣಗೊಳಿಸಿದವರೂ ಅರ್ಜಿ ಸಲ್ಲಿಸಬಹುದು. ಅಗ್ನಿವೀರ್ ಟ್ರೇಡ್ಸ್‍ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿ ಉತ್ತೀರ್ಣರಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33% ಅಂಕಗಳು ಇರಬೇಕು.

ಹೆಚ್ಚಿನ ಮಾಹಿತಿಗೆ ಅಥವಾ ಯಾವುದೇ ಸಮಸ್ಯೆಯಾದಲ್ಲಿ ನಗರದ ಕೂಳೂರು ಸೇನಾ ನೇಮಕಾತಿ ಕಚೇರಿಗೆ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ 0824-2951276 ಅಥವಾ 7411497644 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share News
Exit mobile version