canaratvnews

UAE ಸೇರಿ ಗಲ್ಫ್‌ ರಾಷ್ಟ್ರಗಳ ಭಾರತೀಯರಿಗೆ ಟಿಕೆಟ್‌ ಆಫರ್‌ ಘೋಷಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಭಾರತ ನಡುವಿನ ವಿಮಾನ ಪ್ರಯಾಣ 2026ರಲ್ಲಿ ಇನ್ನಷ್ಟು ಕೈಗೆಟುವಂತಿದೆ. ಟಾಟಾ ಗ್ರೂಪ್‌ನ ಏರ್ ಇಂಡಿಯಾ ಎಕ್ಸ್‌ಪ್ರೆಸ್, ‘ಎಕ್ಸ್‌ಪ್ರೆಸ್ ಮೋರ್ ಸೇಲ್’ ಎಂಬ ಭಾರೀ ಟಿಕೆಟ್ ಮಾರಾಟವನ್ನು ಆರಂಭಿಸಿದೆ.

ಈ ಮಾರಾಟದ ಅಡಿಯಲ್ಲಿ ಯುಎಇ–ಭಾರತ ಮಾರ್ಗಗಳಿಗೆ ಒಂದು ದಿಕ್ಕಿನ ಮೂಲ ದರ ಕೇವಲ AED 320 (ಸುಮಾರು Dh350) ರಿಂದ ಲಭ್ಯವಿದ್ದು, ಲಕ್ಷಾಂತರ ವಲಸಿಗರು, ಕುಟುಂಬಗಳು ಹಾಗೂ ಬಜೆಟ್ ಪ್ರವಾಸಿಗರಿಗೆ ಮಹತ್ತರ ಲಾಭವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಿಸಿದಂತೆ, ಈ ವಿಶೇಷ ಸೇಲ್‌ ಫೆಬ್ರವರಿ 1ರಿಂದ ಆರಂಭಗೊಂಡಿದ್ದು, ಫೆಬ್ರವರಿ 5ರವರೆಗೆ ಬುಕ್ಕಿಂಗ್‌ ಮಾಡಲು ಅವಕಾಶವಿದೆ. ಈ ರಿಯಾಯಿತಿ ದರದಲ್ಲಿ ಬುಕ್ ಮಾಡಿದ ಟಿಕೆಟ್‌ಗಳ ಪ್ರಯಾಣಾವಧಿ ಫೆಬ್ರವರಿ 11ರಿಂದ ಡಿಸೆಂಬರ್ 31, 2026ರವರೆಗೆ ಮಾನ್ಯವಾಗಿರುತ್ತದೆ. ಇದರಿಂದ ಪ್ರಯಾಣಿಕರು ಹಬ್ಬಗಳು, ಶಾಲಾ ರಜೆಗಳು, ವ್ಯವಹಾರ ಹಾಗೂ ಕುಟುಂಬ ಭೇಟಿ ಸೇರಿದಂತೆ ವರ್ಷಪೂರ್ತಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬಹುದು.

ಈ ಮಾರಾಟವು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳನ್ನು ಒಳಗೊಂಡಿದ್ದು, ಒಟ್ಟು 50 ಲಕ್ಷಕ್ಕೂ ಹೆಚ್ಚು ಆಸನಗಳು ಲಭ್ಯವಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಶೂನ್ಯ ಕನ್‌ವೀನಿಯನ್ಸ್ ಫೀ ಹಾಗೂ ಒಂದು ಬಾರಿ ಉಚಿತ ದಿನಾಂಕ ಬದಲಾವಣೆಯ ಸೌಲಭ್ಯವೂ ಒದಗಿಸಲಾಗುತ್ತಿದೆ.

ಯುಎಇ ಸೇರಿದಂತೆ ಗಲ್ಫ್ ದೇಶಗಳಿಂದ ಪ್ರಯಾಣಿಸುವವರಿಗೆ ‘ಲೈಟ್ ಫೇರ್’ ವರ್ಗದ ಟಿಕೆಟ್‌ಗಳನ್ನು ಪರಿಚಯಿಸಲಾಗಿದ್ದು, ಇದು ಅತಿ ಕಡಿಮೆ ದರದ ಆಯ್ಕೆಯಾಗಿದ್ದು ಚೆಕ್-ಇನ್ ಬ್ಯಾಗೇಜ್ ಒಳಗೊಂಡಿಲ್ಲ. ಅಗತ್ಯವಿದ್ದರೆ ನಂತರ ಬ್ಯಾಗೇಜ್ ಸೇರಿಸಿಕೊಳ್ಳಬಹುದಾಗಿದೆ. ಆರಂಭಿಕ ಮೂಲ ದರಗಳು ಹೀಗಿವೆ:

ಈ ರಿಯಾಯಿತಿ ದರಗಳು ಗಲ್ಫ್ ದೇಶಗಳಲ್ಲಿ ವಾಸಿಸುವ ಭಾರತೀಯ ವಲಸಿಗರು, ವಿದ್ಯಾರ್ಥಿಗಳು ಹಾಗೂ ನಿರಂತರವಾಗಿ ಪ್ರಯಾಣಿಸುವವರಿಗೆ ದೊಡ್ಡ ಅವಕಾಶವನ್ನು ಒದಗಿಸುತ್ತಿವೆ ಎಂದು ವಿಮಾನಯಾನ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗೆಗಿನ ಹೆಚ್ಚಿನ ಮಾಹಿತಿಗೆ https://flights.airindiaexpress.com/en/ ಗೆ ಭೇಟಿ ನೀಡಿ.

Share News
Exit mobile version