COMMUNITY NEWSLATEST NEWS

ಕ್ಯಾಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಸಂಸ್ಥೆಗೆ ರಾಷ್ಟ್ರ ಮಟ್ಟದ ‘ಎಐಸಿಯು ಸರ್ವಿಸ್ ಗ್ರೇಟಿಟ್ಯೂಡ್ ಅವಾರ್ಡ್ 2026’ ಗೌರವ

ಮಂಗಳೂರು: ಹೊಸ ದೆಹಲಿಯ ಒಖ್ಲಾದಲ್ಲಿರುವ ಡೋನ್ ಬೋಸ್ಕೊ ಪ್ರೊವಿನ್ಶಿಯಲ್ ಹೌಸ್‌ನಲ್ಲಿ ಇತ್ತೀಚೆಗೆ ಜರುಗಿದ ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ (AICU) ಇದರ ವಾರ್ಷಿಕ ಮಹಾಸಭೆಯಲ್ಲಿ, ಪ್ರಸಿದ್ಧ ಸಾಮಾಜಿಕ ಸಂಸ್ಥೆಯಾದ ‘ಕ್ಯಾಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ)’ ಇದಕ್ಕೆ ಪ್ರತಿಷ್ಠಿತ ‘ಎಐಸಿಯು ಸರ್ವಿಸ್ ಗ್ರೇಟಿಟ್ಯೂಡ್ ಅವಾರ್ಡ್ 2026’ ನೀಡಿ ಗೌರವಿಸಲಾಯಿತು.

ಸಂಸ್ಥೆಯು ಸಮಾಜಕ್ಕೆ ನೀಡಿದ ನಿಸ್ವಾರ್ಥ ಮತ್ತು ಗಣನೀಯ ಸೇವೆಯನ್ನು ಗುರುತಿಸಿ ಈ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಸಂಸ್ಥೆಯ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿಲ್ಮಾ ಮೊಂತೇರೊ ಅವರು ಈ ಅತ್ಯುನ್ನತ ಗೌರವವನ್ನು ಸ್ವೀಕರಿಸಿದರು.

ಸ್ವೀಕರಿಸಿದರು.ಈ ಹೆಮ್ಮೆಯ ಕ್ಷಣದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿ ಸೋಜಾ, ಮಾಜಿ ಅಧ್ಯಕ್ಷರುಗಳಾದ ಶ್ರೀ ಲ್ಯಾನ್ಸಿ ಡಿಕುನ್ಹಾ ಹಾಗೂ ಶ್ರೀಮತಿ ಫ್ಲೇವಿ ಡಿ ಸೋಜಾ, ಮತ್ತು ಪ್ರಮುಖ ಸದಸ್ಯರಾದ ಶ್ರೀ ಆಲ್ವಿನ್ ಮಿನೇಜಸ್ ಹಾಗೂ ಶ್ರೀ ದೀಪಕ್ ಡಿ ಸೋಜಾ ಉಪಸ್ಥಿತರಿದ್ದು ಸಂಭ್ರಮವನ್ನು ಹಂಚಿಕೊಂಡರು. ಕ್ಯಾಥೊಲಿಕ್ ಸಭಾ ಸಂಸ್ಥೆಯ ಈ ಸಾಧನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಗಣ್ಯರು ಹಾಗೂ ಸಂಘ-ಸಂಸ್ಥೆಗಳು ತೀವ್ರ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Share News