ಬಂಟ್ವಾಳ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ದಾರಿಯ ನೆಪವೊಡ್ಡಿ ಚಿನ್ನದ ಕರಿಮಣಿ ಎಗರಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವಗ್ಗ ಜಂಕ್ಷನ್ ಬಳಿ ನಡೆದಿದೆ.

ಘಟನೆ ವಿವರ
55 ವರ್ಷದ ಪದ್ಮಾವತಿ ಎಂಬುವವರು ಜ.8 ರಂದು ಮಂಗಳೂರಿಗೆ ಹೋಗಿ ವಾಪಾಸು ಬರುತ್ತಾ ವಗ್ಗ ಜಂಕ್ಷನ್ ನಲ್ಲಿ ಬಸ್ಸಿನಿಂದ ಇಳಿದು ತನ್ನ ಮನೆಯಾದ ಕಂಗಿತ್ತಿಲು ಕಡೆಗೆ ಸಂಜೆ 4 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಅದೇ ರಸ್ತೆಯ ವಗ್ಗ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಒಬ್ಬಾತ ಅಪರಿಚಿತ ಹೆಲ್ಮೆಟ್ ಹಾಕಿಕೊಂಡು ಬಂದು ಪದ್ಮಾವತಿ ಅವರ ಬಳಿ ನಿಲ್ಲಿಸಿದ್ದಾನೆ. ನಂತರ ತುಳುವಿನಲ್ಲಿ ಕಕ್ಕೆಪದವುವಿಗೆ ಹೋಗುವ ರಸ್ತೆ ಯಾವುದು ಎಂಬುದಾಗಿ ಕೇಳಿದ್ದಾನೆ.
ಈ ವೇಳೆ ಪದ್ಮಾವತಿ ಅವರು ಕೈಸನ್ನೆ ಮಾಡಿ ಕಕ್ಕೆಪದವು ದಾರಿ ತೋರಿಸುತ್ತಿದ್ದಾರೆ. ತಕ್ಷಣ ಆತನು ಪದ್ಮಾವತಿ ಕೊರಳಿಗೆ ಕೈಹಾಕಿ ಧರಿಸಿದ್ದ ಚಿನ್ನದ ಕರಿಮಣಿ ಸರವನ್ನು ಕಸಿಯಲು ಪ್ರಯತ್ನಿಸಿದ್ದಾನೆ. ಆಗ ಪದ್ಮಾವತಿ ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆತನ ಕರಿಮಣಿಸರದ ತಾಳಿಯ ಭಾಗವನ್ನು ಎಳೆದಾಡಿದ್ದಾನೆ.
ಆ ರಭಸಕ್ಕೆ ಕರಿಮಣಿ ಸರದ ತಾಳಿ ಮತ್ತು ತಾಳಿಯ ಭಾಗದ ಸ್ವಲ್ಪ ಭಾಗವನ್ನು ಆತನು ಕೈ ಸೇರಿದೆ. ಈ ವೇಳೆ ಪದ್ಮಾವತಿ ಬೊಬ್ಬೆ ಹಾಕಿದಾಗ ಆತನು ಕಾರಿಂಜ ಕಡೆಗೆ ಪರಾರಿಯಾಗಿದ್ದಾನೆ.
ಅಪರಿಚಿತ ವ್ಯಕ್ತಿ ಕಸಿದುಕೊಂಡು ಹೋದ ಕರಿಮಣಿ ಸರದ ತುಂಡು ಹಾಗೂ ಚಿನ್ನದ ತಾಳಿಯಲ್ಲಿ ಒಟು ಸುಮಾರು 05 ಗ್ರಾಂ ಚಿನ್ನವಿದ್ದು ಅದರ ಅಂದಾಜು ಮೌಲ್ಯ 40000/- ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 04/2026 ಕಲಂ: 309(4) ಯಂತೆ ಪ್ರಕರಣ ದಾಖಲಾಗಿದೆ.