canaratvnews

ಸ್ನೇಹಿತರೊಂದಿಗೆ ಮಂಗಳೂರಿಗೆ ಹೋಗಿ ಬರುತ್ತೇನೆಂದ 23ರ ಯುವತಿ ನಾಪತ್ತೆ

ಮಂಗಳೂರು: 23 ವರ್ಷದ ಯುವತಿಯೋರ್ವಳು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖೈರುನ್ನಿಸ ಮಹಮ್ಮದ್ ನಾಸೀರ ಎಂಬುವವರ ಮಗಳಾದ ಶಾಹಿನ ಬಾನು  ಆ.7 ರಂದು ನಾನು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ. ತಡರಾತ್ರಿಯಾದರೂ ಮನೆಗೆ ಬಾರದೆ ಇರುವುದರಿಂದ, ಗಾಬರಿಗೊಂಡ ಮನೆಯವರು ನೆರೆಕರೆ ಮನೆಯವರಲ್ಲಿ ವಿಚಾರಿಸಿ ಸುತ್ತ ಮುತ್ತ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಕಂಡುಬಂದಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಕಾಣೆಯಾದವರ ಚಹರೆ ವಿವರ

:ಹೆಸರು: ಶಾಹಿನ ಬಾನು, ಪ್ರಾಯ:23 ವರ್ಷ, ಎತ್ತರ: 4.8 ಅಡಿ, ಬಣ್ಣ:ಗೋದಿ ಮೈ ಬಣ್ಣ, ಶರೀರ:ಸಾದಾರಣ ಮೈಕಟ್ಟು,ಕುದಲು: ಕಪ್ಪು ಕೂದಲು, ಧರಿಸಿದ ಬಟ್ಟೆ; ನಿಲಿ ಬಣ್ಣದ ಜೀನ್ಸ ಪ್ಯಾಂಟ್ ಹಾಗು  ಬಿಳಿ ಬಣ್ಣದ ಟಾಪ್  ಹಾಗೂ ಕಪ್ಪು  ಬಣ್ಣದ ಬುರ್ಖಾ ಬಾಷೆ:ಕನ್ನಡ ,ತುಳು,ಹಿಂದಿ,ಇಂಗ್ಲೀಷ್,ಬ್ಯಾರಿ ಭಾಷೆ ಮಾತನಾಡುತ್ತಾರೆ.

Share News
Exit mobile version