Site icon canaratvnews

ಕೊಣಾಜೆ: ಯುವತಿ ನಾಪತ್ತೆ

ಕೊಣಾಜೆ:  ಇಲ್ಲಿನ ಠಾಣಾ‌ ವ್ಯಾಪ್ತಿಯ ಮಹಿಳಾ ಆಶ್ರಯ ಕೇಂದ್ರದಲ್ಲಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಒಡಿಷಾ ಮೂಲದ ತ್ರಿಶಾ (22) ಎಂಬಾಕೆಯೇ ನಾಪತ್ತೆಯಾದ ಯುವತಿಯಾಗಿದ್ದು, ಈಕೆ ಜುಲೈ 30ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾಪತ್ತೆಯಾಗಿದ್ದಾಳೆ.  ಕಳೆದ‌ ವರ್ಷ ತ್ರಿಶಾ ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದಳು ಎನ್ನಲಾಗಿದ್ದು‌ ಬಳಿಕ, ಇತ್ತೀಚೆಗೆ ಮಡಿಪುವಿನ ಪ್ರಜ್ಞಾ ಆಶ್ರಯ ಮಂದಿರದಲ್ಲಿ ವಾಸವಾಗಿದ್ದಳು.

ಈಕೆ ಜುಲೈ 30 ರಂದು ರಾತ್ರಿ ಅಡುಗೆ ಕೋಣೆಯ ಬಾಗಿಲು ತೆರೆದು ಕೌಂಪೌಂಡು ಹಾರಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಕಾಣೆಯಾಗಿರುವ ಈಕೆಯ ಬಗ್ಗೆ ಪ್ರಜ್ಞಾ ಸ್ವಧಾರಾ ಕೇಂದ್ರದ ಅಧೀಕ್ಷಕಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News
Exit mobile version