ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಮಹಿಳಾ ಘಟಕದ ಅಧ್ಕಕ್ಷರಾಗಿ ಪೂರ್ಣಿಮಾ ಯತೀಶ್ ರೈ ಪುನರಾಯ್ಕೆಯಾಗಿದ್ದಾರೆ.
ಕೇಂದ್ರೀಯ ಮಹಿಳಾ ಘಟಕದ ಸಭೆ ಸುರತ್ಕಲ್ಲಿನ ಇಡ್ಯಾ ಮಹಾಲಿಂಗೇಶ್ವರ ದೇವಳದ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಹಿಂದಿನ ಕಾರ್ಯಕ್ರಮದ ಲೆಕ್ಕಾಚಾರ ಮಂಡನೆ ಮಾಡಲಾಯಿತು. ಬಳಿಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಪೂರ್ಣಿಮಾ ಯತೀಶ್ ರೈ, ಗೌರವಾಧ್ಯಕ್ಷರಾಗಿ ಆರತಿ ರಾಮಚಂದ್ರ ಆಳ್ವ, ಸಂಚಾಲಕರಾಗಿ ಸಹನಾ ರಾಜೇಶ್ ರೈ, ಸಹ ಸಂಚಾಲಕರಾಗಿ ಸುಜಾತಾ ಲೀಲಾಧರ್ ಶೆಟ್ಟಿ
ಗೌರವ ಸಲಹೆಗಾರರಾಗಿ ಶಕುಂತಲಾ ರಮಾನಂದ ಭಟ್ ಇಡ್ಯಾ, ಸಂಧ್ಯಾ ಐತಾಳ್, ಚಂದ್ರಕಲಾ. ಬಿ. ಶೆಟ್ಟಿ, ಅನಿತಾ ಪಿಂಟೋ, ಸುಲತಾ ಶೆಟ್ಟಿ, ಸುಮಂಗಲಾ ರತ್ನಾಕರ್, ನಿವೇದಿತಾ. ಎನ್. ಶೆಟ್ಟಿ, ಉಪಾಧ್ಯಕ್ಷರಾಗಿ ಕೇಸರಿ. ಎಸ್. ಪೂಂಜಾ ಹಾಗೂ ವೇದಾವತಿ. ಎನ್. ಶೆಟ್ಟಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಪ್ರಶಾಂತ್ ಶಾಸ್ತ್ರೀ ಕೋಶಾಧಿಕಾರಿಯಾಗಿ ಭಾರತಿ ಸಂಜಯ್ ರಾವ್ ಜೊತೆಕಾರ್ಯದರ್ಶಿಯಾಗಿ ಸಾಯಿಸುಮ ಎಮ್. ನಾವಡ ಹಾಗೂ ನಿರ್ಮಲಾ. ಆರಿಗ, ಸಂಘಟನಾ ಕಾರ್ಯದರ್ಶಿಯಾಗಿ ರೇವತಿ ನವೀನ್, ವಸುಂದರಾ ಹರೀಶ್, ಪಾರ್ವತಿ ಅಮೀನ್, ಸುಜಾತಾ ಲೋಲಾಕ್ಷ ಆಚಾರ್ಯ, ಚಂದ್ರಕಲಾ. ಎಸ್. ಶೆಟ್ಟಿ ಪಕ್ಷಿಕೆರೆ, ವತ್ತ್ಸಲಾ ಮಲ್ಲಿ, ಸುಜ್ಯೋತಿ ರಾವ್ ಆಯ್ಕೆಯಾದರು.
ಬಳಿಕ ಮಹಿಳಾ ಘಟಕದ ದಶಮ ಸಂಭ್ರಮದ ರೂಪುರೇಷೆಯ ಬಗ್ಗೆ ವಿಚಾರ ವಿಮರ್ಶೆ ಮಾಡಲಾಯಿತು. ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರೀ ಸ್ವಾಗತಿಸಿ ವಂದಿಸಿದರು . ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಪ್ರಸ್ತಾವಿಕವಾಗಿ ಮಾತನಾಡಿದರು.
