• Home  
  • ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ- ವಿಶ್ವ ಉರಗಳ ದಿನಾಚರಣೆ
- DAKSHINA KANNADA - LATEST NEWS

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ- ವಿಶ್ವ ಉರಗಳ ದಿನಾಚರಣೆ

ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ವಿಭಾಗದಿಂದ ವಿಶ್ವ ಉರಗಳ ದಿನಾಚರಣೆಯ ಪ್ರಯುಕ್ತ ವಿವಿಧ ರೀತಿಯ ಉರಗಗಳ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಗಾರ ವನ್ನು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ ವಿ ಅವರು ದೀಪ ಬೆಳಗಿಸುವುದ ಮೂಲಕ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುರತ್ಕಲ್ನ ಉರಗ ಸಂರಕ್ಷಕಾರರಾದ ಶ್ರೀ ಪ್ರಶಾಂತ್ ಕೃಷ್ಣ ಎಂ ಸಿ ಇವರು ಪ್ರಕೃತಿಯ ಸಮತೋಲನದಲ್ಲಿ ಉರಗಗಳ […]

Share News

ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ವಿಭಾಗದಿಂದ ವಿಶ್ವ ಉರಗಳ ದಿನಾಚರಣೆಯ ಪ್ರಯುಕ್ತ ವಿವಿಧ ರೀತಿಯ ಉರಗಗಳ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಗಾರ ವನ್ನು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನಡೆಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ ವಿ ಅವರು ದೀಪ ಬೆಳಗಿಸುವುದ ಮೂಲಕ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸುರತ್ಕಲ್ನ ಉರಗ ಸಂರಕ್ಷಕಾರರಾದ ಶ್ರೀ ಪ್ರಶಾಂತ್ ಕೃಷ್ಣ ಎಂ ಸಿ ಇವರು ಪ್ರಕೃತಿಯ ಸಮತೋಲನದಲ್ಲಿ ಉರಗಗಳ ಮಹತ್ವ, ವಿವಿಧ ಉರಗಗಳ ಪರಿಚಯ ಹಾಗೂ ಅದರ ಸಂರಕ್ಷಣೆಯ ಮಹತ್ವದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ನೀಡಿದರು.ಕಾರ್ಯಕ್ರಮವನ್ನು ಆಗದ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಅವಿನಾಶ್ ಕೆ ವಿ ಸ್ವಾಗತಿಸಿ, ಕುಮಾರಿ ನೀಲಿಮಾ ಮತ್ತು ಬಳಗದವರು ಪ್ರಾರ್ಥಿಸಿ, ಕುಮಾರಿ ಚಂದನ ಹಾಗೂ ಕಸ್ತೂರಿ ನಿರೂಪಿಸಿ, ಅಗದ ತಂತ್ರ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಪೂಜಾ ಕೆ ಇವರು ವಂದಿಸಿದರು.
ಕಾರ್ಯಕ್ರಮದ ವಂದನಾರ್ಪಣಾ ವೇದಿಕೆಯಲ್ಲಿ ಕಾಲೇಜಿನ ಮೆಡಿಕಲ್ ಆಫೀಸರ್ ಆದ ಡಾ ಸನತ್ ಕುಮಾರ್ ಡಿ ಜಿ ಹಾಗೂ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ ರಾಜಶೇಖರ ಎನ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share News