• Home  
  • *ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಆಚರಣೆ*
- DAKSHINA KANNADA

*ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಆಚರಣೆ*

ಮಂಗಳೂರು: ಫೆಬ್ರವರಿ 4 ರಂದು ವಿಶ್ವಾದ್ಯಂತ ಆಚರಿಸಲಾಗುವ ‘ವಿಶ್ವ ಕ್ಯಾನ್ಸರ್ ದಿನ’ದ ಅಂಗವಾಗಿ, ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ (FMMCH) ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಆಶಾ ಕಿರಣ್ ಬ್ಲಾಕ್‌ನ ಮುಂಭಾಗದಲ್ಲಿ ನಡೆಯಿತು. 2026ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯವಾದ “ಯುನೈಟೆಡ್ ಬೈ ಯುನಿಕ್” (United by Unique) ಅಡಿಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕರಾದ […]

Share News

ಮಂಗಳೂರು: ಫೆಬ್ರವರಿ 4 ರಂದು ವಿಶ್ವಾದ್ಯಂತ ಆಚರಿಸಲಾಗುವ ‘ವಿಶ್ವ ಕ್ಯಾನ್ಸರ್ ದಿನ’ದ ಅಂಗವಾಗಿ, ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ (FMMCH) ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಆಶಾ ಕಿರಣ್ ಬ್ಲಾಕ್‌ನ ಮುಂಭಾಗದಲ್ಲಿ ನಡೆಯಿತು.

2026ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯವಾದ “ಯುನೈಟೆಡ್ ಬೈ ಯುನಿಕ್” (United by Unique) ಅಡಿಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕರಾದ ವಂ. ಫಾ. ಫಾಸ್ಟಿನ್ ಲೂಕಾಸ್ ಲೋಬೋ ಅವರು ಮಾತನಾಡಿ, “ಕ್ಯಾನ್ಸರ್ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನೇ ಬಾಧಿಸುತ್ತದೆ. ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಭಾವನಾತ್ಮಕ ಬೆಂಬಲವೂ ಅಗತ್ಯ. ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಮತ್ತು ಆಹಾರ ಕಲಬೆರಕೆಯ ಬಗ್ಗೆ ನಾವು ಜಾಗರೂಕರಾಗಿರಬೇಕು” ಎಂದು ಕರೆ ನೀಡಿದರು.

ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ:
ಕಾರ್ಯಕ್ರಮದ ಅಂಗವಾಗಿ ಫಾದರ್ ಮುಲ್ಲರ್ ಫಿಸಿಯೋಥೆರಪಿ ಮತ್ತು ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ವಿದ್ಯಾರ್ಥಿಗಳಿಂದ ಆಕರ್ಷಕ ಫ್ಲ್ಯಾಶ್ ಮಾಬ್ (Flash Mob) ಪ್ರದರ್ಶನ ನಡೆಯಿತು. ಕ್ಯಾನ್ಸರ್ ವಿರುದ್ಧದ ಹೋರಾಟದ ಸಂಕೇತವಾಗಿ ಎಲ್ಲರೂ ನೇರಳೆ ಬಣ್ಣದ ರಿಬ್ಬನ್ ಧರಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದರು.

ಮುಂಬರುವ ಸಾರ್ವಜನಿಕ ಕಾರ್ಯಕ್ರಮಗಳು:
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫೆಬ್ರವರಿ ತಿಂಗಳ ಪೂರ್ತಿ ವಿವಿಧ ಸ್ಪರ್ಧೆ ಮತ್ತು ಶಿಬಿರಗಳನ್ನು ಆಯೋಜಿಸಲಾಗಿದೆ:
ಫೆಬ್ರವರಿ 13: ಸಂಸ್ಥೆಯ ಸಿಬ್ಬಂದಿಗಳಿಗಾಗಿ ಕ್ಯಾನ್ಸರ್ ಜಾಗೃತಿ ಉಪನ್ಯಾಸ.
ಫೆಬ್ರವರಿ 24 (ಬೆಳಿಗ್ಗೆ 9:00 – 1:00): ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನ ಮಿನಿ ಹಾಲ್‌ನಲ್ಲಿ ರಕ್ತದಾನ ಶಿಬಿರ, ಕೂದಲು ದಾನ ಅಭಿಯಾನ ಮತ್ತು ನೂಟ್ರಿಕೇರ್ ಸ್ಪರ್ಧೆ ನಡೆಯಲಿದೆ.


ಡಾ. ನಿಶಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಡಾ. ಎಲ್ರಾಯ್ ಸಲ್ಡಾನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಡಾ. ಚಂದನಾ ಪೈ ವಂದಿಸಿದರು.

Share News