canaratvnews

ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರು ಹೊಂದಿದ್ದ ಸಿ.ಜೆ. ರಾಯ್ ಯಾರು…?

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಅವರು ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ದಾಳಿ ನಡೆದಾಗ ಸ್ವತಃ ತಾವೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಸುದ್ದಿ ಈಗ ಉದ್ಯಮ ವಲಯಕ್ಕೆ ಬರ ಸಿಡಿಲಿನಂತೆ ಎರಗಿ ಬಂದಿದೆ.

Big Breaking: ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ ಡಾ ಸಿ.ಜೆ ರಾಯ್‌ ಆತ್ಮಹತ್ಯೆ

ಯಾರು ಈ ರಾಯ್‌?

ಮೂಲತಃ ಕೇರಳದವರಾಗಿದ್ದರೂ ಸಹ ಬೆಂಗಳೂರಿನಲ್ಲೇ ಬೆಳೆದಿದ್ದರು.  ಕೊಚ್ಚಿ ಕ್ರೈಸ್ತ ಧರ್ಮಕ್ಕೆ ಸೇರಿದರಾಗಿರುವ ರಾಯ್, ಫ್ರಾನ್ಸ್, ಸ್ವಿಜರ್ಲ್ಯಾಂಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಅವರು ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ದಾಳಿ ನಡೆದಾಗ ಸ್ವತಃ ತಾವೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಸುದ್ದಿ ಈಗ ಉದ್ಯಮ ವಲಯಕ್ಕೆ ಬರ ಸಿಡಿಲಿನಂತೆ ಎರಗಿ ಬಂದಿದೆ.

ಡ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ವ್ಯಾಸಂಗ ಮಾಡಿದ್ದರು.   ರಾಯ್ ಅವರ ಪತ್ನಿ ಹೆಸರು ಲಿನಿ ರಾಯ್, ಮಗ ರೋಹಿತ್, ಮಗಳು ರಿಯಾ.  2006ರವರೆಗೆ ಹ್ಯಾವ್ಲೆಟ್ ಪ್ಯಾಕರ್ಡ್ ಕಂಪನಿಯಲ್ಲಿ ಕೆಲಸ ಮಾಡಿದ್ದು. ನಂತರ ಕಾನ್ಫಿಡೆಂಟ್ ಗ್ರೂಪ್​​ನ ರಿಯಲ್ ಎಸ್ಟೇಟ್ ಸಮೂಹವನ್ನು ವಿಸ್ತರಿಸಲು ಶುರು ಮಾಡಿದ್ದರು. ರಾಯ್ ಕಾನ್ಷಿಡೆಂಟ್ ಗ್ರೂಪ್ನ ಚೇರ್ಮನ್ ಆಗಿದ್ದು, ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಲ್ಲದೇ ಗಲ್ಫ್ ಮತ್ತು ಕೇರಳ, ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು.

12 ರೋಲ್ಸ್ ರಾಯ್ಸ್ ಕಾರುಗಳ ಮಾಲೀಕ

ರಾಯ್ ಅವರು ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ, ದುಬೈ ಮತ್ತು ಭಾರತದಲ್ಲಿ ದುಬಾರಿ ಐಷಾರಾಮಿ ಮತ್ತು ಸ್ಫೋರ್​ಟ್ಸ್​​​ ಕಾರುಗಳ ಕಲೆಕ್ಷನ್ ಇವರ ಬಳಿ ಇವೆ. ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರ್ ಗಳನ್ನು ಹೊಂದಿದ್ದಾರೆ. ಇನ್ನು 10 ಕೋಟಿ ರೂಪಾಯಿ ಬೆಲೆಬಾಳುವ ಫ್ಯಾಂಟೋನ್-8 ಕಾರನ್ನು ಸಹ ಖರೀದಿಸಿದ್ದರು. ಅಲ್ಲದೇ ಕನ್ನಡ ಬಿಗ್ ಬಾಸ್ ವಿನ್ನರ್ ಗಳಿಗೆ 50 ಲಕ್ಷ ರೂಪಾಯಿ ಹಣವನ್ನು ಸಿ.ಜೆ.ರಾಯ್ ಪ್ರಾಯೋಕತ್ವ ಮಾಡುತ್ತಿದ್ದರು.

Share News
Exit mobile version