ಮಂಗಳೂರು:ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಅನುಭವಿಸುವ ಬೆಳೆ ನಷ್ಟವನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರವು 2026-27 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ‘ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ’ಯನ್ನು ಜಾರಿಗೊಳಿಸಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಈ ಯೋಜನೆಯಡಿ ಅಧಿಸೂಚಿಸಲಾಗಿದ್ದು, ನೋಂದಾವಣೆಗೆ ಕೊನೆಯ ದಿನಾಂಕವನ್ನು ಆಗಸ್ಟ್ 17, 2026 ರವರೆಗೆ ವಿಸ್ತರಿಸಲಾಗಿದೆ. ಬೆಳೆಸಾಲ ಪಡೆದ ಹಾಗೂ ಪಡೆಯದ ಇಬ್ಬರೂ ರೈತರು ಈ ಅವಧಿಯೊಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಪ್ರೀಮಿಯಂ ವಿವರ: ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರತಿ ಹೆಕ್ಟೇರ್ ಪ್ರೀಮಿಯಂ ಮೊತ್ತ ಕ್ರಮವಾಗಿ ಈ ಕೆಳಗಿನಂತಿದೆ: ಅಡಿಕೆ ಬೆಳೆ: ರೂ. 6,400 ಕಾಳುಮೆಣಸು ಬೆಳೆ: ರೂ. 2,350
ನೋಂದಣಿ ಪ್ರಕ್ರಿಯೆ: ಬೆಳೆಸಾಲ ಪಡೆದ ರೈತರು ತಾವೂ ಸಾಲ ಹೊಂದಿರುವ ಬ್ಯಾಂಕ್ ಶಾಖೆಗಳಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬಹುದು. ಇದರೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು (CSC) ಮತ್ತು ‘ಗ್ರಾಮ ಒನ್’ ಕೇಂದ್ರಗಳ ಮೂಲಕವೂ ನೋಂದಾವಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಮಾ ಅನುಷ್ಠಾನ ಸಂಸ್ಥೆಯಾಗಿ ‘ಟಾಟಾ ಎಐಜಿ’ (TATA AIG) ಕಂಪನಿಯು ಆಯ್ಕೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ರೈತರು ಹೆಚ್ಚಿನ ವಿವರಗಳಿಗಾಗಿ ತಮ್ಮ ವ್ಯಾಪ್ತಿಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಯನ್ನು ಕೆಳಗಿನ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ:
ದ.ಕ ಜಿಲ್ಲಾ ಕಚೇರಿ: 9448999226 ಮಂಗಳೂರು ತಾಲ್ಲೂಕು: 9449258204 ಬಂಟ್ವಾಳ ತಾಲ್ಲೂಕು: 9448206393 ಪುತ್ತೂರು ತಾಲ್ಲೂಕು: 9731854527 ಸುಳ್ಯ ತಾಲ್ಲೂಕು: 9483110621 ಬೆಳ್ತಂಗಡಿ ತಾಲ್ಲೂಕು: 9448336863 v ಟಾಟಾ ಎಐಜಿ ಪ್ರತಿನಿಧಿ: 8809140983ಅರ್ಹ ರೈತರು ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ, ತಕ್ಷಣವೇ ನೋಂದಾಯಿಸಿಕೊಂಡು ಹವಾಮಾನ ವೈಪರೀತ್ಯದ ನಷ್ಟದಿಂದ ರಕ್ಷಣೆ ಪಡೆಯಬೇಕಾಗಿ ತೋಟಗಾರಿಕೆ ಜಂಟಿ ನಿರ್ದೇಶಕರಾದ ಐ.ಕೆ. ದೊಡ್ಡಮನಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
