ಆಂಧ್ರ ಪ್ರದೇಶ, ಏಪ್ರಿಲ್ 15: ಮನೆ ಕಟ್ಟುವುದು ಎಲ್ಲರ ಕನಸು. ಹೀಗಾಗಿ ಸಾಲ ಮಾಡಿಯಾದರೂ ಸರಿಯೇ, ತಾವು ಅಂದುಕೊಂಡಂತೆ ಮನೆ ನಿರ್ಮಿಸಿಕೊಳ್ತಾರೆ. ತಾನು ಕಟ್ಟುವ ವಿಭಿನ್ನವಾಗಿ ರಬೇಕೆಂದು ಎಂದು ಬಯಸುವವರು ಇದ್ದಾರೆ. ವ್ಯಕ್ತಿಯೊಬ್ಬರು ತನ್ನ ಮನೆಯ ಮಹಡಿಯಲ್ಲಿ ನೀರಿನ ಟ್ಯಾಂಕ್‌ನ್ನು ಕಾರಿನ ರೀತಿ ನಿರ್ಮಿಸಿದ್ದಾರೆ.

ಇದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಅಡ್ಡಂಕಿ ಪಟ್ಟಣದ ಮನೆಮಾಲೀಕರೊಬ್ಬರ ಐಡಿಯಾ ಇದು. ಮನೆಯ ಮೇಲೆ ಹೊಚ್ಚ ಹೊಸ ಟಾಟಾ ಸುಮೋ ಆಕಾರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಾರಿನ ವಿನ್ಯಾಸಕ್ಕೆ ಒತ್ತು ನೀಡಿ ಕಟ್ಟಲಾದ ಈ ನೀರಿನ ಟ್ಯಾಂಕ್ ಎಲ್ಲರ ಗಮನ ಸೆಳೆಯುತ್ತಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ
ನೀರಿನ ಟ್ಯಾಂಕ್ ವಿನ್ಯಾಸ ಹೇಗಿದೆ
ಈ ಫೋಟೋ ನೋಡಿದರೆ ಕಾರು ನಿಜವಾಗಿಯೂ ಮನೆಯ ಮೇಲೆ ನಿಂತಿರುವಂತೆ ಕಾಣುತ್ತದೆ. ಆದರೆ, ನೀವು ಹತ್ತಿರದಿಂದ ನೋಡಿದಾಗ ಮಾತ್ರ ಅದು ಟಾಟಾ ಸುಮೋ ಅಲ್ಲ, ನೀರಿನ ಟ್ಯಾಂಕ್ ಎನ್ನುವುದು ತಿಳಿಯುತ್ತದೆ. ಟೈರ್‌ಗಳಿಂದ ಹಿಡಿದು ಕಿಟಕಿಗಳವರೆಗೆ, ಹಿಂಭಾಗದಲ್ಲಿರುವ ಬಿಡಿ ಚಕ್ರದವರೆಗೆ ಪ್ರತಿಯೊಂದು ಭಾಗಗಳನ್ನು ಬಹಳ ಸೂಕ್ಷ್ಮವಾಗಿ ನಿರ್ಮಿಸಲಾಗಿದೆ.
ಈ ಟ್ಯಾಂಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಧುನಿಕ ಕಾಲದಲ್ಲಿ ವಿವಿಧ ವಿನ್ಯಾಸಗಳಿಗೆ ಒತ್ತು ಕೊಡದೇ ಸೃಜನಾತ್ಮಕ ಐಡಿಯಾಗಳನ್ನು ಬಳಸಿಕೊಂಡಿದ್ದಾರೆ.