• Home  
  • ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲದ  ಉದ್ಘಾಟನೆ
- DAKSHINA KANNADA

ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲದ  ಉದ್ಘಾಟನೆ

ವಿಟ್ಲ: ಜೂನ್ 24  ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ವಿಟ್ಲ  ಶತಮಾನೋತ್ಸವ ಸಮುದಾಯ  ಭವನದಲ್ಲಿ ನಡೆಯಿತು. ಮುಖ್ಯ ಅತಿಥಿ ಶ್ರೀ. ಸುಪ್ರೀತ್ ಕೆ.ಸಿ ಪ್ರಾಂಶುಪಾಲರು ಸುದಾನ ಪದವಿ ಪೂರ್ವ ಕಾಲೇಜು ಪುತ್ತೂರು ಇವರು ಉಪಸ್ಥಿತರಿದ್ದು ಮಂತ್ರಿ ಮಂಡಲ ವಿಶೇಷ ಹಾಗೂ ಉತ್ತಮ ನಾಯಕತ್ವದ ಮಹತ್ವ ಬಗ್ಗೆ ತಿಳಿಸಿದರು . ಶಾಲಾ ಸಂಚಾಲಕರಾದ ಫಾ. ಐವನ್ ಮೈಕೆಲ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಫಾ […]

Share News

ವಿಟ್ಲ: ಜೂನ್ 24  ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ವಿಟ್ಲ  ಶತಮಾನೋತ್ಸವ ಸಮುದಾಯ  ಭವನದಲ್ಲಿ ನಡೆಯಿತು. ಮುಖ್ಯ ಅತಿಥಿ ಶ್ರೀ. ಸುಪ್ರೀತ್ ಕೆ.ಸಿ ಪ್ರಾಂಶುಪಾಲರು ಸುದಾನ ಪದವಿ ಪೂರ್ವ ಕಾಲೇಜು ಪುತ್ತೂರು ಇವರು ಉಪಸ್ಥಿತರಿದ್ದು ಮಂತ್ರಿ ಮಂಡಲ ವಿಶೇಷ ಹಾಗೂ ಉತ್ತಮ ನಾಯಕತ್ವದ ಮಹತ್ವ ಬಗ್ಗೆ ತಿಳಿಸಿದರು .

ಶಾಲಾ ಸಂಚಾಲಕರಾದ ಫಾ. ಐವನ್ ಮೈಕೆಲ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಫಾ ಅಮಿತ್ ಪ್ರಕಾಶ್ ರೋಡ್ರಿಗಸ್ ಮತ್ತು ಮುಖ್ಯ ಶಿಕ್ಷಕಿ ಸಿಸ್ಟರ್ ಮರೀನಾ ಹಾಗೂ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀ ವಿಜಯ್ ಪಾಯ್ಸ್ ಮತ್ತು ಕಾರ್ಯದರ್ಶಿ ಶ್ರೀಮತಿ ಶ್ವೇತಾ ಪಾಯ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ನೃತ್ಯ,ಹಾಡುಗಳೊಂದಿಗಿನ ಕಾರ್ಯಕ್ರಮ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ. ಸಮಾರಂಭವನ್ನು ಸಹ ಶಿಕ್ಷಕಿ ಮೆಟ್ಟಿಲ್ಡ ಇವರು ನಿರೂಪಿಸಿದ್ದು, ಸಹಶಿಕ್ಷಕಿ ವೈಶಾಲಿ ಇವರು ವಂದಿಸಿದರು. ಕಾರ್ಯಕ್ರಮವನ್ನು ಸೋನಿಯಾ ಮತ್ತು ಮೆಟಿಲ್ಡಾ ಇವರು ಉತ್ತಮವಾಗಿ ಸಂಘಟಿಸಿದರು.

Share News