canaratvnews

ಅಪ್ರಾಪ್ತೆಗೆ ಕಿರುಕುಳ ನೀಡಿದ ಪ್ರಕರಣ: ಅರೋಪಿ ಮಹೇಶ್ ಭಟ್‌ಗೆ ಜಾಮೀನು

ಮಂಗಳೂರು: ಬಂಟ್ವಾಳ ತಾಲೂಕಿನ ಮಾಣಿಲದ ದಲಿತ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಸ್.ಟಿ.ಎಸ್.ಸಿ.-1 (ಪೊಕ್ಸೊ ನ್ಯಾಯಾಲಯ) ಸೋಮವಾರ ಶರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಆರೋಪಿ ಮಹೇಶ್ ಭಟ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ವಿಶೇಷ ಸರಕಾರಿ ಅಭಯೋಜಕರ, ಅರ್ಜಿದಾರ ಪರ ವಕೀಲರ ಮತ್ತು ಪಿರ್ಯಾದಿದರಾರರು ಮತ್ತಾಕೆಯ ಹೆತ್ತವರನ್ನು ನ್ಯಾಯಾಧೀಶರು ವಿಚಾರಣೆಗೊಳಪಡಿಸಿದ್ದರು.

ಕೃತ್ಯ ನಡೆಸಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ, ಆತನನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣದಲ್ಲಿ ವಿಟ್ಲ ಪೊಲೀಸರ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಆರೋಪಿ ಮಹೇಶ್ ಭಟ್ ಪರವಾಗಿ ನ್ಯಾಯವಾದಿಗಳಾದ ಕೊಮ್ಮೆ ರಾಜೇಶ್ ಕೆ.ಜಿ., ಶಾದತ್ ಅನ್ವರ್ ಪಿ.ಎಂ., ಬಾಯರ್ ಅಬ್ದುಲ್ ಅಝೀಝ್ ಎಂ. ವಾದಿಸಿದ್ದರು.

Share News
Exit mobile version