ಅಡುಗೆ ಅನಿಲದ ದರ ಏರಿಸಿದ ಕೇಂದ್ರ: 50 ರೂ. ಹೆಚ್ಚಳ
ಮಂಗಳೂರು: ದಿನನಿತ್ಯದ ವಸ್ತುಗಳ ದರ ಹೆಚ್ಚಳದ ನಡುವೆಯೇ ಅಡುಗೆ ಅನಿಲದ ದರವನ್ನು 50 ರೂಪಾಯಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಇದು ಸಾಮಾನ್ಯ ಸಿಲಿಂಡರ್ ಜತೆ ಉಜ್ವಲಾ ಯೋಜನೆಗೂ ಅನ್ವಯವಾಗಲಿದೆ. ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಅಡುಗೆ ಅನಿಲದ ದರವನ್ನು ಉಜ್ವಲಾ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೆಚ್ಚಿಸಲಾಗಿದೆ. ಹೊಸ ದರದ ಅನ್ವಯ 14.2 ಕೇಜಿ ಅಡುಗೆ ಅನಿಲದ ದರ […]