ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ನಿರಂತರ ಜನಸೇವೆಯ ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ರವರ ಮಾರ್ಗದರ್ಶನದೊಂದಿಗೆ ‘ವಿಕಸಿತ ಭಾರತ’ ಕಲ್ಪನೆಯಡಿ ಹಮ್ಮಿಕೊಳ್ಳಲಾಗಿದ್ದ ಬೃಹದಾಕಾರದ “ರಾಷ್ಟ್ರದೊಂದಿಗೆ ರಂಗೋಲಿ” ಕಾರ್ಯಕ್ರಮವು ಇಲ್ಲಿನ ಕುದ್ರೋಳಿ ಭಗವತಿ ದೇವಸ್ಥಾನದ ಕೂಟಕ್ಕಳ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರು, “ಇದು ಕೇವಲ ಕಲಾತ್ಮಕ ರಂಗೋಲಿಯಲ್ಲ. 2047ರ ವೇಳೆಗೆ ಭಾರತವನ್ನು ಜಗತ್ತಿನ ಮುಂಚೂಣಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಪ್ರಧಾನಿಯವರ ಕನಸಿಗನುಗುಣವಾಗಿ ಮೂಡಿಬಂದಿರುವ ವಿಶಿಷ್ಟ ರಾಷ್ಟ್ರಪ್ರೇಮದ ರಂಗೋಲಿಯಾಗಿದೆ,” ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದರಾದ ಕ್ಯಾ. ಬೃಜೇಶ್ ಚೌಟ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ಭಾರತವು ಇಂದು ಹಿಂದೆಂದೂ ಕಂಡಿರದ ಅಭಿವೃದ್ಧಿ ಸಾಧಿಸುತ್ತಿದೆ. ಕೇಂದ್ರ ಸರ್ಕಾರದ ಈ ಐತಿಹಾಸಿಕ ಸಾಧನೆಗಳು ಮತ್ತು ಜನಪರ ಕಾರ್ಯಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಸುಜೀತ್ ಪ್ರತಾಪ್, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಂದನ್ ಮಲ್ಯ, ಮಂಜುಳಾ ರಾವ್, ವಸಂತ ಪೂಜಾರಿ, ಸಂಧ್ಯಾ ವೆಂಕಟೇಶ್, ವಿಜಯ ಕುಮಾರ್ ಶೆಟ್ಟಿ, ದೀಪಕ್ ಪೈ, ಗೌತಮ್ ಕೋಡಿಕಲ್, ಜಯ ಕುಮಾರ್, ಅಮಿತ್ ರಾಜ್, ಶಬರೀಶ್, ಮೋಹನ್ ಪೂಜಾರಿ, ರವಿಚಂದ್ರ, ಪ್ರವೀಣ್ ನಿಡ್ಡೆಲ್, ಉದಯ್ ಡಿಸೋಜಾ, ಪ್ರಶಾಂತ್ ಮರೋಳಿ, ಪೂರ್ಣಿಮ ರಾವ್, ಲೀಲಾವತಿ ಪ್ರಕಾಶ್, ಚಂದ್ರಾವತಿ ವಿಶ್ವನಾಥ್, ಗಣೇಶ್ ಕುಲಾಲ್, ಶೋಭಾ ಪೂಜಾರಿ ಮತ್ತು ವೀಣಾ ಮಂಗಳ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಕಸಿತ ಭಾರತದ ಕಲ್ಪನೆಯ ಬೃಹತ್ ರಂಗೋಲಿಯನ್ನು ಅದ್ಭುತವಾಗಿ ರಚಿಸಿದ ಪ್ರಸಿದ್ಧ ರಂಗೋಲಿ ಕಲಾವಿದರಾದ ಶ್ರೀ ಸತೀಶ್ಚಂದ್ರ ಮತ್ತು ಶ್ರೀಮತಿ ವೀಣಾ ಐತಾಳ್ ದಂಪತಿಯನ್ನು ಗೌರವಿಸಲಾಯಿತು.

