canaratvnews

ಸೂಸೈಡ್‌ ವೇಳೆ ದೇಹದಿಂದ ಬೇರ್ಪಟ್ಟ ರುಂಡ……!

ಉಡುಪಿ:  ಬಾವಿಗೆ ಹಾರಿ ಆತ್ಮಹತ್ಯೆ ವೇಳೆ ದೇಹದಿಂದ ರುಂಡ ಬೇರ್ಪಟ್ಟ ಹೃದಯ ವಿದ್ರಾವಕ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಕಕ್ಕುಂಜೆ ನಿವಾಸಿ ಪುರುಷೋತ್ತಮ ನಾಯಕ್ (52) ದುರಂತ ರೀತಿಯಲ್ಲಿ ಆತ್ಮಹತ್ಯೆ ಶರಣಾದ ವ್ಯಕ್ತಿ. ಇವರು ನಿನ್ನೆ ತಡರಾತ್ರಿ ಮನೆಯ ಬಾವಿಯ ನೈಲಾನ್ ಹಗ್ಗ ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ದೇಹದಿಂದ ರುಂಡ ಬೇರ್ಪಟ್ಟಿದೆ.

ಇವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರ. ಮಣಿಪಾಲದ ವ್ಯಾಲಿವ್ಯೂ ಹೋಟೆಲಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು.‌ ಅಕ್ಕ ಪಕ್ಕದ ಮನೆಯಲ್ಲಿ ಹಿರಿಯ ಮಗ ಗುರು ಹಾಗೂ ಮೃತ ಪುರುಷೋತ್ತಮ ನಾಯಕ್ ವಾಸ ಮಾಡುತ್ತಿದ್ದರು. ಮೃತರು ಆರ್ಥಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಸ್ಥಳೀಯರ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತರು ಕಕ್ಕುಂಜೆಯ ಕಟ್ಟೆಮಹಾದೇವಿ ದೇವಸ್ಥಾನದ ‌ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪುರುಷೋತ್ತಮ ನಾಯಕ್ ಕುಟುಂಬ ಬಹಳಷ್ಟು ಖ್ಯಾತಿಯನ್ನು ಪಡೆದಿತ್ತು.

Share News
Exit mobile version