• Home  
  • ಪುತ್ತೂರು: ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ
- DAKSHINA KANNADA - HOME - LATEST NEWS

ಪುತ್ತೂರು: ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ

ಪುತ್ತೂರು: ಪುತ್ತೂರಿನ ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ ಮಾಡಿದ ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರಿನ ಬನ್ನೂರು ಸಂತ ಅಂತೋಣಿ ಚರ್ಚ್‌ನ ಅಧೀನದಲ್ಲಿರುವ ಕ್ರೈಸ್ತ ದಫನ್ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಜೂ.14 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಧರ್ಮಗುರುಗಳು ಫಾ.ಬಾಲ್ತಿಜಾರ್ ಪಿಂಟೋ ನೀಡಿದ ದೂರಿನ ಮೇರೆಗೆ, ದೂರರ್ಜಿಯನ್ನು ದಾಖಲಿಸಿಕೊಂಡಿದ್ದು, ಘಟನಾಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ […]

Share News

ಪುತ್ತೂರು: ಪುತ್ತೂರಿನ ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ ಮಾಡಿದ ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರಿನ ಬನ್ನೂರು ಸಂತ ಅಂತೋಣಿ ಚರ್ಚ್‌ನ ಅಧೀನದಲ್ಲಿರುವ ಕ್ರೈಸ್ತ ದಫನ್ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಜೂ.14 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಧರ್ಮಗುರುಗಳು ಫಾ.ಬಾಲ್ತಿಜಾರ್ ಪಿಂಟೋ ನೀಡಿದ ದೂರಿನ ಮೇರೆಗೆ, ದೂರರ್ಜಿಯನ್ನು ದಾಖಲಿಸಿಕೊಂಡಿದ್ದು, ಘಟನಾಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News