canaratvnews

ಸಂತ ರೀಟಾ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ 2025-26 ಆಯೋಜಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ. ಜಿ. ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಂ. ಫಾ. ಐವನ್ ಮೈಕಲ್ ರೋಡ್ರಿಗಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕ್ರೀಡಾ ಪರಿವೀಕ್ಷಕರಾದ ಆಶಾ ನಾಯಕ್, ದೈಹಿಕ ಶಿಕ್ಷಕರ ಸಂಘ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ರೈ, ಕ್ರೀಡಾ ನೋಡೆಲ್ ಅಧಿಕಾರಿ ವಿಟ್ಲ ಕ್ಲಸ್ಟರ್ ಸುರೇಶ್ ಶೆಟ್ಟಿ, ಜಂಟಿ ಶಾಲಾ ಮುಖ್ಯಸ್ಥ ವಂ. ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಸಿ. ಮರೀನಾ, ಸಿ. ಜಾನೆಟ್, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ವಿಜಯ್ ಪಾಯ್ಸ್, ಕಾರ್ಯದರ್ಶಿ ಶ್ವೇತಾ ಪಾಯ್ಸ್ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭವನ್ನು ಶಾಲೆಟ್ ಇವರು ನಿರೂಪಿಸಿದರೆ, ಸಮಾರೋಪ ಸಮಾರಂಭವನ್ನು ವಿಜಯಲಕ್ಷ್ಮಿ ನಿರೂಪಿಸಿದರು.

ವಿಜೇತರ ವಿವರ:

14ರ ವಯೋಮಾನ ಬಾಲಕರ ವಿಭಾಗ
ಪ್ರಥಮ – ಕಾವಳಕಟ್ಟೆ
ದ್ವಿತೀಯ -ಗುಣಶ್ರೀ ವಿದ್ಯಾಲಯ
14 ವಯೋಮಾನ ಬಾಲಕಿಯರ ವಿಭಾಗ
ಪ್ರಥಮ-ಇಂಫ್ಯಾಂಟ್ ಜೀಸಸ್ ಮೊಡಂಕಾಪ್
ದ್ವಿತೀಯ- ಕಾವಳಕಟ್ಟೆ
17 ರ ವಯೋಮಾನ ಬಾಲಕರು
ಪ್ರಥಮ- ಪುಣ್ಯಕೋಟಿ ಕೈರಂಗಳ
ದ್ವಿತೀಯ- SVS ವಿದ್ಯಾಗಿರಿ ಬಂಟ್ವಾಳ
17ರ ವಯೋಮಾನ ಬಾಲಕಿಯರು ವಿಭಾಗ
ಪ್ರಥಮ- ನಾರ್ಶ ಮೈದಾನ
ದ್ವಿತೀಯ- ತುಂಬೆ

Share News
Exit mobile version