Tag: ಕೆನರಾಟಿವಿ

COMMUNITY NEWS HOME INETRNATIONAL LATEST NEWS

“ಚರ್ಚ್‌ಗಳು ಬಡವರ ಪರವಾಗಿ ಇರಬೇಕು” ಎಂದಿದ್ದ ಪೋಪ್‌ ಫ್ರಾನ್ಸಿಸ್‌

ವ್ಯಾಟಿಕನ್‌ ಸಿಟಿ: ಪೋಪ್ ಫ್ರಾನ್ಸಿಸ್ ಅವರು ತಮ್ಮ ಸರಳತೆ ಹಾಗೂ ಸಹಾನೂಭೂತಿಯ ಮೂಲಕ ಜನರ ಪೋಪ್‌ ಎಂದು ಹೆಗ್ಗಳಿಕೆ ಗಳಿಸಿದ್ದರು. ಇದೇ ಕಾರಣಕ್ಕೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದ ಸಂದರ್ಭದಲ್ಲೇ, ಚರ್ಚ್‌ನೊಳಗಿನ ಸಂಪ್ರದಾಯವಾದಿಗಳಿಂದ ವಿರೋಧವನ್ನೂ ಎದುರಿಸಿದ್ದಾರೆ. “ಚರ್ಚ್‌ಗಳು ಬಡವರ ಪರವಾಗಿ ಇರಬೇಕು” 13ನೇ ಶತಮಾನದಲ್ಲಿ ಪೋಪ್‌ ಆಗಿದ್ದ, ತನ್ನೆಲ್ಲಾ ಸಂಪತ್ತನ್ನು ತ್ಯಜಿಸಿ ಬಡವರಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸೇಂಟ್‌ ಫ್ರಾನ್ಸಿಸ್‌ ಬಳಿಕ ಫ್ರಾನ್ಸಿಸ್‌ ಎಂಬ ಹೆಸರನ್ನು ಪಡೆದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.‘ಚರ್ಚ್‌ಗಳು ಬಡವರ ಪರವಾಗಿ […]

DAKSHINA KANNADA HOME LATEST NEWS

ಪೆಹಲ್ಗಾಮ್ ದುಷ್ಕೃತ್ಯ: ಬಿಷಪ್‌ ಖಂಡನೆ

ಮಂಗಳೂರು: ಭಾರತದ ಮುಕುಟಮಣಿ ಎನ್ನಿಸಿರುವ ಕಾಶ್ಮೀರದಲ್ಲಿ ಪ್ರವಾಸಕ್ಕಾಗಿ ತೆರಳಿದ್ದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ, ಯಾವುದೇ ತಪ್ಪೆಸಗದವರ ಮೇಲೆ ಏಕಾಏಕಿ ಗುಂಡಿಟ್ಟು ಕೊಂದಿರುವುದು ಮಾನವತೆಗೆ ಕಳಂಕ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಅತಿ ವಂದನೀಯ ಡಾ.ಪೀಟರ್‌ ಪಾವ್ಲ್‌ ಸಾಲ್ಡನ್ಹಾ ಅವರು ಖೇದ ವ್ಯಕ್ತಪಡಿಸಿದ್ದಾರೆ. ರಜೆಯಲ್ಲಿ ಕುಟುಂಬಗಳು, ಮಹಿಳೆಯರು ಮಕ್ಕಳ ಸಹಿತ ಕಾಶ್ಮೀರ ಪಹಲ್ಗಾಮ್‌ಗೆ ಪ್ರವಾಸ ತೆರಳಿದ್ದರು. ಅಲ್ಲಿ ಮುಖ್ಯವಾಗಿ ಪುರುಷರನ್ನೇ ಗುರಿಯಾಗಿಸಿ ಉಗ್ರರು 26 ಮಂದಿಯ ತಲೆಗೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. […]

HOME INETRNATIONAL LATEST NEWS

ಏ.26 ರಂದು ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ: ಹಲವು ದೇಶದ ಗಣ್ಯರು ಭಾಗಿ

ವ್ಯಾಟಿಕನ್‌ ಸಿಟಿ: ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಚ ಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.  ಪೋಟೋ ಕೃಪೆ (VATICAN MEDIA Divisione) ವ್ಯಾಟಿಕನ್‌ನಲ್ಲಿ ಮಂಗಳವಾರ ನಡೆದ ಕಾರ್ಡಿನಲ್‌ಗಳ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ, ಪೋಪ್‌ರ ಮೃತದೇಹವನ್ನು ಸೇಂಟ್ ಪೀಟರ್ಸ್ ಬೆಸಿಲಿಕಾಗೆ ತಂದ ಬಳಿಕ ಬುಧವಾರದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಏ.26ರಂದು ಬೆಳಗ್ಗೆ 10 ಗಂಟೆಗೆ ಸೇಂಟ್‌ ಪೀಟರ್‌ ಸ್ಕೈರ್‌ನಲ್ಲಿ ಅಂತ್ರಕ್ರಿಯೆಯ ಬಲಿಪೂಜೆ ನಡೆಸಲಾಗುವುದು. ಈ ಬಲಿಪೂಜೆಯು ಕಾಲೇಜ್‌ […]

DAKSHINA KANNADA HOME LATEST NEWS

ಪಾಕ್‌ ಗಡಿ ಬಂದ್‌; ಪಾಕಿಸ್ತಾನಿಯರಿಗೆ ಭಾರತ ಪ್ರವೇಶ ನಿಷೇಧ ಸೇರಿ ಐದು ಮಹತ್ವದ ನಿರ್ಧಾರ

ನವದೆಹಲಿ: ಪೆಹಲ್ಗಾಮ್‌ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ವಿರುದ್ಧ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ನಡೆದ ಸಭೆಯಲ್ಲಿ ಭಾರತ ಗಡಿಯಾಚೆಗಿನ ಭಯೋತ್ಪಾದನೆ ಕೊನೆಗೊಳಿಸಲು ಮತ್ತು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಇಂದು ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆದಿದೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ […]

COMMUNITY NEWS DAKSHINA KANNADA HOME LATEST NEWS

ಕರಾವಳಿಯಲ್ಲಿ ಈಸ್ಟರ್‌ ಈವ್‌ ಆಚರಿಸಿದ ಕ್ರೈಸ್ತರು

ಮಂಗಳೂರು: ಕರಾವಳಿಯ ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಿದ್ದಾರೆ. ಮಂಗಳೂರಿನ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈಸ್ಟರ್ ಜಾಗರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸಿದರು. ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ ನಡೆಯಿತು. ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಗಳು ಆರಂಭಗೊಂಡವು. ಸಂಜೆಯ ವೇಳೆ ಚರ್ಚ್‌ಗಳಲ್ಲಿ ಜತೆಯಾದ ಕ್ರೈಸ್ತರು, ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು(ಬೆಂಕಿ) ಆಶೀರ್ವಚನ […]

HOME LATEST NEWS STATE

ಮಾಜಿ ಡಾನ್​​ ಮುತ್ತಪ್ಪ ರೈ ಮಗನ ಮೇಲೆ ಗುಂಡಿನ ದಾಳಿ

ಮಂಗಳೂರು: ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ ಘಟನೆ ನಿನ್ನೆ ರಾತ್ರಿ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ ನಡೆದಿದೆ. ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈ, ಪ್ರತಿ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್​ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ರಾತ್ರಿ ಸುಮಾರು 11.30ಕ್ಕೆ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಹಿಂಬದಿ […]

HOME LATEST NEWS NATIONAL

ಇಂದು ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ…!

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭರ್ಜರಿ ಹೆಚ್ಚಳ ಆಗಿದೆ. ಒಂದೇ ದಿನಕ್ಕೆ ಗುರುವಾರ ಸಾವಿರ ರೂಪಾಯಿ ಮೇಲ್ಪಟ್ಟು ಏರಿಕೆ ಆಗಿತ್ತು, ಇದೀಗ ಗುಡ್‌ಫ್ರೈಡೆ ದಿನವೂ 250 ರೂ ಹೆಚ್ಚಳ ಆಗಿದೆ. ಇಂದಿನ ಬೆಲೆ ಎಷ್ಟಿದೆ? ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಗ್ರಾಂ ಒಂದಕ್ಕೆ ಬರೋಬ್ಬರಿ 25 ರೂಪಾಯಿ ಹೆಚ್ಚಳ ಆಗಿದೆ. ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,945 ರೂ ಇದ್ದು, 24 ಕ್ಯಾರೆಟ್ 1 ಗ್ರಾಂ ಬೆಲೆ 27 […]

HOME LATEST NEWS

ಸ್ನೇಹಾಲಯ- ಜನಮೈತ್ರಿ ಪೊಲೀಸ್ ಸಂಘಟನೆಯಿಂದ ಉಪ್ಪಳ & ಹೊಸಂಗಡಿಯಲ್ಲಿ ಡ್ರಗ್ ವಿರೋಧಿ ಜನಜಾಗೃತಿ

ಕಾಸರಗೋಡು: ಸಮಾಜದೊಳಗೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಮಾದಕವಸ್ತು ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸ್ನೇಹಾಲಯ ಡಿ ಅಡಿಕ್ಶನ್ ಸೆಂಟರ್ ಹಾಗೂ ಮಂಜೇಶ್ವರದ ಜನಮೈತ್ರಿ ಪೊಲೀಸ್ ಠಾಣೆ ಹಾಗೂ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘಟನೆಯ ಜಂಟಿ ಆಶ್ರಯದಲ್ಲಿ ಉಪ್ಪಳ ಹಾಗೂ ಹೊಸಂಗಡಿ ಬಸ್ ನಿಲ್ದಾಣಗಳಲ್ಲಿ ಭಾವಪೂರ್ಣ ಬೀದಿ ನಾಟಕ ಹಾಗೂ ಮೈಮ್ ಕಾರ್ಯಕ್ರಮಗಳು ಏರ್ಪಡಿಸಲ್ಪಟ್ಟವು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳು, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದ ಮೇಲೆ ಬೀರುವ […]

DAKSHINA KANNADA HOME LATEST NEWS

ಉಳ್ಳಾಲದಲ್ಲಿ ಯುವತಿಯ ಗ್ಯಾಂಗ್‌ರೇ*ಪ್‌ ಆರೋಪ: ಮೂವರ ಬಂಧನ

ಮಂಗಳೂರು: ನಗರ ಹೊರವಲಯದ ಉಳ್ಳಾಲದ ಕಲ್ಲಾಪು ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾದ ಅಂತರರಾಜ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.   ಬಂಧಿತ ಪ್ರಭುರಾಜ್ ಹಾಗೂ ಮಿಥುನ್ ಬಂಧಿತರನ್ನು ಮುಲ್ಕಿ ಮೂಲದ ಆಟೋ ಚಾಲಕ ಪ್ರಭುರಾಜ್(38), ಮಣಿ ಮತ್ತು ಕುಂಪಲದ ಮಿಥುನ್(30) ಬಂಧಿತ ಆರೋಪಿಗಳು. ಇವರು ಮೂವರು ಸ್ನೇಹಿತರಾಗಿದ್ದು, ಮೂಲ್ಕಿ ಮೂಲದ ಪ್ರಭುರಾಜ್ ಆಟೋ ಚಾಲಕನಾಗಿದ್ದು, ಉಳ್ಳಾಲ ಕುಂಪಲದ ಮಿಥುನ್ ಎಲೆಕ್ಟ್ರೀಷಿಯನ್‌ ಆಗಿ ವೃತ್ತಿ […]

DAKSHINA KANNADA LATEST NEWS

ರೋಹನ್ ಕಾರ್ಪೊರೇಶನ್‌ನ Rohan Ethosಗೆ ಎ. 19 ರಂದು ಭೂಮಿಪೂಜೆ

ಮಂಗಳೂರು: ಅತ್ಯುತ್ತಮ ಗುಣಮಟ್ಟ ಮತ್ತು ಸೇವಾ ಬದ್ಧತೆಯೊಂದಿಗೆ ಕಳೆದ 32 ವರ್ಷಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿಸುವ ಪ್ರತಿಷ್ಠಿತ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಏ. 19ರಂದು ಸಂಜೆ 5 ಗಂಟೆಗೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಬಳಿ ನಡೆಯಲಿದೆ. ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಈ ಯೋಜನೆಯು 15 ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 1640 ರಿಂದ […]

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678