Tag: ಕೆನರಾಟಿವಿ

COMMUNITY NEWS HOME

ಮೈಸೂರು: ಡೋರ್ನಹಳ್ಳಿ ಸಂತ ಅಂತೋಣಿಯ ವಾರ್ಷಿಕ ಮಹೋತ್ಸವ ಸಂಪನ್ನ

ಮೈಸೂರು: ಕ್ರೈಸ್ತ ಸಮುದಾಯದ ವಿಶ್ವ ವಿಖ್ಯಾತ ಪವಾಡ ಪುರುಷ ಡೋರ್ನಹಳ್ಳಿ ಸಂತ ಅಂತೋಣಿಯ ವಾರ್ಷಿಕ ಮಹೋತ್ಸವ ಜೂ.13ರಂದು ನಡೆಯಿತು. ಜೂ.4 ರಂದು ಸಂಜೆ 5:30ಕ್ಕೆ ಧ್ವಜಾರೋಹಣದ ಮೂಲಕ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

HOME LATEST NEWS STATE UDUPI

ಜೂ. 15 ರಿಂದ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ

ಉಡುಪಿ : ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಓಡಾಟದಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಠಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ) (2) ಮತ್ತು (5) ರನ್ವಯ, ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯ ಮೂಲಕ […]

DAKSHINA KANNADA HOME LATEST NEWS

ಮುಡಿಪು: ನೂತನ ಕಾರಾಗೃಹ  ನಿರ್ಮಾಣ- ಗೃಹ ಸಚಿವರ ಭೇಟಿ

ಮಂಗಳೂರು:  ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು  ಮುಡಿಪು ಕುರ್ನಾಡು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ನಿರ್ಮಾಣ ಹಂತದ ಕಟ್ಟಡ   ವೀಕ್ಷಿಸಿದ ಅವರು ಕಾಮಗಾರಿಗಳ ಮಾಹಿತಿ ಪಡೆದರು. ಕಾಮಗಾರಿಯನ್ನು ಉತ್ತಮ  ಗುಣಮಟ್ಟದಲ್ಲಿ ತ್ವರಿತಗತಿಯಲ್ಲಿ ನಡೆಸಿ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. ಕಾರಾಗೃಹದ ಆವರಣ ಗೋಡೆ ಸೇರಿದಂತೆ ಅತ್ಯುನ್ನತ ಭದ್ರತಾ ವ್ಯವಸ್ಥೆ ನೂತನ ಕಾರಾಗೃಹ  ಸಂಕೀರ್ಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.  ಕಾರಾಗೃಹ ಇಲಾಖೆ ಡಿಐಜಿ ದಿವ್ಯಶ್ರೀ ಅವರು ಸಚಿವರಿಗೆ […]

DAKSHINA KANNADA HOME LATEST NEWS

ಕರ್ನಾಟಕ ಬ್ಯಾಂಕ್‌ನಿಂದ ಸ್ನೇಹಾಲಯಕ್ಕೆ ಹೃದಯಸ್ಪರ್ಶಿ ಕೊಡುಗೆ

ಮಂಗಳೂರು: ಕರ್ನಾಟಕ ಬ್ಯಾಂಕ್ ತನ್ನ ಸಿಎಸ್ಆರ್ ಫಂಡ್ ಮೂಲಕ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕೊಡುಗೆ ನೀಡಿದೆ. ಜೂ.12 ರಂದು ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 10.57 ಲಕ್ಷ ರೂ. ಮೊತ್ತದ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್‌ಗಳನ್ನು ದಾನವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್  ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶಾಮ್ ಕುಮಾರ್ […]

DAKSHINA KANNADA HOME LATEST NEWS

ಅಹಮದಾಬಾದ್‌ ವಿಮಾನ ದುರಂತ: ಮಂಗಳೂರು ಬಿಷಪ್ ದಿಗ್ಭ್ರಮೆ, ಸಂತಾಪ

ಮಂಗಳೂರು: ಗುಜರಾತಿನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಪಾರ ಸಾವು ನೋವು ಸಂಭವಿಸಿದ ಬಗ್ಗೆ ಆಘಾತ ವ್ಯಕ್ತ ಪಡಿಸಿರುವ ಅವರು ಸಾವನ್ನಪ್ಪಿರುವ ಪ್ರಯಾಣಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮೃತ ಪಟ್ಟವರ ಆತ್ಮಗಳಿಗೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

DAKSHINA KANNADA HOME LATEST NEWS

ನಾಳೆಯಿಂದ ಪಿಲಿಕುಳದಲ್ಲಿ ಹಣ್ಣುಗಳ ಮೇಳ

ಮಂಗಳೂರು: ರೈತರು ಹಾಗೂ ಉತ್ಪಾದಕರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ನಾನಾ ಮೇಳಗಳು ಮತ್ತು ವಸ್ತು ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ದಶಕದಿಂದ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಸಾರ್ವಜನಿಕರಿಂದ ವಿಶಿಷ್ಟ ಮೆಚ್ಚುಗೆಗಳನ್ನು ಗಳಿಸಿದೆ. ಈ ಬಾರಿ ಹಣ್ಣುಗಳ ಮೇಳವನ್ನು ಜೂನ್ 14 ಮತ್ತು 15 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣ, ಡಾ. ಶಿವರಾಮ ಕಾರಂತ […]

HOME LATEST NEWS NATIONAL

ಊಟ ಮಾಡುತ್ತಿದ್ದಾಗ ಹಾಸ್ಟೆಲ್‌ಗೆ ನುಗ್ಗಿದ ವಿಮಾನ: 20 ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವು..!

ಅಹಮದಾಬಾದ್‌:  ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ನ ಮೇಲೆ ಬಿದ್ದ ವಿಮಾನ ಈ ದುರಂತರದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿತ್ತು. ಈ ದುರಂತವು ಮಧ್ಯಾಹ್ನ 1:30ರ ವೇಳೆಗೆ ಸಂಭವಿಸಿದೆ. ಈ ವೇಳೆ ಕೆಲವರು ಊಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲಿದ್ದ ಆಹಾರ, ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿದ್ದು,  ಕಾಲೇಜು ಕಟ್ಟಡ ಧ್ವಂಸವಾಗಿದೆ. ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ […]

HOME LATEST NEWS NATIONAL

ಪತನವಾದ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಇರುವ ಶಂಕೆ…!

ಅಹಮದಾಬಾದ್‌:  ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದ್ದು, 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.   ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ 242 ಜನರಲ್ಲಿ 52 ಬ್ರಟೀಷ್‌ ಪ್ರಜೆ, ಪೋರ್ಚ್ಗಲ್‌ 6 […]

DAKSHINA KANNADA HOME LATEST NEWS

ಸುಹಾಸ್‌ ಶೆಟ್ಟಿ ಮನೆಯವರು ಕರೆದರೆ ಅವರ ಮನೆಗೂ ಹೋಗುತ್ತೇನೆ: ಸ್ಫೀಕರ್‌ ಖಾದರ್‌

ಮಂಗಳೂರು: ಸುಹಾಸ್‌ ಶೆಟ್ಟಿ ಮನೆಯವರು ಕರೆದರೆ ಅವರ ಮನೆಗೂ ಹೋಗುತ್ತೇನೆ ಹಾಗೂ ಅಬ್ದುಲ್‌ ರೆಹಮಾನ್‌ ಕೊಲೆ ತನಿಖೆಯನ್ನು ಎನ್‌ಐಗೆ ವಹಿಸುವಂತೆ ಆತನ ಮನೆಯವರು ಕೇಳಿದರೆ ರಾಜ್ಯ ಸರ್ಕಾರ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ ಖಾದರ್‌ ಹೇಳಿದ್ದಾರೆ. ಪವಿತ್ರ ಹಜ್‌ ಯಾತ್ರೆಯಿಂದ ಮರಳಿದ ನಂತರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನಗರದ ಸೌರ್ಕ್ಯೂಟ್‌ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬ್ದುಲ್‌ ರೆಹಮಾನ್‌ ಮನೆಯವರು ಕೊಲೆಯಾದ ದಿನವೇ ನನಗೆ ದೂರವಾಣಿ ಮೂಲಕ ಮಾಹಿತಿ […]

HOME LATEST NEWS

ಮಂಗಳೂರು: ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ  ವರ್ಗಾವಣೆ

ಮಂಗಳೂರು:  ನಗರದ ಕಮೀಷನರೇಟ್‌ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಿಗೆ  ಇನ್ಸ್‌ಪೆಕ್ಟರ್‌ಗಳ  ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಕರಾವಳಿ ಕಾವಲು ಪಡೆಯ ಇನ್ಸ್‌ಪೆಕ್ಟರ್‌ ಪ್ರಮೋದ್ ಕುಮಾರ್ ಸುರತ್ಕಲ್ ಠಾಣೆಗೆ , ಚಿಕ್ಕಮಗಳೂರು ಸೆನ್ ಠಾಣೆಯಿಂದ ಗವಿರಾಜು ಆರ್.ಪಿ.ಗ್ರಾಮಾಂತರ ಪೊಲೀಸ್ ಠಾಣೆಗೆ, ಮಂಗಳೂರು ಕರಾವಳಿ ಕಾವಲು ಪಡೆಯಿಂದ ಅನಂತಪದ್ಮನಾಭ ಪೂರ್ವ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಗಣೇಶ್ ಕೆ.ಎಲ್.ಅವರನ್ನು ಆದೇಶ ಮಾರ್ಪಡಿಸಿ ಉಡುಪಿ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678