Tag: ಕೆನರಾಟಿವಿ ನ್ಯೂಸ್‌

LATEST NEWS

ಉತ್ತಮ ಸಮಾಜ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ: ಮಾಜಿ ಸಚಿವ ಬಿ. ರಮಾನಾಥ ರೈ

ಬಂಟ್ವಾಳ : “ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಒಂದು ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ. ಸರಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು” ಎಂದು ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಕರೆ ನೀಡಿದ್ದಾರೆ. ಅವರು ಎರ್ಮಾಳಪದವಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ಹಾಗೂ ಶೈಕ್ಷಣಿಕ ಸಾಮಗ್ರಿ ವಿತರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡುತ್ತಿದ್ದರು. ಸರಕಾರಿ ಶಾಲೆಗಳ ಬಲವರ್ಧನೆಗೆ ಸಾರ್ವಜನಿಕರ […]

HOME LATEST NEWS

ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ನ ನಿರ್ಮಾಣ ಕಾಮಗಾರಿ ಚುರುಕು ಸಂಸದ ಕ್ಯಾ ಬ್ರಿಜೇಶ್ ಚೌಟ ಭೇಟಿ ನೀಡಿ ಪ್ರಗತಿ ಪರಿಶೀಲನೆ*

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಹಾಗೂ ಕೈಗಾರಿಕಾ ರಂಗಕ್ಕೆ ಹೊಸ ಶಕ್ತಿ ತುಂಬಲಿರುವ ಗಂಜಿಮಠದಲ್ಲಿ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಪ್ಲಾಸ್ಟಿಕ್ ಪಾರ್ಕ್ ಯೋಜನಾ ಪ್ರದೇಶಕ್ಕೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಭೇಟಿ ವೇಳೆ ಸಂಸದರು ಪಾರ್ಕ್‌ನ ರಸ್ತೆ, ವಿದ್ಯುತ್, ನೀರು ಸರಬರಾಜು ಸೇರಿದಂತೆ ಪ್ರಮುಖ ಮೂಲಸೌಕರ್ಯ […]

LATEST NEWS

ಪೆರುವಾಯಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ, ಪಠ್ಯ ಉಪಕರಣ ವಿತರಣೆ

ವಿಟ್ಲ: ಜೂನ್.17: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕದಲ್ಲಿ 2026-2027ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪಠ್ಯ ಉಪಕರಣಗಳ ವಿತರಣೆ ಕಾರ್ಯಕ್ರಮ ವು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸಚಿನ್ ಅಡ್ವಾಯಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋರಾಜ್ ರೈ ಅಡ್ವಾಯಿ ಹಾಗೂ ಶ್ರೀನಿವಾಸ ಶೆಟ್ಟಿ ಕೆಳಗಿನ ಮನೆ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ಶುಭ ಹಾರೈಸಿದರು. ವಿದ್ಯಾಭಿಮಾನಿಗಳಾದ ಗೋವಿಂದ ಭಟ್ ಕಡೆಂಗೋಡ್ಲು […]

LATEST NEWS

ಪೆರುವಾಯಿ ಸ್ಥಳೀಯರ ಆಕ್ರೋಶಕ್ಕೆ ಮಣಿದ ಪಂಚಾಯತ್: ಸೇತುವೆ ಬದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯ ಆರಂಭ

ವಿಟ್ಲ ,ಪೆರುವಾಯಿ: ಜೂನ್.17:ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಮೂಲಕ ಹಾದುಹೋಗುವ ಅಂತಾರಾಜ್ಯ ಮುಖ್ಯ ರಸ್ತೆಯ ಸೇತುವೆಯ ಬಳಿ ಹತ್ತು ದಿನಗಳ ಅಂತರದಲ್ಲಿ ಎರಡು ವಾಹನಗಳು ನದಿಗೆ ಬಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಸರಣಿ ಅಪಘಾತಗಳ ಬಳಿಕ ಎಚ್ಚೆತ್ತುಕೊಂಡಿರುವ ಪೆರುವಾಯಿ ಪಂಚಾಯತ್, ಇದೀಗ ಅಪಾಯಕಾರಿ ತಿರುವಿನಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಪಿಕಪ್ ವಾಹನವೊಂದು ಇಲ್ಲಿ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಹಾನಿಯಾಗಿತ್ತು. ಆ ಘಟನೆ ಮಾಸುವ ಮುನ್ನವೇ ಭಾನುವಾರ […]

LATEST NEWS

ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಸಭೆ ಸಂಘಟನೆ ಬಲವರ್ಧನೆಗೆ ಮಹಿಳಾ ಕಾರ್ಯಕರ್ತೆಯರ ಸಕ್ರಿಯ ಪಾತ್ರ ಅಗತ್ಯ

ಮಂಗಳೂರು, ಜೂನ್ 16: ಜನತಾದಳ ಜಾತ್ಯಾತೀತ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಮಹತ್ವದ ಸಭೆಯು ಮಂಗಳವಾರ ನಗರದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಮೀಝಾ ನಾಸೀರ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು, “ಪಕ್ಷದ ಬಲವರ್ಧನೆಯಲ್ಲಿ ಮಹಿಳಾ ಕಾರ್ಯಕರ್ತೆಯರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹಿಳೆಯರು […]

LATEST NEWS

ಮರಣ ಹೊಂದಿದವರ ‘ಗೃಹಲಕ್ಷ್ಮಿ’ ಹಣ ಸರ್ಕಾರಕ್ಕೆ ವಾಪಸ್ ಮಾಡಿ: ಭರತ್ ಮುಂಡೋಡಿ ಸೂಚನೆ

ಮಂಗಳೂರು, ಜೂನ್.16: ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿ, ಆ ಬಳಿಕ ಮೃತಪಟ್ಟ ಮಹಿಳೆಯರ ಖಾತೆಗೆ ಜಮೆಯಾಗಿರುವ ಹಣವನ್ನು ತಕ್ಷಣವೇ ಸರ್ಕಾರಕ್ಕೆ ಮರಳಿ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಅವರು ಸೂಚಿಸಿದ್ದಾರೆ. ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು 3.34ಕೋಟಿ ರೂಪಾಯಿ ಪತ್ತೆ: ರಾಜ್ಯ ಸರ್ಕಾರದ ದೊಡ್ಡ ಯೋಜನೆಯಾದ […]

LATEST NEWS

ಅಂಬೇಡ್ಕರ್ ಜಯಂತಿ ಮತ್ತು ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮ

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ) ವಿಟ್ಲ ಇದರ ಸ್ಥಾಪಕಾಧ್ಯಕ್ಷರಾದ ಬಿ. ಕೆ. ಸೇಸಪ್ಪ ಬೆದ್ರಕಾಡು ಅವರು ಮೂಡಬಿದ್ರೆಯ ಕನ್ನಡ ಭವನದಲ್ಲಿ ನಡೆದ ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತದನಂತರ ರಾಯಿ ಗ್ರಾಮದಲ್ಲಿ ಒತ್ತುವರಿಯಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಭೇಟಿ ನೀಡಿ ಧೈರ್ಯ ತುಂಬಿದರು. ವಿದ್ಯಾರ್ಥಿ ಸೋಷಿಯಲ್ ಎಜುಕೇಷನ್ ಸೊಸೈಟಿ ಮಂಗಳೂರು ಇದರ ಸ್ಥಾಪಕರಾದ ಶ್ರೀನಿವಾಸ್ ಮಿಜಾರ್ ಅವರ ನೇತೃತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ […]

LATEST NEWS

ಮಿಜಾರು ಅಲೇರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ; ದೈವಸ್ಥಾನ, ಚಾವಡಿಯ ನೀಲಿ ನಕಾಶೆ ಲೋಕಾರ್ಪಣೆ

ಮಂಗಳೂರು,: ಮೂಡಬಿದ್ರೆ ಪ್ರಸಿದ್ಧ ಮಿಜಾರು ಅಲೇರಿ ಶ್ರೀ ಸತ್ಯ ಸಾರಮಣಿ ಕಾಣದ ಕಟದ ಮೂಲಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹತ್ವದ ಸಭೆಯು ಗೌರವಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಅವರ ಘನ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪ್ರಮುಖ ಸಭೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಮುಖ್ಯ ದೈವಸ್ಥಾನ ಮತ್ತು ಚಾವಡಿಯ ನೀಲಿ ನಕಾಶೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ದೈವಸ್ಥಾನ ಹಾಗೂ ಚಾವಡಿಯ ನೀಲಿ ನಕಾಶೆ ಅನಾವರಣ: ಕ್ಷೇತ್ರದಲ್ಲಿ ನೂತನವಾಗಿ ತಲೆಎತ್ತಲಿರುವ ಅಲೇರಾ ಪಂಜುರ್ಲಿ ದೈವಸ್ಥಾನದ […]

HOME LATEST NEWS

ಪುತ್ತೂರು ಶಾಸಕ ಅಶೋಕ್ ರೈ ಭಿನ್ನ ಶೈಲಿಯ ರಾಜಕಾರಣ: ತಮ್ಮ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ವ್ಯಕ್ತಿಯಿಂದಲೇ ರಸ್ತೆ ಉದ್ಘಾಟನೆ!

ಪುತ್ತೂರು: ಭಾನುವಾರ ಕುಡಿಪ್ಪಾಡಿ ಗ್ರಾಮದಲ್ಲಿ ಕುತೂಹಲಕಾರಿ ಘಟನೆಯೊಂದು ಗ್ರಾಮಸ್ಥರ ಮುಂದೆ ಸಾಕ್ಷಿಯಾಗಿದೆ. ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಶಾಸಕರ ವಿರುದ್ದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ರಿಕ್ಷಾ ಚಾಲಕನೋರ್ವನ ಕೈಯಿಂದಲೇ ಶಾಸಕ ಅಶೋಕ್ ರೈ ಅವರು ಕುಡಿಪ್ಪಾಡಿ ಗ್ರಾಮದ ನೂತನ ರಸ್ತೆಯನ್ನು ಉದ್ಘಾಟಿಸಿದ ಘಟನೆ ನಡೆದಿದೆ. ಕುಡಿಪ್ಪಾಡಿ ಗ್ರಾಮದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ, ಶಾಸಕರು ಅನುದಾನ ನೀಡುತ್ತಿಲ್ಲ ಎಂದು ಕುಡಿಪ್ಪಾಡಿಯ ಚಂದ್ರಶೇಖರ ಎಂಬವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಅಶೋಕ್ […]

HOME LATEST NEWS

ಯಶೋಧಾ ರಾಜೇಶ್ ಅವರಿಗೆ ‘ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ 2026’ ಪ್ರಶಸ್ತಿ

ಮಂಗಳೂರು: ಮಂಗಳೂರು ಮೂಲದ ಉದ್ಯಮಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಯಶೋಧಾ ರಾಜೇಶ್ ಅವರು ಥೈಲ್ಯಾಂಡ್‌ನ ಹುವಾ ಹಿನ್‌ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ 2026 ಸ್ಪರ್ಧೆಯಲ್ಲಿ “ಮಿಸೆಸ್ ಟೂರಿಸಂ ಇಂಟರ್‌ನ್ಯಾಷನಲ್ ಟ್ಯಾಲೆಂಟ್ ಕ್ವೀನ್ ವಿನ್ನರ್ 2026” ಎಂಬ ಅಂತರರಾಷ್ಟ್ರೀಯ ಗೌರವವನ್ನು ತಮ್ಮದಾಗಿಸಿಕೊಂಡು ಕರ್ನಾಟಕ ಹಾಗೂ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಜಗತ್ತಿನ ವಿವಿಧ ದೇಶಗಳಿಂದ ಆಗಮಿಸಿದ್ದ 22 ಸ್ಪರ್ಧಿಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಯಶೋಧಾ ರಾಜೇಶ್ ಅವರು ತಮ್ಮ ಪ್ರತಿಭೆ, ಆತ್ಮವಿಶ್ವಾಸ, ವ್ಯಕ್ತಿತ್ವ ಮತ್ತು […]