Tag: canaratv

DAKSHINA KANNADA HOME LATEST NEWS

ಬಿಜೆಪಿಯಲ್ಲಿ ಭ್ರಷ್ಟರನ್ನು ಸ್ವಚ್ಛಗೊಳಿಸುವ ವಾಶಿಂಗ್ ಮೆಷನ್ ಇದೆ: ರಮಾನಾಥ ರೈ

ಮಂಗಳೂರು, ಎ. 17: ಕೇಂದ್ರ ಸರಕಾರ ಇ.ಡಿ. ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ವಿರೋಧ ಪಕ್ಷದವರ ವಿರುದ್ಧ ಮಾತ್ರವೇ ಇಡಿ ಪ್ರಯೋಗಿಸುತ್ತಿದೆ. ವಿಪಕ್ಷಗಳನ್ನು ದುರ್ಬಳಗೊಳಿಸಲು ಮೋದಿ ಸರಕಾರ ಯತ್ನಿಸುತ್ತಿದೆ. ಇಡಿ ದಾಳಿಯೊಳಗಾದವರು ಬಿಜೆಪಿ ಸೇರಿದರೆ ಅವರು ಕ್ಲೀನ್ ಆಗುತ್ತಾರೆ. ಬಿಜೆಪಿ ಬಳಿ ಭ್ರಷ್ಟರನ್ನು ಕ್ಲೀನ್ ಮಾಡುವ ವಾಶಿಂಗ್ ಮೆ‌ಷನ್ ಇದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ವಾಗ್ದಾಳಿ ನಡಿಸಿದ್ದಾರೆ. ಬುಧವಾರ ಮಂಗಳೂರಿನ ಯೆಯ್ಯಾಡಿ ಬಳಿ ಇರುವ ಜಾರಿ ನಿರ್ದೇಶನಾಲಯ(ಇಡಿ)ದ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. […]

DAKSHINA KANNADA HOME LATEST NEWS

ಪುತ್ತೂರು ಜಾತ್ರೆ ಪ್ರಯುಕ್ತ-ಸಂಚಾರ ಮಾರ್ಗ ಬದಲಾವಣೆ

ಮಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಎಪ್ರಿಲ್ 17 ರಂದು ಬ್ರಹ್ಮರಥೋತ್ಸವ ನಡೆಯಲಿರುವುದರಿಂದ ಎಪ್ರಿಲ್ 16 ಮತ್ತು 17 ರಂದು ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ. ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ […]

DAKSHINA KANNADA HOME LATEST NEWS

ಕದ್ರಿ ಮಂಜುನಾಥೇಶ್ವರ ಆಡಳಿತ ಮಂಡಳಿಯ ನೂತನ ಸದಸ್ಯರಿಗೆ ಶಾಸಕ ಐವನ್ ಡಿ’ಸೋಜಾರಿಂದ ಸನ್ಮಾನ

ಮಂಗಳೂರು: ದೇವರ ಸೇವೆ ಮಾಡುವ ಅವಕಾಶ ಪಡೆದಿರುವ ಟ್ರಸ್ಟಿಗಳು ಸಮಾಜದ ಎಲ್ಲಾ ವರ್ಗಗಳ ಸೇವೆಗಳಿಗೆ ಬದ್ದರಾಗಿದ್ದು, ಸಾಮಾಜಿಕ ಸೇವೆ ಬದ್ಧತೆಯಿಂದ ಮಾಡುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಶಕ್ತಿ ಬರಲಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರು ತಮ್ಮ ಮಹಾನಗರ ಪಾಲಿಕೆ ಕಛೇರಿಯಲ್ಲಿ ಕದ್ರಿ ಮಂಜುನಾಥೇಶ್ವರ ದೇವರ ಆಡಳಿತ ಮಂಡಳಿಗೆ ನೂತನವಾಗಿ ನೇಮಕಗೊಂಡ ಸದಸ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದೇವರಾಜ್ ಕೆ. ದೇವರ […]

DAKSHINA KANNADA HOME LATEST NEWS STATE

6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಸುಳ್ಯದ ಎರಡು ಪ್ರಮುಖ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸದ ಕ್ಯಾ. ಚೌಟ

ಸುಳ್ಯ: ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ(ಸಿಆರ್ ಐಎಫ್)ಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಎರಡು ಪ್ರಮುಖ ರಸ್ತೆಗಳನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು. ಸಿಆರ್ ಐಎಫ್ ಅನುದಾನದಡಿ ಸುಳ್ಯ ತಾಲೂಕಿನ ನಿಂತಿಕಲ್ಲು- ಬೆಳ್ಳಾರೆ ರಸ್ತೆಯನ್ನು ಸುಮಾರು 3.72 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯಲ್ಲಿ ಒಟ್ಟು ಸುಮಾರು 6.20 ಕಿಮೀ. ಮಾರ್ಗವನ್ನು […]

DAKSHINA KANNADA HOME LATEST NEWS

ಎಮ್.ಸಿ.ಸಿ. ಬ್ಯಾಂಕ್ 2024–25 ವಿತ್ತೀಯ ವರ್ಷದಲ್ಲಿ 13.00 ಕೋಟಿ ಲಾಭ, ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆ

ಕರ್ನಾಟಕದ ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಒಟ್ಟು 13.00 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ 1.30% ಎನ್.ಪಿ.ಎ. ದಾಖಲಿಸಿದೆ. ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2024–2025ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ […]

DAKSHINA KANNADA HOME LATEST NEWS

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಕಿರು ಧೀಕ್ಷೆಗಳು ನೀಡಲಾಯಿತು

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಜ್ಹಿಯವರು ದೀಕ್ಷೆಯನ್ನು ನೀಡಿದರು. ಗುರುದೀಕ್ಷೆಯ ಮೊದಲು ಹಂತ ಹಂತವಾಗಿ ಕಿರುದೀಕ್ಷೆಗಳ ಮೂಲಕ ಸೆಮಿನರಿ ವಿದ್ಯಾರ್ಥಿಗಳನ್ನು ಯಾಜಕಾಭಿಷೇಕಕ್ಕಾಗಿ ಸಿದ್ಧರಾಗುತ್ತಾರೆ. ಇದೀಗ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕಾಗಿ 3 ವಿದ್ಯಾರ್ಥಿಗಳು ಡೀಕನ್, 6 ವಿದ್ಯಾರ್ಥಿಗಳು ಮತ್ತಿತರ ಕಿರುದೀಕ್ಷೆಗಳನ್ನು ಸ್ವೀಕರಿಸಿದರು. ದೇವರ ಹಾಗು ಮಾನವ ಸೇವೆಗಾಗಿ ಜೀವನ ಮುಡಿಪಾಗಿಡುವ ಇವರಿಗೆ ದೇವರ ಆಶೀರ್ವಾದವಿರಲಿ.

DAKSHINA KANNADA HOME LATEST NEWS

ದ. ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

  ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಅವರು ಮಾತನಾಡುತ್ತಿದ್ದರು. ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕರಾಗಿದ್ದ ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆನ್ನುವ ಅಪೇಕ್ಷೆ ಮೇರೆಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅನೇಕ ಅನುಕೂಲತೆಗಳನ್ನು ನೀಡಿದ್ದಾರೆ. ಅಸ್ಪೃಶ್ಯತೆ, ಅಸಮಾನತೆಯ […]

DAKSHINA KANNADA HOME LATEST NEWS

ಬಿಜೆಪಿ ಮಂ.ದಕ್ಷಿಣದ ಎಸ್ ಸಿ ಮೋರ್ಚಾ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 134 ನೇ ಜಯಂತಿಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರದ ದಕ್ಷಿಣ ಮಂಡಲದ ಎಸ್ಸಿ ಮೋರ್ಚಾ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಹಿತ ಗೌರವ ನಮನ ಸಲ್ಲಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಸಂಸದರಾದ ಕ್ಯಾ. ಬ್ರಿಜೇಶ್ ಚೌಟರವರು ಪ್ರಸ್ತಾವಿಕ ಮಾತುಗಳನ್ನಾಡಿ, ಎಲ್ಲರನ್ನೊಳಗೊಂಡ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ಬಾಬಾ ಸಾಹೇಬರ ಆದರ್ಶವನ್ನು […]

COMMUNITY NEWS HOME LATEST NEWS

ಬಿಕರ್ನಕಟ್ಟೆಯಲ್ಲಿ ಏ.15 ರಿಂದ ನಿರಂತರ 40 ಗಂಟೆಗಳ ಆರಾಧನ ಸ್ತುತಿ

ಮಂಗಳೂರು: ಬಾಲಯೇಸುವಿನ ಪುಣ್ಯಕ್ಷೇತ್ರ ಬಿಕರ್ನಕಟ್ಟೆಯಲ್ಲಿ ಏ.15 ರಿಂದ ನಿರಂತರ 40 ಗಂಟೆಗಳ ಆರಾಧನ ಸ್ತುತಿ ಏರ್ಪಡಿಸಲಾಗಿದೆ. ಈ ಆರಾಧನ ಸ್ತುತಿಯು ಏ.15 ರಂದು ಮುಂಜಾನೆ 6 ಗಂಟೆಗೆ ಪವಿತ್ರ ಬಲಿಪೂಜೆಯ ಮೂಲಕ ಆರಂಭಗೊಳ್ಳಲಿದೆ. ನಂತರ 40 ಗಂಟೆಗಳ ನಿರಂತರ ಆರಾಧನ ಸ್ತುತಿ ನಡೆಯಲಿದೆ. ಇದರಲ್ಲಿ ಪೊಲೀಸ್‌ ಹಾಗೂ ಸೈನಿಕರಿಗಾಗಿ, ಶಿಕ್ಷಕರು, ದಿವ್ಯಾಂಗರು, ನನ ವಿವಾಹಿತ ಜೋಡಿ, ರೈತರು ಹೀಗೆ ಹತ್ತುವ ಹಲವರಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈ ಆರಾಧನೆಯ ವಿಶೇಷತೆ ಎಂದರೆ ಮಕ್ಕಳಿಂದ ಆರಾಧನೆ, ಗುಮ್ಟಾ ಹಾಗೂ […]

DAKSHINA KANNADA HOME LATEST NEWS

ಕರಾವಳಿಯಾದ್ಯಂತ ಕ್ರೈಸ್ತರಿಂದ ‘ಗರಿಗಳ ಭಾನುವಾರ’ ಆಚರಣೆ

ಮಂಗಳೂರು: ಇಂದು ಗರಿಗಳ ಭಾನುವಾರ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಭಾನುವಾರ ಆರಂಭಗೊಂಡಿದೆ. ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ‘ಒಲಿವ್’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರ ಮಾಡಿ ಕೊಂಡಿದ್ದರೆಂದು ಬೈಬಲ್ ಉಲ್ಲೇಖ. ಇದರ ಸಂಕೇತವಾಗಿ ಕರಾವಳಿಯ ಎಲ್ಲಾ ಚರ್ಚುಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಏ.13 (ಇಂದು) ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಮಂಗಳೂರು ನಗರದ ಮಿಲಾಗ್ರಿಸ್‌ ಚರ್ಚ್‌ನಲ್ಲಿ ನಡೆದ ಮೆರವಣಿಗೆ ಯೇಸು ಕ್ರಿಸ್ತರು […]

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678