Tag: canaratv

DAKSHINA KANNADA HOME LATEST NEWS

ಮಳೆ ಹಿನ್ನೆಲೆ: ದ. ಕ ಜಿಲ್ಲೆಯ ಶಾಲೆ-ಪದವಿ ಪೂರ್ವ ಕಾಲೇಜಿಗೆ ಜು.17 ರಂದು ರಜೆ

ಮಂಗಳೂರು: ಭಾರೀ ಮಳೆ ಹಿನ್ನೆಲೆ ದ. ಕ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ,  ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ನಾಳೆ (ಜುಲೈ 17) ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

DAKSHINA KANNADA HOME LATEST NEWS

ಭಾರೀ ಮಳೆ: ಉಳ್ಳಾಲ ತಾಲೂಕಿನ ಶಾಲೆಗಳಿಗೆ ಇಂದು ರಜೆ

ಮಂಗಳೂರು: ಉಳ್ಳಾಲ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯೆ ಸಂಸ್ಥೆಗಳಿಗೆ ದಿನಾಂಕ15.07.2025 ರಂದು ರಜೆ ಘೋಷಿಸಲಾಗಿದೆ.

DAKSHINA KANNADA HOME

ಬೆಂಗಳೂರು: ಸೈಂಟ್ ಜೋಸೆಫ್‌ ವಿಶ್ವವಿದ್ಯಾಲಯದ IT ಸಂಘಗಳ ಅಧಿಕಾರ ಸ್ವೀಕಾರ 2025-26

ಬೆಂಗಳೂರು: ಕಂಪ್ಯೂಟರ್ ಸೈನ್ಸ್ ವಿಭಾಗ, ಸೈಂಟ್ ಜೋಸೆಫ್‌ ವಿಶ್ವವಿದ್ಯಾಲಯವು, ತನ್ನ ಪ್ರತಿಷ್ಠಿತ ವಿದ್ಯಾರ್ಥಿ ಸಂಘಗಳಾದ ಸೈಬರ್ನೆಟಿಕ್ಸ್ ಅಸೋಸಿಯೇಷನ್ (ಯುಜಿ) ಮತ್ತು ಟೆಕ್ನೋಫೈಟ್ ಅಸೋಸಿಯೇಷನ್ (ಪಿಜಿ)ಗಳ ಉದ್ಘಾಟನೆ ಮತ್ತು ಅಧಿಕಾರ ಸ್ವೀಕಾರ ಸಮಾರಂಭವನ್ನು 9ನೇ ಜುಲೈ 2025ರಂದು, ಪಿಜಿ ಬ್ಲಾಕ್‌ನ ಕ್ಷೇವಿಯರ್ ಸಭಾಂಗಣದಲ್ಲಿ ನಡೆಸಿತು. ಸಮಾರಂಭದಲ್ಲಿ ವಂ. ಡೆನ್ಜಿಲ್ ಲೋಬೋ ಎಸ್.ಜೆ., ಶಾಲಾ ನಿರ್ದೇಶಕ, ಸ್ಕೂಲ್ ಆಫ್ ಐಟಿ; ಡಾ. ಎ.ಎಂ. ಬೋಜಮ್ಮ, ಡೀನ್, ಸ್ಕೂಲ್ ಆಫ್ ಐಟಿ; ಡಾ. ಬಿ.ಜಿ. ಪ್ರಶಾಂತಿ, ಮುಖ್ಯಸ್ಥರು, ಕಂಪ್ಯೂಟರ್ ಸೈನ್ಸ್ ವಿಭಾಗ; […]

DAKSHINA KANNADA HOME

ಬಾಲಿವುಡ್‌ ನಟ ಶಾರೂಖ್‌ ಖಾನ್ ರೋಹನ್ ಕಾರ್ಪೊರೇಷನ್ ಬ್ರಾಂಡ್ ಅಂಬಾಸಿಡರ್

ಮಂಗಳೂರು ಜುಲೈ 12. ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ, ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್‌ ಖಾನ್ ಅವರನ್ನು ತನ್ನ ಆಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಜುಲೈ 12 ರಂದು ಘೋಷಣೆ ಮಾಡಿತು. ಈ ಬಹು ನಿರೀಕ್ಷಿತ ಕಾರ್ಯಕ್ರಮವು, ಮಂಗಳೂರಿನ ಬಿಜೈ ಭಾರತ್ ಮಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಮತ್ತು ಸಿನಿಮಾ ಜಗತ್ತಿನ ತಾರೆಗಳು ಭಾಗವಹಿಸಿದ್ದರು.ಈ ಘೋಷಣೆ ವಿಶೇಷ […]

DAKSHINA KANNADA HOME LATEST NEWS

ನೈತಿಕ ಪೊಲೀಸ್‌ಗಿರಿ ಮಾಡುವವರ ಬಾಲಕ್ಕೆ ಕತ್ತರಿ ಹಾಕಿ: ಪೊಲೀಸರಿಗೆ ಶಾಸಕ ಅಶೋಕ್‌ ರೈ ಸೂಚನೆ

ಪುತ್ತೂರು: ಬಿರುಮಲೆ ಬೆಟ್ಟಕ್ಕೆ ಬಂದಿದ್ದ ಯುವಕ-ಯುವತಿ ಮೇಲೆ ಕಿಡಿಗೇಡಿಗಳಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬ ವಿಚಾರ ನನ್ನ‌ಗಮನಕ್ಕೆ ಬಂದಿದ್ದು, ಆರೋಪಿತರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪುತ್ತೂರು ಶಾಸಕ ಅಶೋಕ್‌ ರೈ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಘಟನೆಗೆ ಸಂಬಂಧಿಸಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ‌ಸಮಯಗಳಿಂದ ನಿಂತು ಹೋಗಿದ್ದ ಈ ರೀತಿಯ ಕೆಟ್ಟ ಘಟನೆಗಳು ಪುತ್ತೂರಿನಲ್ಲಿ ನಡೆದಿದೆ. ಬಾಲ ಮುದುಡಿಕೊಂಡಿದ್ದ ಸಮಾಜಘಾತುಕ ಕಿಡಿಗೇಡಿಗಳ ಬಾಲ ಕತ್ತರಿಸುವ ಕೆಲಸ ಮಾಡಲಾಗುತ್ತದೆ. […]

DAKSHINA KANNADA HOME LATEST NEWS

ಪುತ್ತೂರು: ಅಪ್ರಾಪ್ತ ಬಾಲಕ-ಬಾಲಕಿಯನ್ನು ತಡೆದು ವೀಡಿಯೋಗೈದ ಪ್ರಕರಣ; ಇಬ್ಬರ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯನ್ನು ತಡೆದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತೇವೆಂದು ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪ್ರಕರಣದ ವಿವರ ಪ್ರಕರಣದ ಸಂತ್ರಸ್ಥ ಬಾಲಕನ ತಂದೆ ನೀಡಿದ ದೂರಿನಂತೆ, ಅಪ್ರಾಪ್ತ ಪ್ರಾಯದ ಮಗನು, ಮೋಟಾರು ಸೈಕಲ್ ನಲ್ಲಿ ಜು.5 ರ ಮಧ್ಯಾಹ್ನದ ವೇಳೆ, ಆತನ ಪರಿಚಯದ ಬಾಲಕಿಯೊಂದಿಗೆ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟ ಎಂಬಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಥಳಕ್ಕೆ ಬಂದು […]

DAKSHINA KANNADA HOME

ನಾಯಕತ್ವವು ಉತ್ತಮ ಗುಣ & ಪ್ರತಿಭೆಗಳನ್ನು ಹೊರತರುವ ಅವಕಾಶ: ರೆ. ಫಾ.ವಾಲ್ಟರ್ ಡಿಸೋಜಾ

ಮಂಗಳೂರು: ನಗರದ ಪಾದುವ ಪದವಿ ಪೂರ್ವ  ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರತಿಭಾ ದಿನ ಸಂತ ಸೆಬಾಸ್ಟಿಯನ್ ಹಾಲ್ ಬೆಂದೂರ್ ನಲ್ಲಿ ಜರಗಿತು.ಅಧ್ಯಕ್ಷತೆ ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ .ಫಾ.ವಾಲ್ಟರ್ ಡಿಸೋಜಾ ಮಾತನಾಡಿ,  ನಾಯಕತ್ವವು  ಕೇವಲ ಸ್ಥಾನ ಅಥವಾ ಬಿರುದುಗಲಾಗಿರದೆ, ಅದು ಇತರರಲ್ಲಿ ಉತ್ತಮವಾದ ಗುಣ ಮತ್ತು ಪ್ರತಿಭೆಗಳನ್ನು ಹೊರತರುವ ಅವಕಾಶ ಎಂದು ಹೇಳಿದರು. ಮುಖ್ಯ ಅತಿಥಿಯಾದ ಲೆಸ್ಲಿ ನೋಯೆಲ್ ರೇಗೊ ಮಾತನಾಡಿ, ಕಾಲೇಜು ಜೀವನವೆಂದರೆ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶ. ವಿದ್ಯಾರ್ಥಿಗಳು ಯಶಸ್ಸಿನ […]

DAKSHINA KANNADA HOME

ಪುತ್ತೂರು: ಪ್ರೀತಿಸಿ ವಂಚನೆಗೈದು ನಾಪತ್ತೆಯಾಗಿದ್ದ ಕೃಷ್ಣ ರಾವ್‌ ಅರೆಸ್ಟ್‌

ಪುತ್ತೂರು: ಯುವತಿಯೊಬ್ಬಳನ್ನು ಪ್ರೀತಿಸಿ ವಂಚನೆ ಮಾಡಿ, ಮಗುವಿನ ಜನನಕ್ಕೆ ಕಾರಣವಾಗಿದ್ದಲ್ಲದೇ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ರಾವ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿ ಕೃಷ್ಣ ರಾವ್‌ನನ್ನು ಮೈಸೂರಿನ ಟೀನರಸೀಪುರದಲ್ಲಿ ವಶಕ್ಕೆ ಪಡೆದಿದ್ದಾರೆ. ಗರ್ಭಿಣಿಯಾದ ಬಳಿಕ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆತ ಕೈಕೊಟ್ಟಿದ್ದರಿಂದ ಕಂಗಾಲಾದ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಆತ ಬಂಧನದ ಭಯದಿಂದ ಎಸ್ಕೇಪ್ ಆಗಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನಲ್ಲಿ ವಶಕ್ಕೆ […]

Breaking News COMMUNITY NEWS LATEST NEWS

ಮಂಜೇಶ್ವರ: ತಾಯಿಯನ್ನೇ ಸುಟ್ಟ ಪುತ್ರ ಮೆಲ್ವಿನ್‌ನ್ನು ಪತ್ತೆ ಹಚ್ಚಿದ್ದೇ ರೋಚಕ…!

ಮಂಜೇಶ್ವರ: ಮಗನೊಬ್ಬ ಬೆಂಕಿ ಹಚ್ಚಿ ತಾಯಿಯನ್ನು ಕೊಲೆಗೈದ ಘಟನೆ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಯೊಳಗೆ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ನಲ್ಲಂಗಿಯ ದಿ. ಲೂಯಿಸ್ ಮೊಂತೆರೋ ರವರ ಪತ್ನಿ ಹಿಲ್ಡಾ (60) ಕೊಲೆಗೀಡಾದವರು. ಪುತ್ರ ಮೆಲ್ವಿನ್ ಈ ಕೃತ್ಯ ನಡೆಸಿದ್ದಾನೆ. ನೆರೆಮನೆಯ ಲೋಲಿಟಾ (30) ಗಂಭೀರ ಗಾಯಗೊಂಡಿದ್ದಾರೆ. ಘಟನೆ ವಿವರ ನಿನ್ನೆ ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆಸಿದ್ದಾನೆ […]

DAKSHINA KANNADA HOME LATEST NEWS

ಪುತ್ತೂರು: ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ

ಪುತ್ತೂರು: ಪುತ್ತೂರಿನ ಕ್ರೈಸ್ತ ಧಫನ ಭೂಮಿಯಿಂದ ಕಳೇಬರದ ಎಲುಬು ಕಳ್ಳತನ ಮಾಡಿದ ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರಿನ ಬನ್ನೂರು ಸಂತ ಅಂತೋಣಿ ಚರ್ಚ್‌ನ ಅಧೀನದಲ್ಲಿರುವ ಕ್ರೈಸ್ತ ದಫನ್ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಜೂ.14 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಧರ್ಮಗುರುಗಳು ಫಾ.ಬಾಲ್ತಿಜಾರ್ ಪಿಂಟೋ ನೀಡಿದ ದೂರಿನ ಮೇರೆಗೆ, ದೂರರ್ಜಿಯನ್ನು ದಾಖಲಿಸಿಕೊಂಡಿದ್ದು, ಘಟನಾಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ […]