ದುಬೈನಲ್ಲಿ ಎಂಸಿಸಿ ಬ್ಯಾಂಕ್ ಎನ್ಆರ್‌ಐ ‘ಅಂತರ್ದೃಷ್ಟಿ ಮತ್ತು ಸಂವಾದ’ ಸಭೆ
ದುಬೈ: ಎಂಸಿಸಿ ಬ್ಯಾಂಕ್ ಜೂನ್ 15ರಂದು ದುಬೈಯ ಕರಾಮಾದ ವಿಜಿ ರೆಸ್ಟೋರೆಂಟ್‌ನಲ್ಲಿ ‘ಅಂತರ್ದೃಷ್ಟಿ ಮತ್ತು ಸಂವಾದ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವನ್ನು ದುಬೈನಲ್ಲಿ ನೆಲೆಸಿರುವ ಪ್ರಸಿದ್ಧ ಮಂಗಳೂರು ಮೂಲದ ವ್ಯಕ್ತಿ ಶ್ರೀ ಡಯಾನ್ ಡಿಸೋಜಾ ಇವರು ನಡೆಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಡಯಾನ್’ರವರು, ಪ್ರಸ್ತುತ ಬ್ಯಾಂಕಿಂಗ್ ಪರಿಸ್ಥಿತಿ ಮತ್ತು ಎಂಸಿಸಿ ಬ್ಯಾಂಕ್‌ನ ಸ್ಥಿತಿಗತಿಯ ಬಗ್ಗೆ ಪ್ರಸ್ತಾಪಿಸಿದರು. ಮಂಗಳೂರು ಮೂಲದ ಮತ್ತೊಬ್ಬ ಪ್ರಖ್ಯಾತ ಸಮುದಾಯ ನಾಯಕ ಹಾಗೂ ದಾಯ್ಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಸಮುದಾಯವನ್ನು ಒಂದು ಗುರಿಯತ್ತ […]