Tag: ಕೆನರಾಟಿವಿ

HOME LATEST NEWS STATE

ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್.ಜಾನಕಿ ಕೊನೆಯುಸಿರು

ಮೈಸೂರು: ಭಾರತದ ನೈಟಿಂಗೇಲ್ ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಶನಿವಾರ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ‘ಮಗ ಮೃತಪಟ್ಟ ಬಳಿಕ ಮೈಸೂರಿನ ಬೋಗಾದಿಯ ಅವರ ಆಪ್ತರ ಮನೆಯಲ್ಲಿ ವಾಸವಿದ್ದರು. ಈ ಬಗ್ಗೆ ವೈದ್ಯಾಧಿಕಾರಿಗಳು ಹಾಗೂ ಜಾನಕಿ‌ ಕುಟುಂಬಸ್ಥರು ಅಧಿಕೃತ ಮಾಹಿತಿ ನೀಡಿಲ್ಲ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.  ಈ ವರ್ಷ ಜನವರಿಯಲ್ಲಿ ಜಾನಕಿ ಅವರ […]

DAKSHINA KANNADA HOME LATEST NEWS

ವಿಟ್ಲ-ಮಂಗಳೂರು ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಇರ್ಫಾನ್

ಮಂಗಳೂರು: ಖಾಸಗಿ ಬಸ್‌ನ ಕಂಡಕ್ಟರ್‌ನೋರ್ವ ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾದ ಘಟನೆ ಮಂಗಳೂರು-ವಿಟ್ಲ ರೂಟಿನ ಸೆಲೀನಾ ಬಸ್‌ನಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿಯಾದ ಇರ್ಫಾನ್ (32) ಮಂಗಳೂರು-ವಿಟ್ಲ ರೂಟಿನ ಸೆಲೀನಾ ಬಸ್‌ನಲ್ಲಿ ಕಂಡಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಆತ ಜು.9 ರಂದು ಸಂಜೆ ಸುಮಾರು 5:00 ಗಂಟೆಗೆ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶನ ಮಾಡಿದ್ದಾನೆ. ಜೊತೆಗೆ ಅಸಭ್ಯವಾದ […]

DAKSHINA KANNADA HOME LATEST NEWS NATIONAL STATE

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಎಂಟು ಬಾಂಗ್ಲಾದ ಪ್ರಜೆಗಳ ಬಂಧನ

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಮುಹಮ್ಮದ್‌ ಮುಖ್ತಾರ್‌ ಅಲಿ (36), ಮುಹಮ್ಮದ್‌ ರಾಕಿಬುರ್‌ ಹುಸೈನ್‌ (44), ಮುಹಮ್ಮದ್‌ ಅಝರುಲ್‌ ಇಸ್ಲಾಂ (36), ಮುಹಮ್ಮದ್‌ ಝೈದ್‌ ಹುಸನ್‌ (18), ಮುಹಮ್ಮದ್‌ ಬಿಲಾಲ್‌ ಹುಸೈನ್‌ (36), ಮುಹಮ್ಮದ್‌ ಹಾಸಿಬುಲ್‌ ಹಸನ್‌ ಶನ್ಟೊ (37), ಮುಹಮ್ಮದ್‌ ಸಮೀವುಲ್‌ ಹಸನ್‌ (23) ಮತ್ತು […]

HOME LATEST NEWS STATE

ಜುಲೈ 12ರ ಭಾನುವಾರ ಸಬ್‌ರಿಜಿಸ್ಟ್ರಾರ್‌ ಆಫೀಸ್‌ಗಳು ತೆರೆದಿರಲಿವೆ

ಬೆಂಗಳೂರು: ರಾಜ್ಯದಾದ್ಯಂತ ಇರುವ ಎಲ್ಲಾ ಉಪ ನೋಂದಣಿ ಕಚೇರಿಗಳು (Sub-Registrar Offices) 2026 ನೇ ಜುಲೈ 12 ರ ಭಾನುವಾರದಂದು ಸಾರ್ವಜನಿಕ ರಜಾ ದಿನವಾಗಿದ್ದರೂ ಸಹ, ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಇಲಾಖೆಯ ಕಾರ್ಯದೊತ್ತಡ ನಿವಾರಣೆಗಾಗಿ ಎಂದಿನಂತೆ ತೆರೆದಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ​ಈ ದಿನದಂದು ಸಾರ್ವಜನಿಕರು ಎಂದಿನಂತೆ ಆಸ್ತಿ ನೋಂದಣಿ, ಮುದ್ರಾಂಕ ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ವಿಶೇಷ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯು […]

HOME LATEST NEWS UDUPI

ಮಣಿಪಾಲ: ಶಾಲಾ ಬಸ್‌ ಪಲ್ಟಿ- ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯ

ಉಡುಪಿ: ಮಣಿಪಾಲ್ ಸಮೀಪದ ಕೊಡಂಗೆ ಪ್ರದೇಶದಲ್ಲಿ ಜು.10 ರಂದು ಬೆಳಗ್ಗೆ ಶಾಲಾ ಬಸ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಇತರ ಏಳು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಣಿಪಾಲ್‌ನ ಖಾಸಗಿ ಶಾಲೆಗೆ ಸೇರಿದ ಬಸ್ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿರುವ ಓರ್ವ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ […]

LATEST NEWS

ಮಂಗಳೂರಿಗೆ ಆಗಮಿಸಿದ ಕೇರಳ ಮುಖ್ಯಮಂತ್ರಿ ಶ್ರೀ ವಿ.ಡಿ. ಸತೀಶನ್ ಅವರಿಗೆ ಎಂ.ಎಲ್.ಸಿ ಶ್ರೀ ಐವನ್ ಡಿ’ಸೋಜಾ ಅವರಿಂದ ಆತ್ಮೀಯ ಸ್ವಾಗತ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ (MLC) ಶ್ರೀ ಐವನ್ ಡಿ’ಸೋಜಾ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇರಳ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ವಿ.ಡಿ. ಸತೀಶನ್ ಅವರನ್ನು ಭೇಟಿ ಮಾಡಿ, ಪುಷ್ಪಗುಚ್ಛ ನೀಡುವ ಮೂಲಕ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಂದರ್ಶನಕ್ಕಾಗಿ ಕೇರಳ ಮುಖ್ಯಮಂತ್ರಿಗಳು ಮಂಗಳೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು […]

HOME LATEST NEWS

ಮೈಸೂರು ದಸರಾದಲ್ಲಿ ಕಂಬಳ ನಿಶ್ಚಿತ: ಹೈಪವರ್ ಕಮಿಟಿ ಸಭೆಯಲ್ಲಿ ಅಧಿಕೃತ ತೀರ್ಮಾನ ಮುಖ್ಯಮಂತ್ರಿಯನ್ನು ಸನ್ಮಾನಿಸಿದ ಜಿಲ್ಲಾ ಕಂಬಳ ಸಮಿತಿ

ಪುತ್ತೂರು: ಮೈಸುರಿನಲ್ಲಿ ಕಂಬಳ ಆಗುತ್ತದೋ ಇಲ್ಲವೋ ಎಂಬ ಅನುಮಾನ ಕೆಲವರಿಗಿತ್ತು, ಮೈಸೂರಿನ ದಸರಾದಲ್ಲಿ ಕಂಬಳ ಆಯೋಜನೆ ಮಾಡುವುದಕ್ಕೆ ಕೆಲವರ ವಿರೋಧವಿದ್ದದ್ದೇ ಈ ಅನುಮಾನಕ್ಕೆ ಕಾರಣವಾಗಿತ್ತು ಆದರೆ ಈ ಅನುಮಾನಕ್ಕೆ ತೆರೆ ಎಳೆಯಲಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಹೈಪವರ್ ಕಮಿಟಿ ಸಭೆಯಲ್ಲಿ ದಸರಾ ಕಂಬಳ ನಡೆಸುವುದಕ್ಕೆ ತೀರ್ಮಾನ ಮಾಡಲಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆದ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾಗೆ ಕಂಬಳ ಆಯೋಜನೆ ಮಾಡಲಾಗಿದೆ. ವಿಶ್ವಪ್ರಸಿದ್ದಿ ಪಡೆದ ದಸರಾದಲ್ಲಿ ಈ ಬಾರಿ […]

DAKSHINA KANNADA HOME LATEST NEWS

ಪುತ್ತೂರಿನಲ್ಲಿ ಯುವತಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ: ಸುಳ್ಳು ಸುದ್ದಿಯ ವಿರುದ್ಧವೂ FIR

ಪುತ್ತೂರು: ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಘಟನೆ ಬಗ್ಗೆ ಸುಳ್ಳು ಸುದ್ದಿ ಮಾಡಿದ ಹಲವು 7 ವೆಬ್‌ ತಾಣಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ವಿವರ ಪುತ್ತೂರಿನ ಯುವತಿಯೋರ್ವಳು ಜು.8 ರಂದು ಬೆಳಿಗ್ಗೆ 6.45ಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ ತನ್ನ ಪರಿಚಯದ ಹಾಗೂ ತನ್ನೊಂದಿಗೆ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದ ಸೊಹೈಲ್ ಎಂಬಾತನು ಚಾಕು ಹಿಡಿದುಕೊಂಡು ನಿಂತಿರುವುದನ್ನು ನೋಡಿದ್ದಾಳೆ. ಜೊತೆಗೆ ಯುವತಿಯು ತನ್ನನ್ನು ಸೊಹೈಲ್ ಹಾಗೂ ಆತನೊಂದಿದ್ದ 04 ಜನ ಸ್ನೇಹಿತರು […]

DAKSHINA KANNADA HOME LATEST NEWS

ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಜುಲೈ 11ರಿಂದ ಪೊಲೀಸ್ ಹುದ್ದೆಯ ಉಚಿತ ತರಬೇತಿ ಕಾರ್ಯಾಗಾರ ಆರಂಭ

ಪುತ್ತೂರು: ಕರ್ನಾಟಕ ಸರಕಾರ ಸಿವಿಲ್‌ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಮತ್ತು ಮೀಸಲು ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದ್ದು ಶಾಸಕರ ಕಚೇರಿ ಮೂಲಕ ನೋಂದಣಿ ಮಾಡಿದ ಅರ್ಜಿದಾರರಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ಮೇಲಿನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಾಸಕರ ಕಚೇರಿ ಮೂಲಕ ಅರ್ಜಿ ನೋಂದಣಿ ಮಾಡುವಂತೆ ಕೇಳಿಕೊಂಡ ಮೇರೆಗೆ ಅನೇಕ ಮಂದಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದು ಈ ಅಭ್ಯರ್ಥಿಗಳಿಗೆ ವಿವಿಧ ದಿನಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಜುಲೈ […]

DAKSHINA KANNADA LATEST NEWS

ಪುತ್ತೂರು ವಿಧಾನಸಭಾ ಕ್ಷೇತ್ರ: ಪ್ರತೀ ಗ್ರಾಮಕ್ಕೊಂದು ಕೆಪಿಎಸ್ ಶಾಲೆ ಮಂಜೂರು ಮಾಡಿ: ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತನ್ನ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೊಂದರಂತೆ ಕೆಪಿಎಸ್ ಶಾಲೆಯನ್ನು ಮಂಜೂರುಗೊಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಶ್ಮಿ ಮಹೇಶ್ ರವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಇಲಾಖಾ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಮನವಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಬಡ ಮಕ್ಕಳು ಗುಣ ಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಎಲ್ ಕೆ ಜಿ […]