• Home  
  • ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಜುಲೈ 11ರಿಂದ ಪೊಲೀಸ್ ಹುದ್ದೆಯ ಉಚಿತ ತರಬೇತಿ ಕಾರ್ಯಾಗಾರ ಆರಂಭ
- DAKSHINA KANNADA - HOME - LATEST NEWS

ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಜುಲೈ 11ರಿಂದ ಪೊಲೀಸ್ ಹುದ್ದೆಯ ಉಚಿತ ತರಬೇತಿ ಕಾರ್ಯಾಗಾರ ಆರಂಭ

ಪುತ್ತೂರು: ಕರ್ನಾಟಕ ಸರಕಾರ ಸಿವಿಲ್‌ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಮತ್ತು ಮೀಸಲು ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದ್ದು ಶಾಸಕರ ಕಚೇರಿ ಮೂಲಕ ನೋಂದಣಿ ಮಾಡಿದ ಅರ್ಜಿದಾರರಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ಮೇಲಿನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಾಸಕರ ಕಚೇರಿ ಮೂಲಕ ಅರ್ಜಿ ನೋಂದಣಿ ಮಾಡುವಂತೆ ಕೇಳಿಕೊಂಡ ಮೇರೆಗೆ ಅನೇಕ ಮಂದಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದು ಈ ಅಭ್ಯರ್ಥಿಗಳಿಗೆ ವಿವಿಧ ದಿನಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಜುಲೈ […]

Share News

ಪುತ್ತೂರು: ಕರ್ನಾಟಕ ಸರಕಾರ ಸಿವಿಲ್‌ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಮತ್ತು ಮೀಸಲು ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದ್ದು ಶಾಸಕರ ಕಚೇರಿ ಮೂಲಕ ನೋಂದಣಿ ಮಾಡಿದ ಅರ್ಜಿದಾರರಿಗೆ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಕೆಲದಿನಗಳ ಹಿಂದೆ ಮೇಲಿನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಾಸಕರ ಕಚೇರಿ ಮೂಲಕ ಅರ್ಜಿ ನೋಂದಣಿ ಮಾಡುವಂತೆ ಕೇಳಿಕೊಂಡ ಮೇರೆಗೆ ಅನೇಕ ಮಂದಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದು ಈ ಅಭ್ಯರ್ಥಿಗಳಿಗೆ ವಿವಿಧ ದಿನಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಜುಲೈ ೧೧, ೧೨ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪ್ರಥಮ ಸುತ್ತಿನ ಲಿಖಿತ ಪರೀಕ್ಷೆಯ ತರಬೇತಿ ಕಾರ್ಯಾಗಾರ ನಡೆಯಲಿದೆ.ಜುಲೈ ೧೯ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆಯ ತರಬೇತಿ ಹಾಗೂ ಜುಲೈ ೨೫ ಮತ್ತು ೨೬ ರಂದು ತೃತೀಯ ಸುತ್ತಿನ ಲಿಖಿತ ಪರೀಕ್ಷಾ ಕಾರ್ಯಾಗಾರ ನಡೆಯಲಿದೆ. ಉತ್ತಮ ತರಬೇತುದಾರರಿಂದ ಈ ಕಾರ್ಯಾಗಾರ ನಡೆಯಲಿದೆ. ಪರೀಕ್ಷೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಶಾಸಕರ ಕಚೇರಿಯಲ್ಲಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಈ ಅವಕಾಶವನ್ನು ಕಲ್ಪಿಸಲಾಗಿದ್ದು ಶಾಸಕ ಅಶೋಕ್ ರೈ ನೇತೃತ್ವದ ರೈ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಹೆಚ್ಚಿನ ಮಾಹಿತಿಗಾಗಿ ಶಾಸಕರ ಕಚೇರಿ ಸಂಪರ್ಕ ಮಾಡಬಹುದು> ಮೊಬೈಲ್ ನಂಬರ್೯೯೦೦೪೭೭೫೨೮ ಹಾಗೂ ೮೯೦೪೭೦೭೯೬೯ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

Share News