Tag: ಕೆನರಾಟಿವಿ

DAKSHINA KANNADA HOME LATEST NEWS

ಸುಳ್ಯದಲ್ಲಿ ತಾಯಿ-ಮಗ ವಿಷ ಸೇವನೆ: ಕೊನೆಯುಸಿರೆಳೆದ ಮಗ

ಸುಳ್ಯ: ಇಲಿ ಪಾಷಾಣ ಸೇವಿಸಿ ತಾಯಿ-ಮಗ ಆತ್ಮಹತ್ಯೆಗೆ ಯತ್ನಿಸಿದ ಘಟನೆ  ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ನಡೆದಿದೆ. ಇದರಲ್ಲಿ ಮಗ ಮೃತಪಟ್ಟಿದ್ದಾನೆ. ಮೃತಪಟ್ಟವನನ್ನು ನಾಲ್ಕೂರು ಗ್ರಾಮದ ನಡುಗಲ್ಲಿನ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಎಂಬವರ ಮಗ ನಿತಿನ್ (32) ಎಂದು ಗುರುತಿಸಲಾಗಿದೆ. ತಾಯಿ-ಮಗ ಇಬ್ಬರು ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಾರೆ ಎನ್ನಲಾಗಿದ್ದು ರವಿವಾರ ಮುಂಜಾನೆ ಇಬ್ಬರೂ ಅಸ್ವಸ್ಥಗೊಂಡಿರುವುದು ತಿಳಿದು ಬಂದಿದೆ. ಈ ಪೈಕಿ ನಿತಿನ್ ಸ್ವಲ್ವ ಹೊತ್ತಿನಲ್ಲೇ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಸುಲೋಚನಾರನ್ನು […]

DAKSHINA KANNADA HOME LATEST NEWS

ಕ್ರೈಸ್ತರ ಪವಿತ್ರವಾರದಲ್ಲಿ SSLC ಮೌಲ್ಯಮಾಪನ ರದ್ದು ಕೋರಿ ಕಥೋಲಿಕಾ ಸಭಾದಿಂದ ಮನವಿ

ಮಂಗಳೂರು: SSLC ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 15, 2025ರಿಂದ ಪ್ರಾರಂಭವಾಗಲಿದೆ. ಅಂದು ಕ್ರೈಸ್ತ ಸಮುದಾಯಕ್ಕೆ ಶುಭ ಗುರುವಾರ ಸೇರಿದಂತೆ ಮೂರು ದಿನಗಳ ನಿರಂತರ ಹಬ್ಬದ ಪ್ರಯುಕ್ತ ಕ್ರೈಸ್ತ ಶಿಕ್ಷಕರಿಗೆ ಮೌಲ್ಯಮಾಪನದಿಂದ ರಿಯಾಯಿತಿ ಕೋರುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ. ಕಳೆದ ಶನಿವಾರ ಮನವಿ ಸಲ್ಲಿಸಿದ ನಿಯೋಗ, ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಶಿಕ್ಷಕರಿದ್ದು, ಏ.15 ಹಾಗೂ ಮೂರು ದಿನಗಳ ಕಾಲ ನಡೆಯುವ […]

DAKSHINA KANNADA HOME LATEST NEWS

ನಂಬರ್‌ ಪ್ಲೇಟ್‌ಗೆ ಪ್ಲಾಸ್ಟಿಕ್‌ ಮುಚ್ಚಿ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ದಂಡ

ಮಂಗಳೂರು: ಸ್ಕೂಟರ್ ಸವಾರನೊಬ್ಬ ತನ್ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ಹೆಲ್ಮೆಟ್ ಧರಿಸದೆ ಚಲಾಯಿಸುತ್ತಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸದ್ಯ ಈ ಪ್ರಕರಣದಲ್ಲಿ ವೈರಲ್‌ ಆಗಿದ್ದ ಸ್ಕೂಟರ್‌ನ್ನು ಪತ್ತೆಹಚ್ಚಿದ ಮಂಗಳೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ. ಮಾ.23ರಂದು ಸಂಜೆ 4 ಗಂಟೆಯಿಂದ 4:10ರ ಸಮಯಕ್ಕೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ  ಮುಚ್ಚಿ  ಹೆಲ್ಮೆಟ್ ಧರಿಸದೆ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು […]

DAKSHINA KANNADA HOME LATEST NEWS

ಮಂಗಳೂರು: ಭಿಕ್ಷಾಟನೆ- ತಾಯಿ ಮಕ್ಕಳ ರಕ್ಷಣೆ

ಮಂಗಳೂರು : ಪುಟ್ಟ ಮಕ್ಕಳನ್ನು ಹಿಡಿದುಕೊಂಡು ನಗರದ ಲಾಲ್‍ಬಾಗ್ ಜಂಕ್ಷನ್ ಸಿಗ್ನಲ್ ಬಳಿ ಬಿಕ್ಷಾಟನೆ ನಡೆಸುತ್ತಿದ್ದ ತಾಯಿ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪತ್ತೆ ಹಚ್ಚಿ ಅವರ ಊರುಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮಕ್ಕಳ ರಕ್ಷಣಾ ಘಟಕ ಪೋಲೀಸರ ಸಹಯೋಗದೊಂದಿಗೆ ಲಾಲ್‍ಬಾಗ್ ಸಿಗ್ನಲ್ ಬಳಿ ಭಿಕ್ಷಾಟನೆ ನಡೆಸುತ್ತಿದ್ದ 4 ಮಹಿಳೆಯರು, 4 ಪುರುಷರು, 4 ಮಕ್ಕಳನ್ನು ರಕ್ಷಣೆ ಮಾಡಿ ಅವರ ಸ್ವಂತ ಊರು ರಾಜಸ್ಥಾನಕ್ಕೆ ರೈಲಿನ ಮೂಲಕ ಕಳುಹಿಸಿಕೊಡಲಾಯಿತು. ಹೆಂಗಸರು […]

DAKSHINA KANNADA HOME LATEST NEWS

ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ & ಸಿಬ್ಬಂದಿಗೆ ಅಭಿನಂದನೆ

ಮಂಗಳೂರು: ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಿನ್ನೆ ಸಂಜೆ ನಡೆಯಿತು. ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಾದಕ ವಸ್ತು ಗಳನ್ನು ಪತ್ತೆ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತೀ ಉತ್ತಮ ಮತ್ತು ಶ್ಲಾಘನೀಯ ಕರ್ತವ್ಯ ನಿರ್ವಹಿಸಿ 2024 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಎಸಿಪಿ ಧನ್ಯಾ ನಾಯಕ್, […]

DAKSHINA KANNADA HOME LATEST NEWS STATE

ಏ.6ರಂದು ಧರ್ಮಸ್ಥಳದಲ್ಲಿ ಸೌಜನ್ಯ ಹೆಸರಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ತಡೆ

ಬೆಂಗಳೂರು: ‘ಸೌಜನ್ಯ ಸಾವಿಗೆ ನ್ಯಾಯ ದೊರಕಿಸುವ ಹೆಸರಲ್ಲಿ ಏ.6ರಂದು ಧರ್ಮಸ್ಥಳದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಏ. 6 ರಂದು ಧರ್ಮಸ್ಥಳಕ್ಕೆ ನುಗ್ಗುವ ಮತ್ತು ದಾಂಧಲೆ ಎಬ್ಬಿಸುವ ದುರುದ್ದೇಶದಿಂದ ಈ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದ ಆಲಿಸಿದ ನ್ಯಾಯಪೀಠ, ‘ಅಪರಾಧ ಮನೋಭಾವದ ವ್ಯಕ್ತಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ವಿಚಾರಗಳಿಗೆ ಸಂಬಂಧಿಸಿದ ಪ್ರತಿಭಟನೆಗಳ ಕುರಿತಂತೆ ಇದೇ ಹೈಕೋರ್ಟ್‌ನ ಸಮನ್ವಯ ನ್ಯಾಯಪೀಠ ನೀಡಿರುವ ಆದೇಶವನ್ನು ಉಲ್ಲಂಘಿಸುವ ಇರಾದೆ […]

DAKSHINA KANNADA HOME LATEST NEWS

ಹೋಟೆಲ್‌ ಮೋತಿ ಮಹಲ್ ಏಪ್ರಿಲ್‌ ಅಂತ್ಯಕ್ಕೆ ಬಂದ್…!

ಮಂಗಳೂರು: ಮಂಗಳೂರಿನ ಮೊದಲ ಬಿಝಿನೆಸ್ ಹೋಟೆಲ್ ಎಂದೇ ಖ್ಯಾತಿ ಪಡೆದಿದ್ದ ಮೋತಿ ಮಹಲ್ ಇದೀಗ ಮುಚ್ಚುವ ಹಂತಕ್ಕೆ ತಲುಪಿದ್ದು, ಎಪ್ರಿಲ್ ಅಂತ್ಯದೊಳಗೆ  ಅದರ ಭೂ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ. ಜಮೀನು ವಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನ  ತೀರ್ಪಿನಂತೆ ಹೋಟೆಲ್ ಮೋತಿಮಹಲ್ ಅನ್ನು ಯಥಾ ಸ್ಥಿತಿಯಲ್ಲಿ ಜಮೀನಿನ ಮಾಲಕರಿಗೆ ಬಿಟ್ಟುಕೊಡಬೇಕಾಗಿದೆ. ಇದರೊಂದಿಗೆ 3 ಕೋಟಿ ರೂ. ಮೊತ್ತದ ಪರಿಹಾರಧನವನ್ನು ಅವರಿಗೆ ಪಾವತಿಸಬೇಕಾಗಿದೆ.   ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಪಕ್ಕದಲ್ಲಿರುವ ಹೋಟೆಲ್ ಮೋತಿಮಹಲ್ ಇರುವ ಜಮೀನಿನ ಒಡೆತನವು ಸದ್ಯ  ಜೆಪ್ಪುವಿನ ಸಂತ ಅಂಥೋನಿ ವೃದ್ಧಾಶ್ರಮಕ್ಕೆ […]

DAKSHINA KANNADA HOME LATEST NEWS

ಕಾಲೇಜಿಗೆ ಹೋಗುತ್ತಿದ್ದ ಯುವಕ ನಾಪತ್ತೆ

ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಬಿಹಾರ ಮೂಲದ ಸುಧಾಂಶುಕುಮಾರ (21 ) ಎಂಬವರು ಕಾಣೆಯಾಗಿದ್ದಾರೆ. `ಕಾಣೆಯಾದವರ ಚಹರೆ : ಸುಮಾರು 5.6 ಅಡಿ, ಸಾಧಾರಣ ಶರೀರ, ಗೋದಿ ಮೈ ಬಣ್ಣ ಹೊಂದಿರುತ್ತಾರೆ. ಕಾಣೆಯಾದ ದಿನ ಕೆಂಪು ಬಣ್ಣದ ಟಿ ಶರ್ಟ್, ಬರ್ಮುಡ ಪ್ಯಾಂಟ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೆÇಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

HOME LATEST NEWS

ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಏ.5ರಂದು ಮೂಡಪ್ಪ ಸೇವೆ

ಕಾಸರಗೋಡು: ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಏ.5ರಂದು ಮೂಡಪ್ಪ ಸೇವೆ ನಡೆಯಲಿದೆ. ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಗುರುವಾರ ಸಿದ್ಧತೆ ನಡೆದಿದೆ. ದೀಪದ ಬಲಿ, ದರ್ಶನ ಬಲಿ, ಶತರುದ್ರಾಭಿಷೇಕ, 128 ತೆಂಗಿನಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮೂಡಪ್ಪ ಸೇವೆಯ ದ್ರವ್ಯಗಳ ಆಗಮನ, ದ್ರವ್ಯ ಪೂಜೆ ನಡೆದಿವೆ. ಪ್ರಧಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾಮಕೃಷ್ಣ ಕಾಟುಕುಕ್ಕೆ ಬಳಗದಿಂದ ದಾಸಭಕ್ತಿ ಸಂಕೀರ್ತನೆ, ಬದಿಯಡ್ಕ ವಾಣಿಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.‌  

HOME LATEST NEWS NATIONAL

ಪತಿ ಮುಂದೆಯೇ ಸಾಮೂಹಿಕ ಅ*ತ್ಯಾಚಾರ ಪ್ರಕರಣ: 8 ಮಂದಿಗೆ ಜೀವಾವಧಿ ಶಿಕ್ಷೆ

ಮಧ್ಯಪ್ರದೇಶ: ನವವಿವಾಹಿತೆಯನ್ನು ಆಕೆಯ ಪತಿಯೊಂದಿಗೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ 8 ಅಪರಾಧಿಗಳಿಗೆ ಮಧ್ಯಪ್ರದೇಶದ ರೇವಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ ₹2,30,000 ದಂಡ ಹಾಕಿದೆ. ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಜಾಧವ್ ಅವರು ಎಂಟು ಆರೋಪಿಗಳಾದ ರಾಮಕಿಶನ್, ಗರುಡ್ ಕೋರಿ, ರಾಕೇಶ್ ಗುಪ್ತಾ, ಸುಶೀಲ್ ಕೋರಿ, ರಜನೀಶ್ ಕೋರಿ, ದೀಪಕ್ ಕೋರಿ, ರಾಜೇಂದ್ರ ಕೋರಿ ಮತ್ತು ಲವ್‌ಕುಶ್ ಕೋರಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಪಿಟಿಐ […]

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678