ಕ್ರೈಸ್ತ ಯುವತಿಯ ಕಿಡ್ನಾಪ್ ಕೇಸ್: ಹೈಕೋರ್ಟ್ ಮೊರೆ ಹೋದ ಪೋಷಕರು
ಉಡುಪಿ: ಕ್ರೈಸ್ತ ಧರ್ಮದ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಇದರ ಮಧ್ಯೆ ಇವರಿಬ್ಬರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಘಟನೆ ವಿವರ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಂತೆ ತನ್ನ ಮಗಳು ಜಿನ ಮೆರಿಲ್ (19) ಎಂಬಾಕೆಯನ್ನು ಮುಹಮ್ಮದ್ ಅಕ್ರಮ್ ಎಂಬಾತ ಅಪಹರಿಸಿರುವುದಾಗಿ ಯುವತಿ ತಂದೆ ಗೋಡ್ವಿನ್ ದೇವದಾಸ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ […]