Tag: ಕಡಬ

DAKSHINA KANNADA HOME LATEST NEWS

ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆ ಮಗುಚಿ ಬಿದ್ದು ಸಾವು

ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆಯೇ ಮಗುಚಿ ಬಿದ್ದ ಪರಿಣಾಮ ತಂದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಡಬ ತಾಲೂಕಿನ  ಬಿಳಿನೆಲೆ ಗ್ರಾಮದಲ್ಲಿ ಆ.7 ರಂದು ನಡೆದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಕಡಬ ತಾಲೂಕಿನ  ಬಿಳಿನೆಲೆ ಗ್ರಾಮದ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ದಿನೇಶ್ ಎಂಬುವವರು ಕೆಎ- 19-ಎಂ-8745 ನೋಂದಣಿಯ ಜೀಪು ಚಲಾಯಿಸುತ್ತಿದ್ದಾಗ ಹತ್ತದೇ ಅರ್ಧದಲ್ಲಿ ನಿಂತಿದೆ. ಆಗ ಜೀಪಲ್ಲಿ ಇದ್ದ ಅವರ ದಿನೇಶ್  ಅವರ ತಂದೆ ಧರ್ಮಪಾಲ […]

DAKSHINA KANNADA HOME LATEST NEWS

ಕಡಬ, ನೆಲ್ಯಾಡಿ ಗಾಳಿ- ಸಿಡಿಲು ಸಹಿತ ಭಾರೀ ಮಳೆ: ವಿದ್ಯುತ್‌ ಸಂಪರ್ಕ ಕಡಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆ ವೇಳೆಗೆ ವರುಣ ತಂಪೆರೆದಿದ್ದಾನೆ. ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ನೆಲ್ಯಾಡಿ, ಪುತ್ತೂರಿನಲ್ಲಿ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಭಾರೀ ಗಾಳಿಯ ಪರಿಣಾಮ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಂಗಳೂರು ನಗರದ ಸುತ್ತಮುತ್ತ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ.