DAKSHINA KANNADAHOMELATEST NEWS

ಉಪ್ಪಿನಂಗಡಿ: ಮಂಚದ ಕೆಳಗೆ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ವೃದ್ಧ ಪತ್ತೆ

ಉಪ್ಪಿನಂಗಡಿ: 73ರ ವರ್ಷದ ವೃದ್ದರೋರ್ವರು ಮಂಚದ ಕೆಳಗೆ ಗಾಯಗೊಂಡು ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೂರಿನಲ್ಲಿ ಏನಿದೆ?

ಕಡಬ ತಾಲೂಕಿನ ಕೆ.ವಿ. ತೋಮಸ್ ಅವರು ಫೆ.8 ರಂದು ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ 8:00 ಗಂಟೆಗೆ ಹತ್ತಿರದಲ್ಲೇ ಇದ್ದ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಈ ವೇಳೆ ತೋಮಸ್ ಅವರ 73 ವರ್ಷದ ತಂದೆ ಮನೆಯಲ್ಲಿ ಒಬ್ಬರೇ ಇದ್ದರು. ಅಂದು ರಾತ್ರಿ 11:00 ಗಂಟೆಗೆ ಕಡಬದಮನೆಗೆ ಬಂದಾಗ ಬಾಗಿಲು ತೆರೆಯಲ್ಪಟ್ಟಿರುವುದನ್ನು ಗಮನಿಸಿ ಒಳಗೆ ಪರಿಶೀಲಿಸಿದಾಗ,

ತಂದೆ ಕೆ.ಸಿ. ವರ್ಗೀಸ್ ಅವರು ಮಂಚದ ಕೆಳಗೆ ತಲೆಗೆ ರಕ್ತಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವರನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News