Tag: ಕಡಬ

DAKSHINA KANNADA HOME LATEST NEWS

ಉಪ್ಪಿನಂಗಡಿ: ಮಂಚದ ಕೆಳಗೆ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ವೃದ್ಧ ಪತ್ತೆ

ಉಪ್ಪಿನಂಗಡಿ: 73ರ ವರ್ಷದ ವೃದ್ದರೋರ್ವರು ಮಂಚದ ಕೆಳಗೆ ಗಾಯಗೊಂಡು ಮೃತಪಟ್ಟ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೂರಿನಲ್ಲಿ ಏನಿದೆ? ಕಡಬ ತಾಲೂಕಿನ ಕೆ.ವಿ. ತೋಮಸ್ ಅವರು ಫೆ.8 ರಂದು ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ 8:00 ಗಂಟೆಗೆ ಹತ್ತಿರದಲ್ಲೇ ಇದ್ದ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಈ ವೇಳೆ ತೋಮಸ್ ಅವರ 73 ವರ್ಷದ ತಂದೆ ಮನೆಯಲ್ಲಿ ಒಬ್ಬರೇ ಇದ್ದರು. ಅಂದು ರಾತ್ರಿ 11:00 ಗಂಟೆಗೆ ಕಡಬದಮನೆಗೆ ಬಂದಾಗ […]

DAKSHINA KANNADA HOME LATEST NEWS UDUPI

ಹಿಂದೂ ಮಹಿಳೆ-ಮುಸ್ಲಿಂ ಯುವಕನ ಕುರಿತು ವ್ಯಂಗ್ಯ ಪೋಸ್ಟ್‌: ಇಬ್ಬರ ಬಂಧನ

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ವಿವಾಹಿತೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆಯ ನಿತೇಶ್ ಕೆ. (20) ಎಂಬಾತನನ್ನು ಪುತ್ತೂರು ತಾಲೂಕು ಕಲ್ಲಬ್ಬ ಜಂಕ್ಷನ್ ಬಳಿ ಜ.30ರಂದು ಹಾಗೂ ಕಡಬ ತಾಲೂಕು ಗುಂಡ್ಯ ಸಿರಿಬಾಗಿಲು ಗ್ರಾಮದ ಹಿತೇಶ್ ಎ.(19) ಎಂಬಾತನನ್ನು ಫೆ.1ರಂದು ಮಂಗಳೂರಿನ ಲಾಲ್‌ಬಾಗ್ ಬಳಿ ಪ್ರಕರಣಕ್ಕೆ […]

DAKSHINA KANNADA HOME LATEST NEWS

ಕಡಬ: ಪೋಲ್ಯಾಂಡ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ದಂಪತಿಯಿಂದ ₹ 5 ಲಕ್ಷ ದೋಖಾ

ಕಡಬ: ಪೋಲೆಂಡ್ ದೇಶದಲ್ಲಿ ಉದ್ಯೋಗ ವೀಸಾ ಕಲ್ಪಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.50 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ದಂಪತಿ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ  ಮನೋಜ್ ಎಂಬುವವರು ವಿದೇಶದಲ್ಲಿ ಉದ್ಯೋಗ ಹುಡುಕುತ್ತಿದ್ದರು. ಈ ವೇಳೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ಇಂಜಿರ ನಿವಾಸಿಗಳಾದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಅವರ ಪತ್ನಿ ಸ್ಮಿತಾ ಮನೋಜ್ ಎಂಬವರ ಪರಿಚಯವಾಗಿದೆ. ಈ ವೇಳೆ “ಪೋಲೆಂಡ್ […]

DAKSHINA KANNADA HOME LATEST NEWS

ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆ ಮಗುಚಿ ಬಿದ್ದು ಸಾವು

ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆಯೇ ಮಗುಚಿ ಬಿದ್ದ ಪರಿಣಾಮ ತಂದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಡಬ ತಾಲೂಕಿನ  ಬಿಳಿನೆಲೆ ಗ್ರಾಮದಲ್ಲಿ ಆ.7 ರಂದು ನಡೆದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಕಡಬ ತಾಲೂಕಿನ  ಬಿಳಿನೆಲೆ ಗ್ರಾಮದ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ದಿನೇಶ್ ಎಂಬುವವರು ಕೆಎ- 19-ಎಂ-8745 ನೋಂದಣಿಯ ಜೀಪು ಚಲಾಯಿಸುತ್ತಿದ್ದಾಗ ಹತ್ತದೇ ಅರ್ಧದಲ್ಲಿ ನಿಂತಿದೆ. ಆಗ ಜೀಪಲ್ಲಿ ಇದ್ದ ಅವರ ದಿನೇಶ್  ಅವರ ತಂದೆ ಧರ್ಮಪಾಲ […]

DAKSHINA KANNADA HOME LATEST NEWS

ಕಡಬ, ನೆಲ್ಯಾಡಿ ಗಾಳಿ- ಸಿಡಿಲು ಸಹಿತ ಭಾರೀ ಮಳೆ: ವಿದ್ಯುತ್‌ ಸಂಪರ್ಕ ಕಡಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆ ವೇಳೆಗೆ ವರುಣ ತಂಪೆರೆದಿದ್ದಾನೆ. ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ನೆಲ್ಯಾಡಿ, ಪುತ್ತೂರಿನಲ್ಲಿ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಭಾರೀ ಗಾಳಿಯ ಪರಿಣಾಮ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಂಗಳೂರು ನಗರದ ಸುತ್ತಮುತ್ತ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ.