Tag: ಮಂಗಳೂರು

DAKSHINA KANNADA HOME

ಪೆರುವಾಯಿ ಗ್ರಾ.ಪಂ. ಅಭಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ

ಪೆರುವಾಯಿ ಗ್ರಾಮ ಪಂಚಾಯತ್ ನ ಅಭಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಮತ್ತು ಪರಿವರ್ತನೆ ಕಾರ್ಯಕ್ರಮದಡಿಯಲ್ಲಿ “ಮಾದಕ ವ್ಯಸನ ವಸ್ತು ಮುಕ್ತ ಕರ್ನಾಟಕ” ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ನ ಸಂಗಮ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಬಿಸ ಇವರು ಮಾತಾಡಿ ಎಲ್ಲಾ ಮನೆಗಳಿಂದ ಒಣಕಸ ವನ್ನು ಘನತ್ಯಾಜ್ಯ ಘಟಕದ ವಾಹನಕ್ಕೆ ನೀಡುವಂತೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷರಾದ ಶರ್ಮಿಳಾ ಅಧ್ಯಕ್ಷೆ ವಹಿಸಿದ್ದರು. MBK ವನಿತಾ ರವರು ವಾರ್ಷಿಕ ವರದಿ ಮತ್ತು ಜಮಾ-ಖರ್ಚು ನ್ನು ಮಂಡಿಸಿದರು. […]

DAKSHINA KANNADA HOME

ಗಣೇಶೋತ್ಸವ ಧಾರ್ಮಿಕ ಸಭೆಗಳಿಗೆ ಮಾತ್ರ ಸೀಮಿತವಾಗದಿರಲಿ: ಸಂಸದ ಚೌಟ

ಮಂಗಳೂರು: ಗಣೇಶ ಚತುರ್ಥಿಗೆ ಐತಿಹಾಸಿಕ ಹಿನ್ನಲೆ ಇದೆ. ಪರಕೀಯರನ್ನು ದೂರ ಮಾಡಿದ ಶಕ್ತಿ ಗಣೇಶನಿಗೆ ಇದೆ. ಹೀಗಾಗಿ ಗಣೇಶೋತ್ಸವ ಸಮಾರಂಭದಲ್ಲಿ ಶಿಸ್ತು ಶ್ರದ್ದೆ ಮುಖ್ಯ. ಗಣೇಶೋತ್ಸವ ಕೇವಲ ಧಾರ್ಮಿಕ ಸಭೆ ಸಮಾರಂಭಗಳಿಗೆ ಸೀಮಿತವಾಗದಿರಲಿ. ಗಣೇಶೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ನಗರವನ್ನು ಸ್ವಚ್ಛ ಸುಂದರವನ್ನಾಗಿಸಲು ಪಣ ತೊಡೋಣ. ನಮಗೆ ಪರಿಸರ ಕಾಳಜಿಯೂ ಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ […]

DAKSHINA KANNADA HOME LATEST NEWS

ಅಡಿಕೆ ಸೇರಿ 28 ವಾಣಿಜ್ಯ ಬೆಳೆ ಕೃಷಿ ಇಲಾಖೆಯಡಿ ತರಲು ಪ್ರಯತ್ನ: ಅಶೋಕ್ ರೈ

ವಿಟ್ಲ: ಅಡಿಕೆ ಸೇರಿ 28 ವಾಣಿಜ್ಯ ಬೆಳೆಗಳನ್ನು ಕೃಷಿ ಇಲಾಖೆಯಡಿ ತರುವ ಭಾಗವಾಗಿ ಮನವಿ ಕೇಂದ್ರಕ್ಕೆ ಸಲ್ಲಿಸಲಾಗಿದೆ ಆಗ ಬೆಳೆಗಾರರಿಗೆ ಸರಕಾರದ ಸೌಲಭ್ಯ ಸಿಗುತ್ತದೆ. ಅಡಿಕೆ ಬೆಳೆ ಕೊಳೆರೋಗದಿಂದ ನಾಶವಾಗಿ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ರೈತರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು. ಅವರು ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ವಿಟ್ಲದ ಭಗವತಿ ದೇವಸ್ಥಾನದ ಸಭಾಭವನದಲ್ಲಿ ಆತ್ಮ ಯೋಜನೆ ತಾಂತ್ರಿಕ […]

DAKSHINA KANNADA HOME LATEST NEWS

ಮಂಗಳೂರು:  ಆ. 31ರಂದು ಕಲ್ಲಚ್ಚು ಪ್ರಶಸ್ತಿ ಪ್ರದಾನ

ಮಂಗಳೂರು:  ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳ್ಳಿ ಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ” ಕಲ್ಲಚ್ಚು ಪ್ರಕಾಶನದ” 16 ನೇ ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭ ಅಗಸ್ಟ್ 31 ಭಾನುವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಕರ್ನಾಟಕದ ಪಂಚ ಸಾಧಕರಾದ ಡಾ. ಎಸ್ ಎಮ್ ಶಿವಪ್ರಕಾಶ್, ಜಬೀವುಲ್ಲಾ ಎಂ […]

DAKSHINA KANNADA HOME

ಮೆರ್ಸಿನ್ ಮಾತೆ ಇಗರ್ಜಿ ಪಾನೀರಿನಲ್ಲಿ ಪರಿಸರ ದಿನಾಚರಣೆ & ಸ್ವಚ್ಚತಾ ಅಭಿಯಾನ

ಮಂಗಳೂರು: ಪಾನೀರ್ ಮೆರ್ಸಿನ್ ಮಾತೆಯ ಇಗರ್ಜಿ ಹಳೆ ಚರ್ಚ್ ವಟಾರದಲ್ಲಿ ಭಾನುವಾರ ಪರಿಸರ ದಿನಾಚರಣೆ – ಲಾವ್ದಾತೊ ಸಿ ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಪರಿಸರ ಆಯೋಗ ಹಾಗೂ ಕೃಷಿ ಸಮಿತಿ ಸಂಯುಕ್ತವಾಗಿ ಆಯೋಜಿಸಿತ್ತು. ವಂ. ಫಾ. ವಿಕ್ಟರ್ ಡಿ ಮೆಲ್ಲೋ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಚರ್ಚ್ ಗುರುಗಳು ದೇವರ ಆಶೀರ್ವಾದ ಬೇಡಿ, ಹಣ್ಣು ಹಂಪಲು ಗಿಡಗಳನ್ನು ಹಂಚಿ […]

DAKSHINA KANNADA LATEST NEWS

ಲಕ್ಕಿ ಸ್ಕೀಂ- 13 ಸಾವಿರ ಮಂದಿಗೆ 15 ಕೋ.ರೂ ವಂಚನೆ: ನಾಲ್ವರ ಬಂಧನ

ಮಂಗಳೂರು: ಸುರತ್ಕಲ್‌ ವ್ಯಾಪ್ತಿಯಲ್ಲಿ ಲಕ್ಕಿ ಸ್ಕೀಮ್‌ಗಳ ಮೂಲಕ ಗ್ರಾಹಕರಿಗೆ ನಾನಾ ರೀತಿಯ ಬಹುಮಾನಗಳ ಆಮಿಷ ತೋರಿಸಿ 15ಸಾವಿರ ಮಂದಿಗೆ 15ಕೋಟಿ ರೂ.ಗೂ ಮಿಕ್ಕಿ ಹಣ ಸಂಗ್ರಹ ಮಾಡಿ ಬಳಿಕ ವಂಚನೆಗೈದ ಪ್ರತ್ಯೇಕ ಎರಡು ಪ್ರಕರಣದಲ್ಲಿ ನಾಲ್ವರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ನ್ಯೂ ಶೈನ್‌ ಎಂಟರ್‌ ಪ್ರೈಸಸ್‌ ಎಂಬ ಲಕ್ಕಿ ಸ್ಕೀಮ್‌ನಲ್ಲಿವಂಚನೆ ಮಾಡಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನದ ಬಳಿಯ ನಿವಾಸಿ ಅಹಮ್ಮದ್‌ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ನಝೀರ್‌ ನಾಸೀರ್‌ (39) ಹಾಗೂ […]

DAKSHINA KANNADA HOME LATEST NEWS

ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆ ಮಗುಚಿ ಬಿದ್ದು ಸಾವು

ಕಡಬ: ಮಗ ಚಲಾಯಿಸುತ್ತಿದ್ದ ಜೀಪು ತಂದೆಯ ಮೇಲೆಯೇ ಮಗುಚಿ ಬಿದ್ದ ಪರಿಣಾಮ ತಂದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಡಬ ತಾಲೂಕಿನ  ಬಿಳಿನೆಲೆ ಗ್ರಾಮದಲ್ಲಿ ಆ.7 ರಂದು ನಡೆದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಕಡಬ ತಾಲೂಕಿನ  ಬಿಳಿನೆಲೆ ಗ್ರಾಮದ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ದಿನೇಶ್ ಎಂಬುವವರು ಕೆಎ- 19-ಎಂ-8745 ನೋಂದಣಿಯ ಜೀಪು ಚಲಾಯಿಸುತ್ತಿದ್ದಾಗ ಹತ್ತದೇ ಅರ್ಧದಲ್ಲಿ ನಿಂತಿದೆ. ಆಗ ಜೀಪಲ್ಲಿ ಇದ್ದ ಅವರ ದಿನೇಶ್  ಅವರ ತಂದೆ ಧರ್ಮಪಾಲ […]

DAKSHINA KANNADA HOME LATEST NEWS

ಸ್ನೇಹಿತರೊಂದಿಗೆ ಮಂಗಳೂರಿಗೆ ಹೋಗಿ ಬರುತ್ತೇನೆಂದ 23ರ ಯುವತಿ ನಾಪತ್ತೆ

ಮಂಗಳೂರು: 23 ವರ್ಷದ ಯುವತಿಯೋರ್ವಳು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖೈರುನ್ನಿಸ ಮಹಮ್ಮದ್ ನಾಸೀರ ಎಂಬುವವರ ಮಗಳಾದ ಶಾಹಿನ ಬಾನು  ಆ.7 ರಂದು ನಾನು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ. ತಡರಾತ್ರಿಯಾದರೂ ಮನೆಗೆ ಬಾರದೆ ಇರುವುದರಿಂದ, ಗಾಬರಿಗೊಂಡ ಮನೆಯವರು ನೆರೆಕರೆ ಮನೆಯವರಲ್ಲಿ ವಿಚಾರಿಸಿ ಸುತ್ತ ಮುತ್ತ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಬಗ್ಗೆ […]

DAKSHINA KANNADA HOME LATEST NEWS

ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನ ಕಚೇರಿಗಳಲ್ಲಿ ಶೋಧ

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ರೋಶನ್ ಸಲ್ದಾನ ಮತ್ತಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೊರೇಟ್ ಆಫ್ ಎನ್‌ಫೋರ್ಸ್‌ಮೆಂಟ್ ಮಂಗಳೂರು ಸಬ್ ರೆನಲ್ ಕಚೇರಿಯು ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಗರದ 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಸ್ಟಾಂಪ್ ಟ್ಯೂಟಿಗಾಗಿ ಹಣ ವಸೂಲಿ ಮಾಡಿ, ಭರವಸೆ ನೀಡಿದ ಸಾಲಗಳನ್ನು ನೀಡದೆ ವಂಚನೆ ಮಾಡಿದ ರೋಶನ್ ಸಲ್ದಾನ, ಆತನ ಪತ್ನಿ ಡಫ್ನಿ ನೀತು ಡಿಸೋಜ ಮತ್ತಿತರರ ವಿರುದ್ಧ ಕಾನೂನು […]

DAKSHINA KANNADA HOME LATEST NEWS NATIONAL

ಛತ್ತೀಸ್‌ಗಡ: ಮತಾಂತರ ಆರೋಪದಲ್ಲಿ ಬಂಧಿತರಾಗಿದ್ದ ಕ್ರೈಸ್ತ ಸನ್ಯಾಸಿನಿಯರಿಗೆ ಜಾಮೀನು

ರಾಯ್ಪುರ್: ಆದಿವಾಸಿಗಳನ್ನು ಮತಾಂತರಗೊಳಿಸಿ, ಅವರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಎನ್‌ಐಎ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಶುಕ್ರವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎನ್ಐಎ ನ್ಯಾಯಾಲಯ) ಸಿರಾಜುದ್ದೀನ್ ಖುರೇಷಿ, ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.ಶನಿವಾರ ತೀರ್ಪು ಪ್ರಕಟಿಸಿದ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯ, ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಹಾಗೂ ಛತ್ತೀಸ್ ಗಢದ ಓರ್ವ ಆದಿವಾಸಿ ಯುವಕನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ […]