Tag: ಮಂಗಳೂರು

DAKSHINA KANNADA HOME LATEST NEWS

ಪಿಲಿಕುಳ ಎಂದಿನಂತೆ ವೀಕ್ಷಣೆಗೆ ಮುಕ್ತ: ಸುಳ್ಳು ಸುದ್ದಿಗೆ ಆಯುಕ್ತರಿಂದ ಸ್ಪಷ್ಟನೆ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ನಿರ್ವಹಣೆಯ ಬಗ್ಗೆ ಸ್ವೀಕೃತವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದುವರೆಗೆ ಯಾವುದೇ ತೀರ್ಪು/ನಿರ್ದೇಶನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿರುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಪಿಲಿಕುಳ ಜೈವಿಕ ಉದ್ಯಾನವನವು ಎಂದಿನಂತೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಸ್ಪಷ್ಟನೆ ನೀಡಿದೆ.

DAKSHINA KANNADA HOME LATEST NEWS

ಮಂಗಳೂರು: ಯುವತಿ ಮೃತದೇಹವಿಟ್ಟು ಪ್ರತಿಭಟಿಸಿದ 50 ಮಂದಿ ವಿರುದ್ಧ FIR

ಮಂಗಳೂರು: ನಂತೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಯುವತಿಯ ಮೃತದೇಹವನ್ನಿಟ್ಟು ಪ್ರತಿಭಟಿಸಿದ ಸುಮಾರು 50 ಮಂದಿ ವಿರುದ್ಧ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿಗಳನ್ನು 1) ಅಮೀತ್, ವಿವೇಕನಗರ ಬಲ್ಲಾಳ್ ಭಾಗ್ 2) ಕೀರ್ತನ್ ,ವಿವೇಕನಗರ ಬಲ್ಲಾಳ್ ಭಾಗ್ 3) ನವೀತ್ ವಿವೇಕನಗರ , ಬಲ್ಲಾಳ್ ಭಾಗ್  4) ಭರತ್ ರಾಜ್  ವಿವೇಕನಗರ ಬಲ್ಲಾಳ್ ಭಾಗ್ ,5) ಪವನ್, ವಿವೇಕನಗರ ಬಲ್ಲಾಳ್ ಭಾಗ್ 6) ಲೋಕೆಶ್,ಮಂಗಳಾದೇವಿ,7) ಮನ್ವೀತ್ ಬಲ್ಲಾಳ್ ಭಾಗ್ 8) ಅನೀಲ ಕುಮಾರ್ ಕಂಕನಾಡಿ […]

DAKSHINA KANNADA HOME LATEST NEWS

ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಬೆಳ್ತಂಗಡಿಯ 60ರ ವೃದ್ಧನಿಗೆ 3 ವರ್ಷ ಕಠಿಣ ಸಜೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 60 ವರ್ಷದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತಗತಿ (ಪೊಕ್ಸೊ) ನ್ಯಾಯಾಲಯ–1 ಮೂರು ವರ್ಷಗಳ ಕಠಿಣ ಸಜೆ ವಿಧಿಸಿದೆ. ಈ ಪ್ರಕರಣದ ಸಂತ್ರಸ್ತೆಗೆ ₹2 ಲಕ್ಷ ಪರಿಹಾರ ನೀಡಬೇಕು ಎಂದೂ ನ್ಯಾಯಾಧೀಶರಾದ ಮೋಹನ ಜೆ.ಎಸ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಅಪರಾಧಿಯನ್ನು ಶಂಕರ ಗೌಡ (60) ಎಂದು ಗುರುತಿಸಲಾಗಿದೆ. ಪ್ರಕರಣದ ಹಿನ್ನೆಲೆ ಶಂಕರ ಗೌಡ 2025ರ ಮಾ 21ರಂದು 16 ವರ್ಷದ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು […]

DAKSHINA KANNADA HOME LATEST NEWS

ನಂತೂರಿನಲ್ಲಿ ಅಪಘಾತ ಪ್ರಕರಣ: ಶವ ಮುಂದಿಟ್ಟು ಪ್ರತಿಭಟಿಸಿದವರ ವಿರುದ್ದ FIR- ಕಮೀಷನರ್‌

ಮಂಗಳೂರು: ನಗರದ ನಂತೂರಿನಲ್ಲಿ ಬಸ್ಸು ಚಾಲಕನ ಬೇಜವಾಬ್ದಾರಿಯಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಗರ ಖಾಸಗಿ ಬಸ್ಸುಗಳ ಓಡಾಟದ ಧಾವಂತಕ್ಕೆ ಒಂದು ಜೀವ ಹೋಗಿದೆ. ಆರೋಪಿ ಬಸ್ಸು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ಆಗುತ್ತಿದೆ ಎಂದರು. ಇನ್ನು ಮೃತಳ ಪಾರ್ಥೀವ ಶರೀರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ. ಎಲ್ಲವೂ ಕಾನೂನುಬದ್ಧವಾಗಿಯೇ ಆಗುತ್ತದೆ. ನಿರ್ಲಕ್ಷ್ಯಕ್ಕೆ ಏನು ಶಿಕ್ಷೆ […]

HOME INETRNATIONAL

UAE ಸೇರಿ ಗಲ್ಫ್‌ ರಾಷ್ಟ್ರಗಳ ಭಾರತೀಯರಿಗೆ ಟಿಕೆಟ್‌ ಆಫರ್‌ ಘೋಷಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಭಾರತ ನಡುವಿನ ವಿಮಾನ ಪ್ರಯಾಣ 2026ರಲ್ಲಿ ಇನ್ನಷ್ಟು ಕೈಗೆಟುವಂತಿದೆ. ಟಾಟಾ ಗ್ರೂಪ್‌ನ ಏರ್ ಇಂಡಿಯಾ ಎಕ್ಸ್‌ಪ್ರೆಸ್, ‘ಎಕ್ಸ್‌ಪ್ರೆಸ್ ಮೋರ್ ಸೇಲ್’ ಎಂಬ ಭಾರೀ ಟಿಕೆಟ್ ಮಾರಾಟವನ್ನು ಆರಂಭಿಸಿದೆ. ಈ ಮಾರಾಟದ ಅಡಿಯಲ್ಲಿ ಯುಎಇ–ಭಾರತ ಮಾರ್ಗಗಳಿಗೆ ಒಂದು ದಿಕ್ಕಿನ ಮೂಲ ದರ ಕೇವಲ AED 320 (ಸುಮಾರು Dh350) ರಿಂದ ಲಭ್ಯವಿದ್ದು, ಲಕ್ಷಾಂತರ ವಲಸಿಗರು, ಕುಟುಂಬಗಳು ಹಾಗೂ ಬಜೆಟ್ ಪ್ರವಾಸಿಗರಿಗೆ ಮಹತ್ತರ ಲಾಭವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಏರ್ ಇಂಡಿಯಾ […]

HOME LATEST NEWS NATIONAL STATE

ಗಗನದತ್ತ ಚಿನ್ನದ ಬೆಲೆ..!: 17,000 ರೂ. ಗಡಿ  ದಾಟಿದ ಚಿನ್ನ- ಬೆಳ್ಳಿಯೂ ದುಬಾರಿ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ನಿನ್ನೆ ಅಕ್ಷರಶಃ ಗಗನ ಮುಟ್ಟಿದೆ. ಇತ್ತೀಚಿನ ವರ್ಷಗಳಲ್ಲೇ ಒಂದೇ ದಿನದಲ್ಲಿ ಚಿನ್ನ ಕಂಡ ಅತಿಹೆಚ್ಚು ಏರಿಕೆ ಇದು. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 16,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 17,000 ರೂ  ದಾಟಿ 18,000 ರೂನತ್ತ ಸಾಗುತ್ತಿದೆ. ಬೆಳ್ಳಿ ಬೆಲೆ ಇನ್ನೂ ದೊಡ್ಡ ಜಿಗಿತ ಕಾಣುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,63,950 ರುಪಾಯಿ ಇದೆ. 24 ಕ್ಯಾರಟ್​ನ […]

DAKSHINA KANNADA HOME LATEST NEWS STATE

ಎಚ್ಚರಿಕೆ: ಇಂದಿನಿಂದ ಜ.31ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಮುನ್ಸೂಚನೆ

ಮಂಗಳೂರು:- ಹವಾಮಾನ ಮುನ್ಸೂಚನೆಯಂತೆ ಜನವರಿ 27 ರಿಂದ 31 ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಬೀಸುವುದರಿಂದ ಸಮುದ್ರವು ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರು ಜಾಗರೂಕತೆ ವಹಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

DAKSHINA KANNADA HOME LATEST NEWS STATE

ಪೌರಾಯುಕ್ತೆಗೆ ಧಮ್ಕಿ ಹಾಕಿದ ಕೈ ಮುಖಂಡನಿಗೆ ಆಶ್ರಯ ನೀಡಿದ ಮೈಕಲ್ ರೇಗೊಗೆ ಜಾಮೀನು

ಬೆಂಗಳೂರು:  ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡನನ್ನು ಬಂಧಿಸಲಾಗಿದೆ. ಕಳೆದ 14 ದಿನಗಳಿಂದ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನೆ(ಜನವರಿ 26) ಕೇರಳದ ಗಡಿಭಾಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಪೊಲೀಸರು ಆರೋಪಿ ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕರೆತಂದಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿ ಕೋರ್ಟ್​​​ ಮುಂದೆ ಹಾಜರುಪಡಿಸಿದರು. ಇದೀಗ ಕೋರ್ಟ್ ರಾಜಿವ್ ಗೌಡನನ್ನು ಜೈಲಿಗೆ ಕಳುಹಿಸಿದೆ. ಮಂಗಳೂರಿನಲ್ಲಿ ಪತ್ತೆಯಾದ ಕಾರು ಹಾಗೂ ಆರೋಪಿ ಕಾಂಗ್ರೆಸ್‌ ಮುಖಂಡ […]

DAKSHINA KANNADA HOME LATEST NEWS

ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಕೋಮುದ್ವೇಷದ ಭಾಷಣ ಆರೋಪ: ಎಫ್‌ಐಆರ್‌

ಪುತ್ತೂರು: ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋಮುಧ್ವೇಶದ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ದ ಪ್ರಕರಣ ದಾಖಲಾಗಿದೆ. ಜೊತೆಗೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಕಾಲೇಜಿನ ಯೂಟ್ಯೂಬ್‌ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣದ ಪುತ್ತೂರಿನ ರಾಮಚಂದ್ರ ಕೆ ಎಂಬವರ ದೂರಿನಂತೆ ಜ.12 ರಂದು ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಆರೋಪಿತರಾದ ಡಾ.ಕಲ್ಲಡ ಪ್ರಭಾಕರ ಭಟ್ ರವರು, ಕಾರ್ಯಕ್ರಮದಲ್ಲಿ ನೆರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರನ್ನು ಉದ್ದೇಶಿಸಿ […]

DAKSHINA KANNADA HOME LATEST NEWS

ಪೆರುವಾಯಿ: ರಸ್ತೆ ಸಂಪರ್ಕವಿಲ್ಲದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್‌ ರೈ

ವಿಟ್ಲ: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಬದಿಯಾರು ಎಂಬಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲದಾಗಿದ್ದು, ಸ್ಥಳೀಯರ ಬೇಡಿಕೆಯ ಮೇರೆಗೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸ್ಥಳಿಯರು ಶಾಸಕರ ಬಳಿ ತೆರಳಿ ತಮಗೆ ರಸ್ತೆ ಇಲ್ಲದಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ರಸ್ತೆಯಾಗಬೇಕಾದರೆ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡಬೇಕಾಗುತ್ತದೆ. ಇಷ್ಟು ವರ್ಷದಲ್ಲಿ ನಾವು ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ. ರಾಜಕೀಯ ನೇತಾರರು ಈ ಹಿಂದೆ ಭರವಸೆಯನ್ನು ಮಾತ್ರ […]