ಕ್ರೈಸ್ತ ಸಮುದಾಯದ ಶಿಕ್ಷಕರಿಗೆ ಮಾಲ್ಯಮಾಪನದಿಂದ ವಿನಾಯಿತಿ
ಮಂಗಳೂರು: ಈ ವಾರದಲ್ಲಿ ಕ್ರೈಸ್ತ ಸಮುದಾಯದ ಈಸ್ಟರ್ ಹಬ್ಬ ಇರುವ ಕಾರಣ ದಕ್ಷಿಣ, ಕನ್ನಡ, ಉಡುಪಿ ಜಿಲ್ಲೆಯ ಕ್ರೈಸ್ತ ಶಿಕ್ಷಕರಿಗೆ ಏ.17, 18 ಹಾಗೂ ಏ.20 ರಂದು ಎಸ್ಸ್ಎಸ್‌ಎಲ್‌ಸಿ ಮೌಲ್ಯಮಾಪನದಿಂದ ವಿನಾಯಿತಿ ನೀಡಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಸಂಬಂಧ ಕಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಡಿಸೋಜ ಹಾಗೂ ಮಾಜಿ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಮನವಿ ಮಾಡಿದ್ದರು.