Tag: ಕಿಡ್ನಾಪ್‌

DAKSHINA KANNADA HOME LATEST NEWS STATE

ಬೆಳ್ತಂಗಡಿ: ವಿದ್ಯಾರ್ಥಿನಿ ಕಿಡ್ನ್ಯಾಪ್​​ ಕೇಸ್​​ಗೆ ಬಿಗ್​​ ಟ್ವಿಸ್ಟ್- ಹೆತ್ತವರ ಮೇಲೆಯೇ ಕೇಸ್‌….!

ಬೆಳ್ತಂಗಡಿ: ಫೆ.9 ರಂದು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಕಿಡ್ನಾಪ್‌ ಪ್ರಕರಣವೊಂದು ಒಂದೇ ದಿನದಲ್ಲಿ ಟ್ವಿಸ್ಟ್‌ ನೀಡಿದ್ದು, ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಜೊತೆಗೆ ಅಪ್ರಾಪ್ತೆಗೆ ವಾಹನ ಚಲಾಯಿಸಲು ಕೊಟ್ಟಿದ್ದಕ್ಕೆ ಹೆತ್ತವರ ಮೇಲೆಯೇ ಕೇಸ್‌ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಫೆ.9 ರಂದು ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಸ್ಕೂಟರ್ ನಲ್ಲಿ ಪ್ರಯಾಣ ಮಾಡುವಾಗ ಮೂವರು ಮುಸುಕುಧಾರಿಗಳು ಓಮಿನಿ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದಾಗ ಆಕೆಯ ಕೈಗೆ  ಚೂರಿ ಇರಿದು ಪರಾರಿಯಾಗಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಘಟನೆಯಲ್ಲಿ ಗಾಯಗೊಂಡಿದ್ದರಿಂದ […]

HOME LATEST NEWS UDUPI

ಕ್ರೈಸ್ತ ಯುವತಿಯ ಕಿಡ್ನಾಪ್‌ ಕೇಸ್: ಹೈಕೋರ್ಟ್‌ ಮೊರೆ ಹೋದ ಪೋಷಕರು

ಉಡುಪಿ: ಕ್ರೈಸ್ತ ಧರ್ಮದ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಇದರ ಮಧ್ಯೆ ಇವರಿಬ್ಬರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ಘಟನೆ ವಿವರ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಂತೆ ತನ್ನ ಮಗಳು ಜಿನ ಮೆರಿಲ್ (19) ಎಂಬಾಕೆಯನ್ನು ಮುಹಮ್ಮದ್ ಅಕ್ರಮ್ ಎಂಬಾತ ಅಪಹರಿಸಿರುವುದಾಗಿ ಯುವತಿ ತಂದೆ ಗೋಡ್ವಿನ್ ದೇವದಾಸ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ […]

HOME LATEST NEWS UDUPI

ಉಡುಪಿ: ಮುಸ್ಲಿಂ ಯುವಕನಿಂದ ಕ್ರೈಸ್ತ ಯುವತಿಯ ಕಿಡ್ನಾಪ್‌

ಉಡುಪಿ: ಮುಸ್ಲಿಂ ಯುವಕನೋರ್ವ ಕ್ರೈಸ್ತ ಧರ್ಮದ ಯುವತಿಯನ್ನು ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿತ ಮುಸ್ಲಿಂ ಯುವಕ ಉಡುಪಿಯ ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬಾತ ಮಾ. 20 ರಂದು ಕಾಲೇಜಿನಿಂದ ವಾಪಾಸು ಮನೆಗೆ ತೆರಳುತ್ತಿದ್ದಾಗ ಕ್ರೈಸ್ತ ಧರ್ಮಕ್ಕೆ ಸೇರಿದ ಯುವತಿಯ ಅಪಹರಣವಾಗಿದೆ ಎಂದು ತಂದೆ ಗಾಡ್ವಿನ್ ದೇವದಾಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ […]