ಅಳಿಕೆ ಗ್ರಾಮದ 2.07 ಕೋಟಿಯ ವಿವಿಧ ಕಾಮಗಾರಿ ಶಂಕುಸ್ಥಾಪನೆಗೈದ ಶಾಸಕ ಅಶೋಕ್ ರೈ
ವಿಟ್ಲ: ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನಸಭಾ ಕ್ಷೇತ್ರದ ಅಳಿಕೆ ಗ್ರಾಮದ ಒಟ್ಟು 22 ಕಾಮಗಾರಿಗಳಿಗೆ ಪುತ್ತೂರು ಶಾಸಕ ಅಶೋಕ್ ರೈ ಶಂಕುಸ್ಥಾಪನೆ ಮಾಡಿದರು. ಅದೇ ರೀತಿ 2.45 ಲಕ್ಷ ರೂ. ಅನುದಾನದ ಕಾಮಾಗಾರಿಯನ್ನು ಉದ್ಘಾಟಿಸಿದರು. ಈ ವೇಳೆ ಅಳಿಕೆ ಗ್ರಾಮದ ನಿಕಟಪೂರ್ವ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಎಸ್.ಎಸ್. ಮಹಮ್ಮದ್, ಡಾ.ರಾಜಾರಾಮ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಅಳಿಕೆ ಗ್ರಾಮದ ಕಾನತ್ತಡ್ಕ- ಗೋಳಿದಡಿ ರಸ್ತೆ ಅಭಿವೃದ್ದಿಗೆ 10 ಲಕ್ಣ ಅನುದಾನ […]









